ವರದಿ / ಚಿತ್ರ: ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ : ಗ್ರಾಮದಲ್ಲಿ ಆಗಾಗ ಬರುತ್ತಿರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಸ್ಥಳೀಯರು ನಿಗಾ ವಹಿಸಬೇಕು, ಸಂಶಯಾಸ್ಪದ ಜನ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮೂಲ್ಕಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪವನ್ ಕುಮಾರ್ ಕೆರೆಕಾಡು ಹೇಳಿದರು.

ಅವರು ಕಿನ್ನಿಗೋಳಿ ಬಳಿಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಗ್ರಾಮದ ಪೊಲೀಸ್ ಬೀಟ್ ನ ವಿಶೇಷ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಮಾಹಿತಿ ನೀಡಿ, ಹೊರಗಿನಿಂದ ಬರುವ ಮಾದಕ ವ್ಯಸನಿಗಳು, ಅಕ್ರಮವಾಗಿ ಬರುವ ಅಪರಿಚಿತ ವಾಹನಗಳ ಬಗ್ಗೆ ಪೊಲೀಸರು ವಿಶೇಷ ಬೀಟ್ ವ್ಯವಸ್ಥೆ ಯನ್ನು ಮಾಡಬೇಕು, ಸ್ಥಳೀಯವಾಗಿ ಇಲಾಖೆಯು ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು, ಸ್ಥಳೀಯ ಕಲ್ಲಿನ ಕೋರೆಗೆ ಕೆಲಸಕ್ಕೆಂದು ಆಗಮಿಸುವ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಕೋರೆ ಮಾಲೀಕರೇ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು, ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುವ ಇಸ್ಪೀಟ್ ಆಟವನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮುಂಡ್ಕೂರು ದೊಡ್ಡ ಮನೆ ಸ್ವರಾಜ್ ಶೆಟ್ಟಿ ಐಕಳ, ದೇವಿಪ್ರಸಾದ್ ಶೆಟ್ಟಿ ನೆಲ್ಲಿಗುಡ್ಡೆ,ದಾಮಸ್ ಕಟ್ಟೆ ಕಿರೆಂ ಚಚ್೯ನ ಸೈಂಟ್ ಲಾರೆನ್ಸ್ ವಾಡ್೯ನ ಎವ್ಜಿನ್ ಸಲ್ಡಾನ, ಯುವ ಮುಂದಾಳು ಸುನಿಲ್ ಡಿ ಸೋಜಾ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.ನೋರಾಸ್ ಹಿಸ್ಟ್ರಾಲಾಜಿ ಲ್ಯಾಬ್ ಮಾಲಕ ನವೀನ್ ಲ್ಯಾನ್ಸಿ ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ರೋಶನ್ ನೆಲ್ಲಿಗುಡ್ಡೆ ವಂದಿಸಿದರು.
