September 5, 2026
ಅಂತಾರಾಷ್ಟ್ರೀಯಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶ

ಸೋಶಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಬ್ಬರ; ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ:


ಸೋಷಿಯಲ್‌ ಮೀಡಿಯಾದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಅಬ್ಬರ- ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ

ನವದೆಹಲಿ: ಸೋಷಿಯಲ್‌ ಮೀಡಿಯಾದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party) ಅಬ್ಬರ ಜೋರಾಗಿದೆ. ಫಾಲೋವರ್ಸ್‌ ಸಂಖ್ಯೆಯಲ್ಲಿ ನಾಲ್ಕೇ ದಿನಕ್ಕೆ ಬಿಜೆಪಿಯನ್ನು ಸಿಜೆಪಿ ಹಿಂದಿಕ್ಕಿ ಅಚ್ಚರಿ ಮೂಡಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯು 8.7 ಮಿಲಿಯನ್ (87 ಲಕ್ಷ) ಫಾಲೋವರ್ಸ್ ಹೊಂದಿದ್ದರೆ, ಈ ಡಿಜಿಟಲ್ ಪಾರ್ಟಿಯು ಬರೋಬ್ಬರಿ 10.2 ಮಿಲಿಯನ್ (1.2 ಕೋಟಿ) ಫಾಲೋವರ್ಸ್ ದಾಟಿದೆ. ಈ ಮೂಲಕ ಕಾಕ್ರೋಚ್‌ ಜನತಾ ಪಾರ್ಟಿ ಹೊಸ ದಾಖಲೆಯನ್ನು ಬರೆದಿದೆ.

ಸಿಜೆಐ ಸೂರ್ಯ ಕಾಂತ್‌ ಅವರು ನಿರುದ್ಯೋಗಿ ಯುವಕರನ್ನು ಕಾಕ್ರೋಚ್ ಎಂದಿದ್ದರು. ನ್ಯಾ. ಸೂರ್ಯ ಕಾಂತ್ ಹೇಳಿಕೆ ಬೆನ್ನಲ್ಲೇ ಕಾಕ್ರೋಚ್ ಹೆಸರಿನಲ್ಲಿ ರಾಜಕೀಯ ಪಕ್ಷದ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಅಕೌಂಟ್ ಓಪನ್ ಆಗಿದೆ.

ಆಪ್ ಪಕ್ಷದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದ್ದ ಪುಣೆ ಮೂಲದ ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ದಿಪ್ಕೆ, ಈ ಸೋಷಿಯಲ್‌ ಮೀಡಿಯಾ ಪಕ್ಷವಾದ ಸಿಜೆಪಿ

Advertisement

ಸಂಸ್ಥಾಪಕ ಅಧ್ಯಕ್ಷ ಎಂದು ಕರೆದುಕೊಂಡಿದ್ದಾರೆ. ದಿಪ್ಕೆ ಅವರು ಪುಣೆಯಲ್ಲಿ ಪತ್ರಿಕೋದ್ಯಮ ಮುಗಿಸಿ ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ದಿಪ್ಕೆ ಪ್ರಸುತ್ತ ರಾಜಕೀಯ ವ್ಯವಸ್ಥೆ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ದೇಶದ ಜೆನ್ ಝೀಗಳಿಂದ ಬೆಂಬಲ ವ್ಯಕ್ತವಾಗಿದೆ.

ಭಾರತದಲ್ಲಿ ನಿರ್ಬಂಧ

ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ(Cockroach Janata Party) ಎಕ್ಸ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.

CJP_2029 ಯೂಸರ್‌ನೇಮ್‌ ಹೊಂದಿರುವ ಈ ಖಾತೆಗೆ ಹೋದಾಗ ʻAccount Withheldʼ ಮಾಡಲಾಗಿದೆ ಎಂದು ತೋರಿಸಲಾಗುತ್ತದೆ. “@CJP_2029 has been withheld in IN in response to a legal demand” ಎಂದು ಕಾಣಿಸುತ್ತದೆ.

Related posts

ರಂಗದ ಮೇಲೊಂದು ಹೆಣ್ಣಿನ ಜೀವ: ಕಂತ್ತೂರಿನ ದಯಾನಂದ ಎಂಬ ಕಲಾ ತಪಸ್ವಿ!

Voiceoftulunadu

ಮಂಗಳೂರು ವಿಮಾನ ನಿಲ್ದಾಣದಲ್ಲಿ “ಉಬರ್” ಸೇವೆ ಆರಂಭ:ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ;

Voiceoftulunadu

ಧವಳತ್ರಯ ಜೈನ ಕಾಶಿ – ಪುಸ್ತಕ ವಿತರಣೆ NEWSಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ವಿದ್ಯಾಥಿಗಳಿಗೆ ಪುಸ್ತಕಗಳ ವಿತರಣೆಶಿಕ್ಷಣದ ಮಹತ್ವ ಅರಿತು ಬದುಕು ರೂಪಿಸಿರಿ : ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ:

voiceoftulunadu

Leave a Comment