November 3, 2026
Uncategorizedಆರೋಗ್ಯಕ್ರೀಡೆಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಪುತ್ತೂರು ಕಲಿಮಾರ್ ನಿವಾಸಿ ಖ್ಯಾತ ಜಿಮ್ ಟ್ರೈನರ್ ಸಚಿನ್ ರೈ ಹಠಾತ್ ಸಾವು;

ಪುತ್ತೂರು: ಇಲ್ಲಿನ ಕಲಿಮಾರ್ ನಿವಾಸಿಯಾದ, ಪ್ರಸಿದ್ಧ ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಸಚಿನ್ ರೈ ಅವರು ಇಂದು ಮುಂಜಾನೆ ಆಕಸ್ಮಿಕವಾಗಿ ನಿಧನರಾದ ಘಟನೆ ನಡೆದಿದೆ.

ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ ಅವರು ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಕಲಿಮಾರ್‌ನಲ್ಲಿ ವಾಸವಾಗಿದ್ದರು. ಕರಾವಳಿ ಭಾಗದಲ್ಲಿ ಉತ್ತಮ ಜಿಮ್ ಟ್ರೈನರ್ ಆಗಿ ಅವರು ಗುರುತಿಸಿಕೊಂಡಿದ್ದರು.

ಇಂದು ಮುಂಜಾನೆ ಅವರು ತಮ್ಮ ನಿವಾಸದಲ್ಲಿ ಹಠಾತ್ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ನಿಧನಕ್ಕೆ ನಿಖರ ಕಾರಣಗಳು ಸ್ಪಷ್ಟವಾಗಿ ಇನ್ನು ತಿಳಿದುಬರಬೇಕಿದೆ. ಮೃತರು ಅಪಾರ ಬಂಧುಬಳಗ ಹಾಗೂ ಸ್ನೇಹಿತವರ್ಗವನ್ನು ಅಗಲಿದ್ದಾರೆ.

Related posts

ವಿಶ್ವದ ಮೊಟ್ಟಮೊದಲ ಪರಮಾಣು ಆಧಾರಿತ ಜಲಜನಕ ಘಟಕ: ಶುದ್ಧ ಇಂಧನ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು;

Voiceoftulunadu

ಹವಾಮಾನ ಮಾಹಿತಿ : ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಆವಿಷ್ಕಾರ : ಯೋಜನೆ ಉದ್ಘಾಟಿಸಿದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ;

Voiceoftulunadu

ಸಂಗೀತ ಸಾಮ್ರಾಟ್’ ಹೆನ್ರಿ ಡಿ’ಸೋಜಾ ನಿಧನ ;

Voiceoftulunadu

Leave a Comment