July 6, 2026
Uncategorizedಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕವಿಶೇಷ ಅಂಕಣ

ಸರಪಾಡಿ ಅಶೋಕ ಶೆಟ್ಟಿ;ರಂಗದ ಬೆಳಕಿನ ಹಿಂದಿನ ಕತ್ತಲೆಯ ಬದುಕು, ಒಬ್ಬ ಅಪ್ರತಿಮ ಯಕ್ಷಗಾನ ಕಲಾವಿದನ ಯಶೋಗಾಥೆ:

ಯಕ್ಷಗಾನ ರಂಗದ ಮೇಲೆ ರಾಮನಾಗಿ, ಭೀಮನಾಗಿ, ಕೌರವನಾಗಿ, ದೇವೇಂದ್ರನಾಗಿ, ಅರ್ಜುನನಾಗಿ, ಮಿಂಚುವ ಕಲಾವಿದನನ್ನು ಕಂಡಾಗ ಪ್ರೇಕ್ಷಕರು ಭಾವಪರವಶರಾಗಿ ಮಂತ್ರಮುಗ್ಧರಾಗುವವರು ಇರುತ್ತಾರೆ ಆದರೆ ಆ ರಂಗದ ಬೆಳಕಿನ ಹಿಂದೆ ಯಾತನಾಮಯ ಕಷ್ಟದ ಬದುಕು ಅಡಗಿದೆ ಎಂಬುದು ಬಹಳಷ್ಟು ಜನರಿಗೆ ತಿಳಿಯದು. ಐದು ದಶಕಗಳ ಕಾಲ ಯಕ್ಷಗಾನದ ಅಲೆಗಳಲ್ಲಿ ತೇಲುತ್ತಾ, ತನ್ನ ಬೆವರು ಮತ್ತು ಕಣ್ಣೀರಿನಿಂದ ಕಲೆಗೆ ಬಣ್ಣ ಹಚ್ಚಿದ ಒಬ್ಬ ಮೇಧಾವಿ ಕಲಾವಿದನ ಬದುಕು ನಮಗೆ ಸ್ಫೂರ್ತಿದಾಯಕ.

ಕಠಿಣ ಹಾದಿ ಮತ್ತು ಜೀವನ ಪಯಣ
6-4-1961 ರಲ್ಲಿ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬ ಊರಿನ ಪ್ರತಿಷ್ಠಿತ ಕೃಷಿಕ ಕುಟುಂಬದ ಅಮುಂಜೆ ಗುತ್ತು ಆರುಮುಡಿ ನಾರಾಯಣ ಶೆಟ್ಟಿ ಮತ್ತು ಮುನ್ನಲಾಯಿ ಗುತ್ತು ಶ್ರೀಮತಿ ಸಂಕಮ್ಮ ಶೆಟ್ಟಿ ಇವರ ದಾಂಪತ್ಯದ ಪ್ರತೀಕವಾಗಿ ಜನಿಸಿದ ಅಶೋಕ ಶೆಟ್ಟಿಯವರು ಬಾಲ್ಯದಿಂದಲೇ ಯಕ್ಷಕಲೆಗೆ ಆಕರ್ಷಿತರಾಗಿ ಆಸಕ್ತಿ ಹೊಂದಿದ್ದರು. ಕಲೆಯನ್ನು ಒಂದು ಸವಾಲಾಗಿ ಸ್ವೀಕರಿಸಿದ ಇವರು, ಹಲವು ವರ್ಷಗಳ ಕಾಲ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಕಲೆಯನ್ನು ಕೈಬಿಡಲಿಲ್ಲ ರಾತ್ರಿಯನ್ನು ಹಗಲನ್ನಾಗಿಸಿ ಶ್ರಮಪಟ್ಟು ತೊಡಗಿಸಿ ಕೊಂಡರೂ ಸಿಗುತ್ತಿದ್ದ ಅತ್ಯಲ್ಪ ಸಂಭಾವನೆ, ವ್ಯವಸಾಯದ ಸ್ಥಳದಲ್ಲಿ ಹಿರಿಯ ಕಲಾವಿದರಿಂದ ಎದುರಿಸಿದ ಸಮಸ್ಯೆಗಳು, ಸ್ವಾತಂತ್ರ್ಯ ರಹಿತ ಬದುಕು ಇವರನ್ನು ಜರ್ಜರಿತಗೊಳಿಸಿದ್ದರೂ ಎದೆ ಗುಂದದೆ ಪಯಣ ಮುಂದುವರಿಸಿದರು ಅದೇ ಕಾಲ ಘಟ್ಟದಲ್ಲಿ
ಬೆಳ್ಮಣ್ ಮೇಳದ ಕಲಾವಿದರು ಪ್ರಯಾಣಿಸುತ್ತಿದ್ದ ವಾಹನ ಮಂಗಳೂರು ನಲ್ಲಿ ಭೀಕರ ಅಪಘಾತಕ್ಕೀಡಾದಾಗ, ಸಾಕ್ಷಾತ್ ಯಮನನ್ನೇ ಕಣ್ಣಾರೆ ಕಂಡ ಕ್ಷಣವದು. ಆ ಘಟನೆಯಲ್ಲಿ ಅನೇಕ ಸಹಕಲಾವಿದರು ಅಂಗಾಂಗಗಳನ್ನು ಕಳೆದುಕೊಂಡರು, ಕೆಲವರು ದಿವಂಗತರಾದರು ಇವರೂ ಕೂಡ ಗಂಭೀರವಾಗಿ ಗಾಯಗೊಂಡರು. ಆದರೆ, ಜೀವನದ ಮೇಲಿನ ಭರವಸೆಯನ್ನು ಕಳೆದುಕೊಳ್ಳದೆ, ಆ ಕಷ್ಟದ ದಿನಗಳಲ್ಲೂ ಕಲಾ ಸೇವೆಯನ್ನು ಮುಂದುವರಿಸಿದರು.

ಸಾಹಿತ್ಯ ಮತ್ತು ಕಲಾ ಸೇವೆ:
ಇವರದು ಕೇವಲ ಅಭಿನಯಕ್ಕೆ ಸೀಮಿತವಾದ ಬದುಕಲ್ಲ; ಅವರು ಮಾನವೀಯತೆಯ ಪ್ರತೀಕ. ೧೯೯೨ರ ಮಳೆಗಾಲದಲ್ಲಿ ತುಂಬಿ ಹರಿವ ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು, ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಹಾರಿ ರಕ್ಷಿಸಿದ ಧೀರ ಇವರು. ಅಷ್ಟೇ ಅಲ್ಲದೆ ಬಿಡುವು ಮಾಡಿಕೊಂಡು ನೂರಾರು ಮಕ್ಕಳಿಗೆ ಶಾಲೆ ಮತ್ತು ಕಾಲೇಜು ಗಳಲ್ಲಿ ಉಚಿತವಾಗಿ ಯಕ್ಷನೃತ್ಯ ತರಭೇತಿ ನೀಡುವ ಮೂಲಕ ಹೊಸ ತಲೆಮಾರಿನ ಕಲಾವಿದರನ್ನು ಸೃಷ್ಟಿಸುವಲ್ಲಿಯೂ ತೊಡಗಿಸಿಕೊಂಡವರಾಗಿದ್ದಾರೆ.
ಮಾನವತೆಗೆ ಸವಾಲು ಸಂಧರ್ಭ
ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ ಮಹಾ ಮಾರಿ ಕೊರೋನ ಸಂಧರ್ಭ 3 ಭಾರಿ ಕಲಾವಲಯದ 425 ಮಂದಿಗೆ ಕಲಾವಿದರಿಗೆ(ಯಕ್ಷಗಾನ, ನಾಟಕ, ದೈವ ನರ್ತಕರು, ಜಾನಪದ ಕಲಾವಿದರಿಗೆ) ದಾನಿಗಳ ನೆರವಿನಿಂದ ಆಹಾರ ಕಿಟ್ ವಿತರಿಸಿದ ಒಬ್ಬ ಅಮೋಘ ಸಾಧಕ.

ಇವರ ರಚಿಸಿದ ಯಕ್ಷಗಾನ ಕೃತಿಗಳು:
ವಿಜಯ ಪುಷ್ಪ
ಸತ್ಯದೈವ ಚಾಮುಂಡಿ
ಸರಪಾಡಿದ ಸರ್ಪೆ ( ಮುಂದಕ್ಕೆ ಇದೇ ಹೆಸರಿನ ಬಿರುದು ಕೊಟ್ಟು ಸನ್ಮಾನ ಮುಂಬಯಿಯಲ್ಲಿ ನಡೆಯಿತು )
ಕಾಳಿಂಗ ಸರ್ಪ
ಶ್ರೀ ಕೃಷ್ಣ ದೇವರಾಯ (ಐತಿಹಾಸಿಕ)
ಸಾವಯವ ಕೃಷಿ ವಿಜಯ ಯಕ್ಷಗಾನ ಪ್ರಸಂಗ ಮತ್ತು ನಾಟಕ ರಚಸಿ , ನಟಿಸಿ ,ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದು
ಯಕ್ಷ ಒಲವು
ಶಾಲಾ ದಿನಗಳಲ್ಲಿ ಪ್ರಪ್ರಥಮವಾಗಿ
೧೯೭೦ರಲ್ಲಿ ಕೀಚಕವಧೆ-ಉತ್ತರ ಗೋಗ್ರಹಣ ಪ್ರಸಂಗದ ಮೂಲಕ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಪಡ್ರೆ ಚಂದು ಇವರಿಂದ ನಿರಂತರ ಒಂದು ವರುಷ ಯಕ್ಷ ಶಿಕ್ಷಣ ಪಡೆದು ಯಕ್ಷ ಪಯಣ ಆರಂಭಿಸಿದರು

ಶ್ರೀ ಕಟೀಲು ಮೇಳ,
ಅಳದಂಗಡಿ ಮೇಳ,
ಬಪ್ಪನಾಡು ಮೇಳ
ಬೆಳ್ಮಣ್ ಮೇಳ
ಕದ್ರಿಮೇಳ,
ಕುಂಬಳೆ ಮೇಳ,
ಕಾಂತಾವರ ಮೇಳ,
ಮಂಗಳಾದೇವಿ ಮೇಳ
ಬೆಳ್ಮಣ್ ಮೇಳ ,
ಬಾಚಕೆರೆ ಮೇಳ, ಪ್ರಸ್ತುತ ಶ್ರೀ ಸಸಿಹಿತ್ಲು ಮೇಳ ಸೇರಿದಂತೆ ಹಲವಾರು ಪ್ರಖ್ಯಾತ ಮೇಳಗಳಲ್ಲಿ ಸೇವೆ ಕಲಾವಿದರಾಗಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷ ಆಡಳಿತ ನಡೆಸಿದ್ದಾರೆ.

ಯಕ್ಷಗಾನ ದಲ್ಲಿ ಪ್ರಪ್ರಥಮ ಭಾರಿಗೆ ಯಕ್ಷ ಹಾಸ್ಯ ವೈಭವ ಎಂಬ ಹೆಸರಿನಲ್ಲಿ ಹಾಸ್ಯ ಕಲಾವಿದರ ತಂಡ ರಚಿಸಿ ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು.
ಎರಡು ವರುಷಗಳ ಹಿಂದೆ ಮಂಗಳೂರು ಪುರಭವನದಲ್ಲಿ ತುಳು ಭಾಷೆಯಲ್ಲಿ ಹಾಡು ಬರೆಸಿ ಅದ್ದೂರಿಯಲ್ಲಿ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಜಿಲ್ಲೆಯ ಶ್ರೇಷ್ಟ ಕಲಾವಿದರಿಂದ ಸಿರಿ ದೇವಿ ಮೈಮೆ ಎಂಬ ಹೆಸರಿನಲ್ಲಿ ತುಳು ಯಕ್ಷಗಾನ ಆಯೋಜನೆ ಮಾಡಿದ ಮೊದಲಿಗರು.

ಪ್ರಮುಖ ಗೌರವಗಳು:
ಕನ್ನಡ ಸಾಹಿತ್ಯ ಪರಿಷತ್ ತಾಲೂಕು, ಜಿಲ್ಲೆ, ರಾಜ್ಯ ಪುರಸ್ಕಾರ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ವಿದೇಶದ ಕುವೈಟ್, ಬೆಹರಿನ್, ಮಸ್ಕತ್, ಅಬುಧಾಭಿ, ದುಬಾಯಿ, ಕತಾರ್ ಸೇರಿದಂತೆ ಹಲವು ದೇಶಗಳಲ್ಲಿ ಗೌರವ ಸನ್ಮಾನಗಳು ಹೊರ ರಾಜ್ಯ ಮಾತ್ರವಲ್ಲದೆ ರಾಜ್ಯ ಜಿಲ್ಲೆ ತಾಲೂಕು ಗ್ರಾಮ 400ಕ್ಕೂ ಮಿಕ್ಕಿ ಸನ್ಮಾನ ಹಾರ ತುರಾಯಿ ಇವರನ್ನು ಅರಸಿ ಬಂದಿವೆ.

ಸಾಂಸಾರಿಕವಾಗಿ
ಮೀನಾ ಅ. ಶೆಟ್ಟಿ (ಪತ್ನಿ)
ವಿಕ್ರಮ್ ಶೆಟ್ಟಿ (ಪುತ್ರ)
ಅಮೂಲ್ಯ ಶೆಟ್ಟಿ (ಸೊಸೆ)
ರಮ್ಯಾ ಮನೋಜ್ ಶೆಟ್ಟಿ (ಪುತ್ರಿ)
ಕು. ಆಶೀ (ಮೊಮ್ಮಗಳು)

ಮುಕ್ತಾಯ:
ಯಕ್ಷಗಾನದ ಅಂಗಳದಲ್ಲಿ ಐದು ದಶಕಗಳ ಸುದೀರ್ಘ ಪಯಣವನ್ನು ಪೂರೈಸಿರುವ ಇವರು, ಕೇವಲ ಕಲಾವಿದರಲ್ಲ; ಇವರು ಯಕ್ಷಗಾನದ ಒಂದು ನಡಿಗೆಯ ಕೋಶ. ಕಷ್ಟ-ಕಾರ್ಪಣ್ಯಗಳ ನಡುವೆಯೂ ಕಲೆಗೆ ತನ್ನ ಬದುಕನ್ನೇ ಸಮರ್ಪಣೆ ಮಾಡಿದ ಇವರ ತ್ಯಾಗ,ಕೊಡುಗೆ ಮುಂದಿನ ಪೀಳಿಗೆಗೆ ಕಲೆಯ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಇವರ ಸಾಧನೆ ನಿಜಕ್ಕೂ ಅಭಿನಂದನೀಯ ಮತ್ತು ನಮಗೆಲ್ಲರಿಗೂ ಒಂದು ದೊಡ್ಡ
ಸ್ಫೂರ್ತಿ.

ಲೇಖನ : ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Related posts

ಮಂಗಳೂರು: ಕೇರಳ ಮೂಲದ ಚಿನ್ನ ವ್ಯಾಪಾರಿಯ ದರೋಡೆ, ಕಾರಿನೊಂದಿಗೆ ಪರಾರಿಸೋಮವಾರ ಮುಂಜಾನೆ ಪಣಂಬೂರು ಬಳಿಯ ಬೈಕಂಪಾಡಿಯಲ್ಲಿ ನಡೆದ ಘಟನೆ ;

Voiceoftulunadu

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯಿಂದ ವಯೋವಂದನ ಆತಿಥ್ಯ ಗೃಹ ಯೋಜನೆವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್;

Voiceoftulunadu

ಕಟಪಾಡಿ : ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು;

Voiceoftulunadu

Leave a Comment