July 6, 2026
ಅಂತಾರಾಷ್ಟ್ರೀಯ

‘ಜನರಿಂದ ನಾನು ಮೇಲೆ ಬಂದೆ’ ಪೋಸ್ಟರ್ ಬಿಡುಗಡೆ

ಬೆಂಗಳೂರು:ಯುಗಾದಿ ಹಬ್ಬದಂದು  “ಜನರಿಂದ ನಾನು ಮೇಲೆ ಬಂದೆ” ಸಿನಿಮಾದ ಪೋಸ್ಟರನ್ನು ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು.
ನವಿಲುಗರಿ ನವೀನ್ ಪಿ ಬಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಕಥೆಯು ಡ್ಯಾನ್ಸ್ ಅನ್ನು ತನ್ನ ಉಸಿರಾಗಿಸಿಕೊಂಡ ಒಬ್ಬ ಹುಡುಗನ ಸುತ್ತ ನಡೆಯುವ ನೈಜ ಕಥೆಯಾಗಿದ್ದು, ಈ ಸಿನಿಮಾದಲ್ಲಿ ಸಾಕಷ್ಟು ಡ್ಯಾನ್ಸ್ ನಿಂದ ಹೆಸರು ಮಾಡಿರುವ ಹೆಸರಾಂತ ಕಲಾವಿದರು ನಟಿಸಿದ್ದಾರೆ.  ಡ್ಯಾನ್ಸ್ ಅಂದ್ರೆ ನೆನಪು ಬರುವುದೇ ಡ್ಯಾನ್ಸ್ ರಾಜಾ ಡ್ಯಾನ್ಸ್ ಖ್ಯಾತಿಯ ವಿನೋದ್ ರಾಜ್.  ಅವರು ಮಾಡಿದ ಡ್ಯಾನ್ಸ್ ಸ್ಟೆಪ್ಸ್ ಈಗಲೂ ಸಹ ನೋಡಿದರೆ ರೋಮಾಂಚನ ಅನಿಸುತ್ತದೆ. ಸುಮಾರು ವರ್ಷಗಳ ಕಾಲ ಬೆಳ್ಳಿ ಪರದೆಯಿಂದ ಕೊಂಚ ದೂರವಿದ್ದ ವಿನೋದ್ ರಾಜ್ ಜನರಿಂದ ನಾನು ಮೇಲೆ ಬಂದೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಬರುವ ಇವರ ಪಾತ್ರ ಸಿನಿಮಾಗೆ ಬಹಳ ಮಹತ್ವ ನೀಡುತ್ತದೆ ಎಂದು  ಸಿನಿಮಾದ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ. ತಿಳಿಸಿದ್ದಾರೆ.

Voiceoftulunadu

ಕಥಾನಾಯಕನಾಗಿ ಗಂಧರ್ವ ರಾಜ್ ನಟಿಸಿದರೆ ಅವರ ಜೊತೆಗೆ ಅಭಿಜಿತ್, ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ಶಿವಕುಮಾರ್ ಆರಾಧ್ಯ, ಶ್ಯಾಮಲಮ್ಮ, ಜಯಪ್ರಕಾಶ್ ನಾಗತಿಹಳ್ಳಿ, ಸುನಂದಾ ಕಲಬುರಗಿ, ಪ್ರವೀಣಾ ಕುಲಕರ್ಣಿ, ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀವಸಂತ, ಶಿವಣ್ಣ, ಆಪ್ತಿ ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾ ಕುಮಾರಿ, ಕಾಟೇರ ಕೇಶವ, ಅಂಬೇಡ್ಕರ್ ಮಹೇಶ್, ಡಾ ಅಕ್ಷತಾ, ವಿಶಾಲ ಸತೀಶ್, ಲಲಿತ್ ಕೃಷ್ಣ, ಯಶು ರಾಜ್, ಶಶಿರೇಖಾ ಇನ್ನೂ ಅನೇಕ ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಮತಿ ಹೇಮಾವತಿ ಬಿ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಪ್ರಣವ್ ಸತೀಶ್ ಸಂಗೀತ ನಿರ್ದೇಶನ ಮಾಡಿದರೆ, ಷಣ್ಮುಖ ಗೋವಿಂದ ರಾಜು, ರೇವಣ್ಣ ಸಿದ್ದ ಫುಲಾರಿ, ಎ ಆರ್ ತನ್ವೀರ್, ಯಶಸ್ವಿನಿ ಕಾಪ್ಸೆ ಹಾಡುಗಳನ್ನು ಹಾಡಿದ್ದಾರೆ, ಪೃಥ್ವಿರಾಜ್ ಸಂಕಿ, ಭುವನ್ ಹಾಗೂ ನವೀನ್ ಪಿ ಬಿ ಸಾಹಿತ್ಯ ಬರೆದಿದ್ದಾರೆ, ಗೌತಮ್ ಟಿ ಆರ್ ಕ್ಯಾಮೆರಾ ಮತ್ತು ಸಂಕಲನ ಕೆಲಸವನ್ನು ನಿಭಾಯಿಸುತ್ತಿದ್ದು,  ಪತ್ರಿಕಾ ಸಂಪರ್ಕ  ಆರ್.ಚಂದ್ರಶೇಖರ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ.

Related posts

ಮಿಫ್ 2026 ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಎಐ ಬಳಕೆ ಜವಾಬ್ದಾರಿಯುತವಾಗಿರಬೇಕು: ರಾಜ್ಯಪಾಲರ ಕರೆ;

Voiceoftulunadu

ಇರಾನ್‌ ಜೊತೆ ಶಾಂತಿ ಒಪ್ಪಂದ ಪೂರ್ಣ.. ಹಾರ್ಮುಜ್‌ ಜಲಸಂಧಿ ಓಪನ್: ಟ್ರಂಪ್‌ ಘೋಷಣೆ

voiceoftulunadu

ಸೋಶಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಬ್ಬರ; ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ:

voiceoftulunadu

Leave a Comment