July 7, 2026
ಜಿಲ್ಲಾ ಸುದ್ದಿರಾಜಕೀಯಸ್ಥಳೀಯ/ಪ್ರಾದೇಶಿಕ ಸುದ್ದಿ

ಮೂಲ್ಕಿ ಬಳಿಯ ಕೆರೆಕಾಡಿನ ನವೀಕರಣಗೊಂಡಿದ್ದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಅನಾವರಣವನ್ನು ನೆರವೇರಿಸಿದ ಶಾಸಕ ಉಮಾನಾಥ ಕೋಟ್ಯಾನ್ ;


ಮೂಲ್ಕಿ:ಗ್ರಾಮೀಣ ಭಾಗವೂ ಸಹ ಇಂದು ಬೆಳೆಯುತ್ತಿರುವ ಪಟ್ಟಣವಾಗಿದ್ದು, ಶವ ದಹನದ ಸ್ಥಿತಿಗತಿಯನ್ನು ಅರಿತು ಗ್ರಾಮಕ್ಕೊಂದು ಸಾರ್ವಜನಿಕ ರುದ್ರಭೂಮಿಯ ಅವಶ್ಯಕತೆ ಇದೆ. ಸ್ಥಳೀಯರು ತಮ್ಮ ತಮ್ಮ ಶಕ್ತಾನುಸಾರ ಇದರ ಬಗ್ಗೆ ಪ್ರಯತ್ನ ಪಡಬೇಕು, ಹತ್ತಾರು ಮಂದಿ ಕೂಡಿದಲ್ಲಿ ಸರ್ಕಾರವು ನಿಮ್ಮೊಂದಿಗೆ ಇರುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ಬಳಿಯ ಕೆರೆಕಾಡು ಸಾರ್ವಜನಿಕ ಹಿಂದೂ ರುದ್ರಭೂಮಿಯ ೩೦ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವುದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶ್ರೀ ಪಟೇಲ್ ವಾಸುದೇವ ರಾವ್ ಪುನರೂರು, ಆಡಳಿತ ಮೊಕ್ತಸರರು, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.
ರುದ್ರಭೂಮಿಗೆ ಸಹಕಾರ ನೀಡಿದ ವಿವಿಧ ದಾನಿಗಳನ್ನು ಗೌರವಿಸಲಾಯಿತು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರಕುಮಾರ್ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಬಜಪೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್‌ಕುಮಾರ್, ಕಿನ್ನಿಗೋಳಿ ಯುವಗಪುರುಷದ ಭುವನಾಭಿರಾಮ ಉಡುಪ, ದಾನಿ ಕೃಷ್ಣಮೂರ್ತಿ ರೆಡ್ಡಿ, ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಜಾನಕಿ ಶೆಟ್ಟಿಗಾರ್, ಶ್ರೀಕಾಂತ್ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಶಕ್ತಿದರ್ಶನದ ದೇವದಾಸ್ ರಾವ್, ಡಾ| ಸೋಂದಾ ಭಾಸ್ಕರ್ ಭಟ್ ಕಟೀಲು, ಗೌರವಾಧ್ಯಕ್ಷರುಗಳಾದ ವಿನೋದ್ ಎಸ್.ಸಾಲ್ಯಾನ್, ರಾಜಶೇಖರ್ ರಾವ್ ಕೆರೆಕಾಡು, ಸಂಜೀವ ಭಂಡಾರಿ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸುರೇಶ್ ಶೆಟ್ಟಿ, ಸಮಾಜ ಸೇವಕ ರಂಗನಾಥ ಶೆಟ್ಟಿ, ಕೋಶಾಧಿಕಾರಿ ದಿವೇಶ್ ದೇವಾಡಿಗ, ಉಪಾಧ್ಯಕ್ಷ ಶ್ರೀನಿವಾಸ್ ಆಚಾರ್ಯ ಇದ್ದರು.
ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮಾಧವ ಶೆಟ್ಟಿಗಾರ್ ಪ್ರಸ್ತಾವನೆಗೈದರು, ಉಪಾಧ್ಯಕ್ಷ ಪಿ.ಆರ್. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Related posts

ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ – ದೀದಿ ವಿರುದ್ಧ ಎಫ್‌ಐಆರ್

voiceoftulunadu

ಮಳೆ ಅನಾಹುತ: ಕಂಕನಾಡಿ ನಾಗುರಿಯಲ್ಲಿ ಮನೆ ಕುಸಿತ, ಮೂವರ ದುರ್ಮರಣ, ಮೂವರ ರಕ್ಷಣೆ ಈ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಸಹಾಯದ ಭರವಸೆ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್;

Voiceoftulunadu

ವಿ ವಿ ಕಾಲೇಜು ಪ್ರಾಂಶುಪಾಲರಾಗಿ ಡಾ. ಜಯವಂತ ನಾಯಕ್:

voiceoftulunadu

Leave a Comment