November 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆ : ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಡಾ. ಹರೀಶ್ ಕುಮಾ‌ರ್ ಎಸ್ ;

ವರದಿ/ ಚಿತ್ರ : ಈ ಮೀಡಿಯಾ

ಉಡುಪಿ : ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 2026-273 ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆಯನ್ನು ಮಣಿಪಾಲದ ಮಾಹೆಯ ಪ್ರಾಧ್ಯಾಪಕರು ಹಾಗೂ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕರಾದ ಡಾ. ಹರೀಶ್ ಕುಮಾರ್ ಎಸ್ ಉದ್ಘಾಟಿಸಿದರು.

ಅವರು ಮಾತನಾಡುತ್ತಾ, ಪ್ರಸ್ತುತ ಸಭೆಯ ಎಲ್ಲಾ ಕ್ಷೇತ್ರದಲ್ಲಿಯೂ ಕಾನೂನು ಪದವೀಧರರಿಗೆ ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಯಶಸ್ವಿಯಾಗಲು ಸಮರ್ಥ ಸಂವಹನ ಕೌಶಲ್ಯಗಳ ಕಲಿಕೆ ಅವಶ್ಯಕ. ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯಭವಿಷ್ಯದ ಹೆಚ್ಚಿನ ಪಾತ್ರ ಮತ್ತು ಕಾನೂನು ವೃತ್ತಿಪರರು ಆಧುನಿಕ ತಂತ್ರಜ್ಞಾನಗಳನ್ನು ಹೊಂದುವ ಅಗತ್ಯತೆ ಇದೆ.

ಈ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ನಾಯಕತ್ವದ ಕುರಿತು ಮಾತನಾಡಿದ ಅವರು, ನಾಯಕತ್ವದಲ್ಲಿ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ನಡವಳಿಕೆ ಅತ್ಯಂತ ಮುಖ್ಯ. ಒಬ್ಬ ನಾಯಕನನ್ನು ಅವನ ಮಾತುಗಳಿಂದ ಅಲ್ಲ, ಬದಲಾಗಿ ಆತನ ಕಾರ್ಯಗಳಿಂದ ಆರಿಸಿಕೊಳ್ಳುವುದಿಲ್ಲ.

ನಾಯಕನು ತನ್ನ ನಡೆ-ನುಡಿಗಳ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಖಕೆ ಯವರು ವಹಿಸಿದ್ದರು.ಉಪಪ್ರಾಂಶುಪಾಲೆ ಡಾ. ಪ್ರೀತಿ ಹರೀಶ್ ರಾಜ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ಬೋಧಿಸಿದರು.

ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ರೋಹಿತ್ ಎಸ್ ಅಮೀನ್ ಸಂಯೋಜಕರಾದ ಡಾ. ಜಯಮೋಲ್ ಮತ್ತು ಪಿ.ಎಸ್. ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದರು. ನಿರೂಪಿಸಿದರು. ವಾಸುದೇವ ತಿಲಕ್ ಅತಿಥಿಗಳನ್ನು ಪರಿಚಯಿಸಿದರು ಶ್ರೀಶಾ ಪೈ ವಂದನಾಪಣೆ ಸಲ್ಲಿಸಿದರು.

Related posts

ವಿದೇಶದಲ್ಲಿ ಕನ್ನಡ ನಂಟಿನ ಸೇತು :ಕರ್ನಾಟಕ ಸಂಘ ದುಬೈನಿಂದ ‘ಡಾರ್ಟ್ಸ್ ಟೂರ್ನಮೆಂಟ್-2026’ ಯಶಸ್ವಿ ಆಯೋಜನೆ ;

Voiceoftulunadu

ವೆನೆಜುವೆಲಾ : 7.2 ರಿಕ್ಟರ್ ಮಾಪಕದ ಭೂಕಂಪ, ನೂರಾರು ಜನರ ಸಾವು:ಬುಧವಾರ ಸಂಜೆ ಸಂಭವಿಸಿದ ಎರಡು ಅತ್ಯಂತ ಶಕ್ತಿಶಾಲಿ ಸರಣಿ ಭೂಕಂಪ;

Voiceoftulunadu

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನದಲ್ಲಿ ಮೃತಪಟ್ಟಿದ್ದ ಉಡುಪಿಯ ಪೈಲೆಟ್ ಅಭಿಷೇಕ್ ಪೂಜಾರಿ : ಕಾರ್ಕಳದ ಕಣಜಾರಿನಲ್ಲಿ ಪೈಲೆಟ್ ಅಂತ್ಯಕ್ರಿಯೆ…!!

Voiceoftulunadu

Leave a Comment