27 C
ಮಂಗಳೂರು
July 6, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯಿಂದ ವಯೋವಂದನ ಆತಿಥ್ಯ ಗೃಹ ಯೋಜನೆವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್;

ವರದಿ /ಚಿತ್ರ: ಇ ಮೀಡಿಯಾ

ಉಡುಪಿ: ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ 1.11 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ “ವಯೋವಂದನ ಅತಿಥ್ಯ ಗೃಹ” ಯೋಜನೆ ಹಿರಿಯರ ಬದುಕಿನ ಸಂಧ್ಯಾಕಾಲದ ಆಸರೆ ಆಗಲಿದ್ದು, ಈ ಯೋಜನೆಯ ನಿರ್ಮಾಣ ಕಾರ್ಯ ಮತ್ತು ಆ ಬಳಿಕದ ನಿರ್ವಹಣೆಗೆ ಸಮಾಜದ ಸಹಭಾಗಿತ್ವ ಅತಿ ಅಗತ್ಯ ಎಂದು ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ನೂತನ ವಿಶ್ವಸ್ಥರಾದ ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ಹೇಳಿದರು.

ಅವರು ಜೂನ್ 28 ಆದಿತ್ಯವಾರದಂದು ಸಂಜೆ ಉಡುಪಿಯ ಶ್ರೀ ಪದ್ಮಾವತಿ ಸಭಾಭವನದಲ್ಲಿ ನಿರ್ಮಾಣ ಯೋಜನೆಯ ವಿವಿಧ ಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದು, ಎಲ್ಲಾ ಅಡೆತಡೆ ಸವಾಲುಗಳನ್ನು ಎದುರಿಸಿ ಸಮಾಜದ ಅವಶ್ಯಕತೆ ಇರುವ ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣದ ನಿರ್ಮಾಣ ಮತ್ತು ಯಶಸ್ವಿ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಗೆ ವೈಯುಕ್ತಿಕವಾಗಿ ಮತ್ತು ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಸಹಭಾಗಿತ್ವ ನೀಡುವುದಾಗಿ ಪ್ರಭಾಕರ್ ನಾಯಕ್ ವಾಗ್ದಾನ ನೀಡಿದರು.ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಮತ್ತು ಮೂಡಬಿದ್ರೆ ವಿಜಯ್ ಕುಮಾರ್ ಶೆಣೈಯವರು ವಯೋವಂದನ ಯೋಜನೆಯ ಕಟ್ಟಡ ನಿರ್ಮಾಣದ ಪೂರ್ವಭಾವಿ ಸಿದ್ಧತೆ, ಯೋಜನೆಯ ನಿರ್ವಹಣೆಯ ವೆಚ್ಚದವಿವರಗಳನ್ನು ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ವಿವರಿಸಿದರು.

ವಿವಿಧ ಸಮಿತಿಗಳ ರಚನೆಮಾಲಕರಾದ ಇದೇ ಸಂದರ್ಭದಲ್ಲಿ ವಯೋವಂದನ ಕಟ್ಟಡ ನಿರ್ಮಾಣ ಯೋಜನ ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನ ಮಹಾಲಸಾ ಎಲೆಕ್ಟಿಕಲ್ ನ ಮೂಡಬಿದ್ರೆ ವಿಜಯಕುಮಾರ್ ಶೆಣೈ, ಸಂಚಾಲಕರಾಗಿ ಕಾಪು ಹರೀಶ್ ನಾಯಕ್, ಕೆ. ಸಿ. ಕಾಮತ್, ಬಾಲಕೃಷ್ಣ ಶೆಣೈ ಮಣಿಪಾಲ, ಹಣಕಾಸು ಸಮಿತಿ ಮತ್ತು ಲೆಕ್ಕಪತ್ರ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ సీఎ ಗೋಪಾಲಕೃಷ್ಣ ಭಟ್, ಸಲಹೆಗಾರರಾಗಿ సీఎ ఎనోఎనో ಗೌರವ ನಾಯಕ್ ಮಂಗಳೂರು, ಮತ್ತು ಸಂಚಾಲಕರುಗಳಾಗಿ ನಾಗೇಶ್ ಕಾಮತ್ ಮತ್ತು ಮೋಹನದಾಸ ಶಾನುಭಾಗ್, ಅಜಿತ್ ಶೆಣೈ ಉಡುಪಿ, ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಣಾ ಮತ್ತು ಮೇಲ್ವಿಚಾರಣಾ ಸಂಚಾಲಕರುಗಳಾಗಿ ಸಮಿತಿ ಬೆಳ್ಳಣ್ ವೆಂಕಟರಾಯ ಕಾಮತ್ ಮತ್ತು ಮೂಡಬಿದ್ರೆ ರಘುವೀರ್ ಶೆಣೈಯವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

ಕಟ್ಟಡ ನಿರ್ಮಾಣ ಕೆಲಸದ ಗುತ್ತಿಗೆಯನ್ನು ಬೆಳ್ಳಣ್ ಕಾಮಾಕ್ಷಿ ಕನ್ನೈಕ್ಷನ್ ನ ಸುಧೀರ್ ಕಾಮತ್ ರವರಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಏಜಿಎಂ ಉಡುಪಿಯ ಅಶೋಕ್ ನಾಯಕ್, ನಿವೃತ್ತ ಬ್ಯಾಂಕರ್ ಕಾಪುವಿನ ಲಕ್ಷ್ಮೀನಾರಾಯಣ ನಾಯಕ್ ದಂಪತಿಗಳು, ಶ್ರೀ ಲಕ್ಷ್ಮಿ ವೆಂಕಟೇಶ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಯ ವತಿಯಿಂದ ನಿವೃತ್ತ ಬ್ಯಾಂಕರ್ ಮಲ್ಪೆ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಹಾಗೂ ಉಡುಪಿಯ ಯು ಎಸ್ ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ವಿಶ್ವಸ್ಥರಾದ ಪಾಂಗಾಳ ಸಿಎ ಸುರೇಶ್ ನಾಯಕ್ ಮತ್ತು ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ರವರು ವಯೋವಂದನ ಯೋಜನೆಯ ಕೊಠಡಿ ನಿರ್ಮಾಣಕ್ಕೆ ತಲಾ 8 ಲಕ್ಷ ರೂಪಾಯಿ ದೇಣಿಗೆ ಚೆಕ್ಕನ್ನು ವೇದಿಕೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ರಾಜ್ ಗೋಪಾಲ್ ಶೆಣೈ, ಉಡುಪಿ ಮತ್ತು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಸಿ ಎಸ್ ಎಸ್ ನಾಯಕ್ ರವರು ಮಾತನಾಡಿದರು.ವೇದಿಕೆಯಲ್ಲಿ ಉಡುಪಿಯ ಖ್ಯಾತ ಸರ್ಜನ್ ಡಾ. ಸುರೇಶ್ ಶೆಣೈ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾದ 8. ರಾಮರಾಯ ತಿಣಿ, ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವಿಶ್ವಸ್ಥರಾದ ಮಹೇಶ ಶೆಣೈ, ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ, ಮತ್ತು ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸೀಮಾ. ಎಸ್. ಪೈ ಯವರು ಉಪಸ್ಥಿತರಿದ್ದರು.ಸನ್ಮಾನಜಿಎಸ್ಟಿ

ಸನ್ಮಾನ್ಯ ಜಿ ಎಸ್ಪಿ ಸಮಾಜ ಹಿತರಕ್ಷಣಾ ವೇದಿಕೆಯ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಸಿದ್ಧಗೊಂಡಿರುವ “ಡಾ .ಪಿ. ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ” ಎನ್ನುವ ಪುಸ್ತಕದ ಸಂಪಾದಕಿ ಕಾರ್ಕಳದ ಪ್ರತಿಭಾನ್ವಿತ ಶ್ರೀಮತಿ ಪ್ರಜ್ವಲಾ ಶೆಣೈಯವರನ್ನು ಸನ್ಮಾನಿಸಿ, ಗೌರವಾರ್ಪಣೆ ಮಾಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವೇದಮೂರ್ತಿ ರಾಮಚಂದ್ರ ಅನಂತ ಭಟ್ಟರವರು, ವೇದಿಕೆಯ ಮಹತ್ವಕಾಂಕ್ಷಿ ಯೋಜನೆಗೆ ಸಮಾಜದ ದಾನಿಗಳಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಆದಷ್ಟು ಶೀಘ್ರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಸಮಾಜದ ಹಿರಿಯರ ಬಾಳಿಗೆ ಈ ಯೋಜನೆ ಆಸರೆಯಾಗಲಿ ಎಂದು ಶುಭಹಾರೈಸಿದರು.

ಬಿಎಸ್ಪಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷ 23. ಸತೀಶ್ ಹೆಗಡೆ ಸ್ವಾಗತಿಸಿದರು. ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈಯವರು ಪ್ರಸ್ತಾವನೆಗೈದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ರಾಮತ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾಪು ಹರೀಶ್ ವಂದನಾರ್ಪಣೆಗೈದರು.

Related posts

ಮಂಗಳೂರು ವಿಮಾನ ನಿಲ್ದಾಣದಲ್ಲಿ “ಉಬರ್” ಸೇವೆ ಆರಂಭ:ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ;

Voiceoftulunadu

ವೆನೆಜುವೆಲಾ : 7.2 ರಿಕ್ಟರ್ ಮಾಪಕದ ಭೂಕಂಪ, ನೂರಾರು ಜನರ ಸಾವು:ಬುಧವಾರ ಸಂಜೆ ಸಂಭವಿಸಿದ ಎರಡು ಅತ್ಯಂತ ಶಕ್ತಿಶಾಲಿ ಸರಣಿ ಭೂಕಂಪ;

Voiceoftulunadu

ಉಡುಪಿ ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪಲ್ಲಪೂಜೆ, ಹಾಲು ಪಾಯಸದ ಅನ್ನಸಂತರ್ಪಣೆ : ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಭಾಗಿ;

Voiceoftulunadu

Leave a Comment