November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಕ್ಷೇತ್ರಪಾಲ ಗುಡಿಯ ನಿರ್ಮಾಣಕ್ಕೆ ಚಾಲನೆ ;

ಮೂಲ್ಕಿ:ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಹೊಸ ಕ್ಷೇತ್ರಪಾಲ ಗುಡಿಯ ನಿರ್ಮಾಣ ಕಾರ್ಯಕ್ಕೆ ದಾನಿಗಳು ಹಾಗೂ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಯದುನಾರಾಯಣ ಶೆಟ್ಟಿಯವರಿಗೆ ಮತ್ತು ಶಿಲ್ಪಿಗಳಿಗೆ ಶ್ರೀ ದೇವರ ಪ್ರಸಾದ ನೀಡುವ ಮೂಲಕ ಚಾಲನೆಯನ್ನು ನೀಡಲಾಯಿತು.

ಶ್ರೀ ಕ್ಷೇತ್ರದ ಅರ್ಚಕರಾದ ಗೋಪಾಲಕೃಷ್ಣ ಭಟ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಯದುನಾರಾಯಣ ಶೆಟ್ಟಿಯವರು ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಬೇಕಾದರೆ ಭಕ್ತರ ಸಹಕಾರ ಅಗತ್ಯ, ಬಪ್ಪನಾಡು ದೇವಳದ ಸಮಗ್ರ ಜೀರ್ಣೋದ್ದಾರಕ್ಕಾಗಿ ಚಾಲನೆ ದೊರಕಿದ್ದು ಅನೇಕ ಅಭಿವೃದ್ದಿ ಕಾರ್ಯಗಳು ನಡೆಯಲಿದೆ, ಅಭಿವೃದ್ಧಿ ಕೆಲಸಕ್ಕೆ ಮರದ ಅಗತ್ಯವಿದ್ದು ಭಕ್ತಾಧಿಗಳು ಸಹಕಾರ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರ್ಚಕರಾದ ಪ್ರಸಾದ್ ಭಟ್, ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತ ಅರಸರು,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯದು ನಾರಾಯಣ ಶೆಟ್ಟಿ ,ಕ್ಷೇತ್ರದ ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಸಮಿತಿ ಕಾರ್ಯಾಧ್ಯಕ್ಷರಾದ ಅತುಲ್‌ ಕುಡ್ವ, ಸುನಿಲ್‌ ಆಳ್ವ, ಸದಸ್ಯರಾದ ರಾಮಚಂದ್ರ ನಾಯ್ಕ ಕೊಲ್ನಾಡು ಗುತ್ತು, ಉದ್ಯಮಿ ಕಿರಣ್ ಕುಮಾ‌ರ್ ಶೆಟ್ಟಿ ಕೋಲ್ನಾಡುಗುತ್ತು, ವಿದ್ಯಾಧ‌ರ್ ಶೆಟ್ಟಿ ಕೊಲ್ನಾಡುಗುತ್ತು , ಸುಜಿತ್‌ ಅಳ್ವ ಕೊಲ್ನಾಡುಗುತ್ತು, , ವಿಶ್ವನಾಥ ಗೇರುಕಟ್ಟೆ,ಚರಣ್ ಶೆಟ್ಟಿ ಕಡವಿನಬಾಗಿಲು, ಉದಯಕುಮಾರ್ ಶೆಟ್ಟಿ ಅಧಿದನ್, ನಾಗರಾಜ್ ಬಪ್ಪನಾಡು, ದಿನೇಶ್‌ ಸುವರ್ಣ ಬೆಳ್ಳಾಯರು, ಪ್ರಮೋದ್ ಶೆಟ್ಟಿ ಕೊಲ್ನಾಡು, ನಾಗೇಶ್ ಬಪ್ಪನಾಡು, ಈಶ್ವರ್ ಕಟೀಲ್, ಶಿವಶಂಕರ್‌ ವರ್ಮ, ಶಿಲ್ಪಿ ಸುಬ್ರಮಣ್ಯ , ಸಂಜೀವ ದೇವಾಡಿಗ ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

Related posts

ಕೊಡ್ಮಾಣ್:ಅ.16-19, 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಸಂಭ್ರಮ. ನಾಲ್ಕು ದಿನಗಳ ಕಾಲ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈಭವ ;

Voiceoftulunadu

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಚಲನಚಿತ್ರ ನಟ ಯಶ್ ಭೇಟಿ: ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಾದ ಪಡೆದ ಯಶ್;

Voiceoftulunadu

ಬೆಂಗಳೂರಿನಲ್ಲಿ ಸಂಪಾಜೆ ಸಾಂಸ್ಕೃತಿಕ ಸಂಭ್ರಮ : 2 ಅದ್ಧೂರಿ ಆಚರಣೆ;

Voiceoftulunadu

Leave a Comment