
ಭಾರತ್ ಗ್ಯಾಸ್ ಗೆ ಸಂಭಂದಿಸಿದಂತೆ ಅಡುಗೆ ಅನಿಲ ವಿತರಣೆಯ ಕುರಿತಾಗಿ ಬಿಪಿಸಿಎಲ್ ಅಧಿಕಾರಿಗಳು ಮಂಗಳೂರು ನಂತೂರಿನ ಭಾರತ್ ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸಿ ಗೆ ಭೇಟಿ ನೀಡಿ, ವ್ಯವಸ್ಥೆಯ ಕುರಿತಾಗಿ ಪರಿಶೀಲಿಸಿ,ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು.
ಬಿಪಿಸಿಎಲ್ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ,ಮ್ಯಾನೇಜರ್ ದರ್ಶಿಲ್ ಮಾಲವೀಯ ಬೇಟಿ ನೀಡಿ ವಿತರಣೆಯ ವಿಧಾನಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಮಧೇನು ಗ್ಯಾಸ್ ಏಜೆನ್ಸಿಯ ಮಾಲಕರಾದ ದಿನೇಶ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.

ಈ ವೇಳೆ ಗ್ರಾಹಕರೊಂದಿಗೆ ಅಡುಗೆ ಅನಿಲ ಪೂರೈಕೆ ವ್ಯವಸ್ಥೆಯ ಕುರಿತು ವಿಚಾರಿಸಿದರು. ಗ್ರಾಹಕರು ಯಾವುದೇ ವಿಷಯಕ್ಕೆ ಗಾಬರಿಗೊಂಡು ಅನಾವಶ್ಯಕವಾಗಿ ಅವಧಿಪೂರ್ವ ಬುಕ್ಕಿಂಗ್ ಮಾಡುವುದು ಬೇಡ, ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಗ್ಯಾಸ್ ವಿತರಣೆಗೆ ಬರುವವರಿಗೆ ಓಟಿಪಿ ಸಂಖ್ಯೆಯನ್ನು ನೀಡಿ ಗ್ರಾಹಕರು ಸಹಕಾರ ನೀಡಬೇಕೆಂದು ತಿಳಿಸಿದರು

1 comment
Quis autem vel eum iure reprehenderit qui in ea voluptate velit esse quam nihil.