27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ “ಉಬರ್” ಸೇವೆ ಆರಂಭ:ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ;

ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಉಬರ್ ತನ್ನ ಸೇವೆಯನ್ನು ಮತ್ತಷ್ಟು ಬಲಪಡಿಸಿದ್ದು, ಪ್ರಯಾಣಿಕರಿಗೆ ಸುಲಭ ಹಾಗೂ ವೇಗವಾದ ಸಾರಿಗೆ ಅನುಭವವನ್ನು ಒದಗಿಸುತ್ತಿದೆ.ವಿಮಾನದಿಂದ ಇಳಿದ ನಂತರ ದೀರ್ಘ ಸಮಯ ಕಾಯುವ ಅಗತ್ಯವಿಲ್ಲ. ವಿಮಾನ ನಿಲ್ದಾಣದಲ್ಲೇ ಉಬರ್ ಸಹಾಯ ಸಿಬ್ಬಂದಿ ಲಭ್ಯವಿದ್ದು, ಪ್ರಯಾಣಿಕರಿಗೆ ಕ್ಯಾಬ್ ಬುಕ್ಕಿಂಗ್, ವಾಹನ ಪತ್ತೆ ಹಾಗೂ ಪಿಕಪ್ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಉಬರ್ ಪಿಕಪ್ ವಲಯವನ್ನು (Pickup Zone) ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕ್ಯಾಬ್ ಹುಡುಕುವ ತೊಂದರೆ ಕಡಿಮೆಯಾಗಿದ್ದು, ವೇಗವಾಗಿ ವಾಹನವನ್ನು ಪಡೆಯಬಹುದು.ಇದಲ್ಲದೆ, ಪ್ರಯಾಣಿಕರು ಕಾಯಲು ಅನುಕೂಲವಾಗುವಂತೆ ಉಬರ್‌ ಲೌಂಜ್‌ (Uber Lounge) ಸೌಲಭ್ಯವೂ ಲಭ್ಯವಿದೆ. ಇಲ್ಲಿ ಪ್ರಯಾಣಿಕರು ಆರಾಮವಾಗಿ ಕುಳಿತು ತಮ್ಮ ಕ್ಯಾಬ್ ಬರುವವರೆಗೆ ನಿರಾಳವಾಗಿ ಕಾಯಬಹುದು.

ಈ ಹೊಸ ವ್ಯವಸ್ಥೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚು ಸುಗಮ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣ ಅನುಭವ ದೊರೆಯಲಿದೆ ಎಂದು ಉಬ‌ರ್ ಪ್ರತಿನಿಧಿಗಳು ತಿಳಿಸಿದ್ದಾರೆ.

Related posts

ಅಡ್ಯಾರ್‌ನಲ್ಲಿ ೧೧ನೇ ವರ್ಷದ ಪಟ್ಲ ಸಂಭ್ರಮ ೨೦೨೬, ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

Voiceoftulunadu

ಕಟಪಾಡಿ: ಅಚ್ಚಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ LKG ತರಗತಿ ಉದ್ಘಾಟನೆ ತರಗತಿ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Voiceoftulunadu

ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?|

voiceoftulunadu

Leave a Comment