27 C
ಮಂಗಳೂರು
July 6, 2026
Uncategorizedಕ್ರೀಡೆರಾಜ್ಯ/ದೇಶ

ಈ ಸಲನೂ ಕಪ್ ನಮ್ಧೇ! ಗೆದ್ದ RCB ಗೆ ಸಿಕ್ಕ ಬಹುಮಾನ ಎಷ್ಟು?

ಈ 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಸತತ 2ನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿದೆ. ಐಪಿಎಲ್‌ ಟ್ರೋಫಿ ಗೆದ್ದ ತಂಡ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ.2008 ರ ಚೊಚ್ಚಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ನೀಡಲಾಗಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್‌ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ.ಗೆದ್ದ ಬೆಂಗಳೂರು ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ (Prize Money) ಸಿಕ್ಕರೇ, ರನ್ನರ್‌ ಅಪ್‌ ಆದ ಗುಜರಾತ್‌ ಟೈಟಾನ್ಸ್‌ ತಂಡ 12.5 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಬಹುಮಾನಕ್ಕಿಂತ ಹೆಚ್ಚಿನ ಹಣಕ್ಕೆ ಹಲವು ಆಟಗಾರರನ್ನ ಫ್ರಾಂಚೈಸಿಗಳು ಖರೀದಿಸಿವೆ.

ಈ ಮಧ್ಯೆ ಕೆಲವರು ವೈಯಕ್ತಿಕ ಪ್ರಶ್ತಿಗಳನ್ನೂ ಬಾಚಿಕೊಂಡಿದ್ದಾರೆ.ಪ್ರಶಸ್ತಿ ವಿಜೇತರು ಮತ್ತು ಬಹುಮಾನ ಪಡೆದ ಲಿಸ್ಟ್‌ ಇಲ್ಲಿದೆ.

ಚಾಂಪಿಯನ್ಸ್‌: ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಕೋಟಿ ರೂ.ರನ್ನರ್ಸ್ ಅಪ್: ಗುಜರಾತ್‌ ಟೈಟಾನ್ಸ್‌ – 12.5 ಕೋಟಿ ರೂ.ಕ್ವಾಲಿಫೈಯರ್-2 (ಸೋತ ತಂಡ): ರಾಜಸ್ಥಾನ್ ರಾಯಲ್ಸ್ ತಂಡ – 7 ಕೋಟಿ ರೂ.ಎಲಿಮಿನೇಟರ್ (ಸೋತ ತಂಡ): ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 6.5 ಕೋಟಿ ರೂ.ಆರೆಂಜ್ ಕ್ಯಾಪ್:

ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 10 ಲಕ್ಷ ರೂ.ಪರ್ಪಲ್ ಕ್ಯಾಪ್: ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.ಮೋಸ್ಟ್‌ ವ್ಯಾಲ್ಯುಯೆಬಲ್‌ ಪ್ಲೇಯರ್‌ (ಎಂವಿಪಿ): ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 15 ಲಕ್ಷAdvertisementರೂ.ಆವೃತ್ತಿಯ ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ಟಾಟಾ ಸಿಯೆರಾಹೆಚ್ಚು ಡಾಟ್ ಬಾಲ್‌ಗಳು – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.ಉದಯೋನ್ಮುಖ ಆಟಗಾರ (ಎಮರ್ಜಿಂಗ್‌ ಪ್ಲೇಯರ್‌) – ವೈಭವ್ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್) – 10 ಲಕ್ಷ ರೂಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.

ಸೂಪರ್ ಸಿಕ್ಸರ್‌ – ವೈಭವ್ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್) – 10 ಲಕ್ಷ ರೂ.ಆವೃತ್ತಿತಲ್ಲಿ ಅತಿಹೆಚ್ಚು ಫೋರ್‌ಗಳು – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.ಕ್ಯಾಚ್‌ ಆಫ್‌ ದಿ ಸೀಸನ್‌ – ಮನೀಶ್ ಪಾಂಡೆ (ಕೋಲ್ಕತ್ತಾ ನೈಟ್ ರೈಡರ್ಸ್) – 10 ಲಕ್ಷ ರೂ.ಫೇರ್‌ಪ್ಲೇ ಪ್ರಶಸ್ತಿ – ಪಂಜಾಬ್ ಕಿಂಗ್ಸ್ – 10 ಲಕ್ಷ ರೂ.ಪಿಚ್ ಮತ್ತು ಗ್ರೌಂಡ್ – ಸಿಎಬಿ (ಕೋಲ್ಕತ್ತಾ ನೈಟ್ ರೈಡರ್ಸ್ ಹೋಮ್ ಗ್ರೌಂಡ್) – 50 ಲಕ್ಷ ರೂ.ಪಿಚ್ ಮತ್ತು ಗ್ರೌಂಡ್ (4 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳು) – ಎಚ್‌ಪಿಸಿಎ – 25 ಲಕ್ಷ ರೂ.ಪಂದ್ಯಶ್ರೇಷ್ಠ – ವಿರಾಟ್‌ ಕೊಹ್ಲಿ (ಫೈನಲ್‌ ಪಂದ್ಯದಲ್ಲಿ) – 5 ಲಕ್ಷ ರೂ.

Related posts

ಸರಪಾಡಿ ಅಶೋಕ ಶೆಟ್ಟಿ;ರಂಗದ ಬೆಳಕಿನ ಹಿಂದಿನ ಕತ್ತಲೆಯ ಬದುಕು, ಒಬ್ಬ ಅಪ್ರತಿಮ ಯಕ್ಷಗಾನ ಕಲಾವಿದನ ಯಶೋಗಾಥೆ:

Voiceoftulunadu

ಧರ್ಮಸ್ಥಳದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ:ಕುಮಾರಿ ಚಿನ್ಮಯಿ ಬೆಂಗಳೂರಿಗೆ ‘ಯೋಗರತ್ನ’ ಪ್ರಶಸ್ತಿ ಪ್ರದಾನ;

Voiceoftulunadu

ಸೋಶಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಬ್ಬರ; ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ:

voiceoftulunadu

Leave a Comment