28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಂಗಳೂರಿನಲ್ಲಿ ಸಂಪಾಜೆ ಸಾಂಸ್ಕೃತಿಕ ಸಂಭ್ರಮ : 2 ಅದ್ಧೂರಿ ಆಚರಣೆ;

ವರದಿ/ ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಬೆಂಗಳೂರು: ತುಳುನಾಡಿನ ಕಲೆ, ಸಂಸ್ಕೃತಿಯನ್ನು ಬೆಂಗಳೂರಿನಲ್ಲಿ ಉಳಿಸಿ ಬೆಳೆಸುತ್ತಿರುವ ಸಂಪಾಜೆ ರಂಗ ಸಂಗಮ (ರಿ.), ಬೆಂಗಳೂರು ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಪ್ರಯುಕ್ತ “ಸಂಪಾಜೆ ಸಾಂಸ್ಕೃತಿಕ ಸಂಭ್ರಮ – 2” ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಿದೆ.

ಕಾರ್ಯಕ್ರಮದ ಮುಖ್ಯಾಂಶಗಳು : ಪ್ರಶಸ್ತಿ ಪ್ರದಾನ | ಸಾಂಸ್ಕೃತಿಕ ಸಂಭ್ರಮ | ಪ್ರತಿಭಾ ಪುರಸ್ಕಾರ:

ದಿನಾಂಕ : ಆಗಸ್ಟ್ 23, 2026, ಆದಿತ್ಯವಾರ- ಸಮಯ : ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ- ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ, ಬೆಂಗಳೂರು.

ಗಣ್ಯರ ಉಪಸ್ಥಿತಿ :

ಉದ್ಘಾಟನೆ : ಶ್ರೀ ರಮಾನಂದ ಗುರೂಜಿ,ಧರ್ಮದರ್ಶಿಗಳು, ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ, ದೊಡ್ಡಣಗುಡ್ಡೆ, ಉಡುಪಿ.

ಅಧ್ಯಕ್ಷತೆ : ಶ್ರೀ ಶಶಿಧರ್ ಕೋಟೆ,ಖ್ಯಾತ ಗಾಯಕರು.

ಮುಖ್ಯ ಅತಿಥಿಗಳು : 1. ಶ್ರೀ ರಮೇಶ್ ಸುವರ್ಣ, ಹಿರಿಯ ಪತ್ರಕರ್ತರು, ಚಿತ್ರ ನಿರ್ದೇಶಕರು.

2. ಶ್ರೀ ಲೋಹಿತ್ ಎನ್, ಹೆಚ್. ಆರ್. ಅಧಿಕಾರಿ, ಬಿ.ಎಸ್.ಪಿ.ಆರ್.ಎಲ್.

3. ಶ್ರೀ ವಿನೋದ್ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷರು, ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ.) ಕೇಂದ್ರೀಯ ಉಡುಪಿ ಜಿಲ್ಲೆ, ಪ್ರವರ್ತಕರು, ನಮ್ಮ ಉಡುಪಿ ಟಿವಿ ನಿರ್ದೇಶಕರು, ವಿ. ಎಸ್. ಗ್ರೂಪ್ ಹಾಗೂ ಮಹಾಗಣಪತಿ ಸೌಹಾರ್ದ ಸಹಕಾರಿ ನಿಯಮಿತ.

4. ಶ್ರೀಮತಿ ವಿದ್ಯಾಲತಾ ಶೆಟ್ಟಿ, ಬನ್ನಂಜೆ, ಮಹಿಳಾ ಉದ್ಯಮಿ ಹಾಗೂ ಸಮಾಜ ಸೇವಕರು.

ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಬಂಧುಗಳಿಗೆ ತುಳುನಾಡಿನ ಸಂಸ್ಕೃತಿಯ ಸೊಗಡನ್ನು ಪರಿಚಯಿಸುವ ಈ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಸ್ಥೆಯ ಸಂಸ್ಥಾಪಕರಾದ ರಾಜ್ ಸಂಪಾಜೆ ಅವರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

ಸರ್ವರಿಗೂ ಆದರದ ಸ್ವಾಗತ- ರಾಜ್ ಸಂಪಾಜೆ,ಸಂಸ್ಥಾಪಕರು,ಸಂಪಾಜೆ ರಂಗ ಸಂಗಮ (ರಿ.), ಬೆಂಗಳೂರು.

Related posts

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ :ಮಕ್ಕಳ ದಫ್ ಪ್ರದರ್ಶನ, ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡು, ವಾಹನ ಜಾಥಾದ ಮೆರಗು ;

Voiceoftulunadu

ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆ:2026ಆಳ್ವಾಸ್ ಶಾಲೆಯ 04 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ;

Voiceoftulunadu

ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?|

voiceoftulunadu

Leave a Comment