November 4, 2026
Uncategorizedಉದ್ಯೋಗ/ಶಿಕ್ಷಣಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ ಸಂತ ಅಲೋಶಿಯಸ್ ಗೊನ್ಸಾಗ ಶಾಲೆಯ ಯುವರಾಜ್ ಡಿ. ಕುಂದರ್ ;

ಕೃಪೆ : ಪಿಂಗಾರ

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಗೊನ್ಸಾಗ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಅಕ್ಟೋಬರ್ 5ರಿಂದ 7ರವರೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕೂಟ 2026ರಲ್ಲಿ ಟ್ರೈಯಥ್ಲಾನ್ ಬಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಯುವರಾಜ್ ಅವರು ಒಟ್ಟು 2,836 ಅಂಕಗಳನ್ನು ಗಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದು, ಈ ಹಿಂದೆ ತಾವೇ ನಿರ್ಮಿಸಿದ್ದ 2,632 ಅಂಕಗಳ ದಾಖಲೆಯನ್ನು ಮುರಿದು ನೂತನ ಕೂಟದ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಈ ಗಮನಾರ್ಹ ಸಾಧನೆಯೊಂದಿಗೆ ಅವರು ಅಕ್ಟೋಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಯುವರಾಜ್ ಅವರ ಈ ದಾಖಲೆ ನಿರ್ಮಿಸಿದ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ., ಉಪಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

Related posts

ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ಶಾಖೆ ಉಡುಪಿಯಲ್ಲಿ ಅ.25ರಂದು ಉದ್ಘಾಟನೆ ;

Voiceoftulunadu

ಗೋವಿನತೋಟ :ಇಂದಿನಿಂದ ಶ್ರೀ ರಾಧಾಸುರಭಿ ಗೋ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತಾಹ-2026 ;

Voiceoftulunadu

ಕಾಪುವಿನ ಸುಭಾಷ್ ನಗರದಲ್ಲಿ ಕೊಬ್ಬರಿ ಘಟಕಕ್ಕೆ ಬೆಂಕಿ.ಲಕ್ಷಾಂತರ ರೂಪಾಯಿ ನಷ್ಠ ;

Voiceoftulunadu

Leave a Comment