ವರದಿ / ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಮಂಗಳೂರು: ಜೆಸಿಐ ಪುತ್ತೂರು ಘಟಕದ ಜೆಸಿಐ ಪಿಪಿಪಿ ಸುಹಾಸ್ ಮರಿಕೆ* ಅವರು ಪ್ರತಿಷ್ಠಿತ ಜೆಸಿಐ ಇಂಡಿಯಾ, ಝೋನ್ 15 ರ 2027ನೇ ಸಾಲಿನ ವಲಯಾಧ್ಯಕ್ಷರಾಗಿ (Zone President) ಭರ್ಜರಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಅಕ್ಟೋಬರ್ 31 ಮತ್ತು ನವೆಂಬರ್ 1, 2026 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಜೆಸಿಐ ಝೋನ್ 15 ರ ವಾರ್ಷಿಕ ಮಹಾಸಮ್ಮೇಳನ Zone one – Aarya 2026 ನಲ್ಲಿ ಈ ಐತಿಹಾಸಿಕ ಆಯ್ಕೆ ನಡೆಯಿತು.ಈ ಸಮ್ಮೇಳನದಲ್ಲಿ 2026 ರ ವಲಯಾಧ್ಯಕ್ಷರ ವರದಿ, ವಿವಿಧ ಪ್ರಶಸ್ತಿ ಪ್ರದಾನ ಮತ್ತು ಮುಂದಿನ ನಾಯಕತ್ವದ ಆಯ್ಕೆ ನಡೆಯಿತು.
ಅಂತಿಮವಾಗಿ ಚುನಾವಣಾ ಪ್ರಕ್ರಿಯೆಯ ನಂತರ ಸುಹಾಸ್ ಮರಿಕೆ ಅವರು 2027 ರ ವಲಯಾಧ್ಯಕ್ಷರಾಗಿ ಆಯ್ಕೆಯಾದರು.*ಸುಹಾಸ್ ಮರಿಕೆ ಅವರ ಈ ಆಯ್ಕೆಯು JCI Zone 15 ನಲ್ಲಿ ಹೊಸ ನಾಯಕತ್ವದ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಪರಿಗಣಿಸಲಾಗಿದೆ.
ಸರಳತೆ, ಸ್ನೇಹಪರ ವ್ಯಕ್ತಿತ್ವ, ಸಮರ್ಥ ನಾಯಕತ್ವ ಹಾಗೂ ಸಂಘಟನಾ ಚತುರತೆಗೆ ಹೆಸರಾದ ಸುಹಾಸ್ ಮರಿಕೆ ಅವರ ನಾಯಕತ್ವದಲ್ಲಿ ವಲಯ 15 ಇನ್ನಷ್ಟು ಎತ್ತರಕ್ಕೆ ಏರಲಿ, ಇನ್ನಷ್ಟು ಸಾಧನೆ ಮಾಡಲಿ ಎಂದು ಜೆಸಿಐ ಉಡುಪಿ ಶಿವಳ್ಳಿ ಮತ್ತು ಎಲ್ಲಾ ಜೆಸಿಐ ಬಂಧುಗಳು ಹಾರ್ದಿಕವಾಗಿ ಶುಭ ಹಾರೈಸಿದ್ದಾರೆ!
