July 7, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಿನಿಮಾ/ಮನರಂಜನೆ

ಎನ್‌ಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆಗೊಂಡ ಕೊಂಕಣ್ ಮೆಲೋಡಿ ಸ್ಟಾರ್–2026ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಯ ಹೊಸತನದ ಪರಿಕಲ್ಪನೆ : ವಾಲ್ಟರ್ ನಂದಳಿಕೆ;

ವರದಿ /ಚಿತ್ರ:ರೋನ್ಸ್ ಬಂಟ್ವಾಳ್

ಮುಂಬೈ, ಜು.06: ಮಾಂಡ್ ಸೋಭಾಣ್‌ನ ಸೋಡ್ ಕಾರ್ಯಕ್ರಮದಿಂದ ಆರಂಭವಾದ ಸಂಗೀತ ಪಯಣವನ್ನು ಡೈಜಿವರ್ಲ್ಡ್‌ನ ಎನ್‌ಜಿಟಿ, ಗಲ್ಪ್ ವಾಯ್ಸ್ ಆಫ್ ಮಂಗಳೂರು, ಜಿಗಿಬಿಗಿ ತಾರಂ ಸೇರಿದಂತೆ ಹಲವು ವೇದಿಕೆಗಳು ಮತ್ತಷ್ಟು ಬಲಪಡಿಸಿವೆ. ಲಿಯೋ ಚಾರಿಟೇಬಲ್ ಟ್ರಸ್ಟ್ ಯೂಟ್ಯೂಬ್ ಆಧಾರಿತ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಯನ್ನು ಪರಿಚಯಿಸಿರುವುದು ಹೊಸತನದ ಪರಿಕಲ್ಪನೆಯಾಗಿದ್ದು, ಉದಯೋನ್ಮುಖ ಗಾಯಕರಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಆದ್ದರಿಂದ ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಡೈಜಿವರ್ಲ್ಡ್ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದು ಡೈಜಿವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ಡಿಸೋಜಾ ನಂದಳಿಕೆ ಭರವಸೆ ನೀಡಿದರು.

ಮಂಗಳೂರಿನ ಎನ್‌ಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಲಿಯೋ ಚಾರಿಟೇಬಲ್ ಟ್ರಸ್ಟ್ (ಎಲ್‌ಸಿಟಿ) ವತಿಯಿಂದ ಆಯೋಜಿಸಲಾದ ‘ಕೊಂಕಣ್ ಮೆಲೋಡಿ ಸ್ಟಾರ್ 2026’ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ವಾಲ್ಟರ್ ನಂದಳಿಕೆ ಮಾತನಾಡಿ, ಹೊಸ ಪ್ರತಿಭಾವಂತ ಕೊಂಕಣಿ ಗಾಯಕರನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ವಿಶಿಷ್ಟ ಸಂಗೀತಯಾತ್ರೆ ಇತಿಹಾಸದ ಪುಟ ಸೇರುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎನ್‌ಸಿಸಿ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಹಾಗೂ ಸಹಕಾರ ರತ್ನ ಅನಿಲ್ ಲೋಬೋ ಪೆರ್ಮಾರ್ ಮುಖ್ಯ ಅತಿಥಿಯಾಗಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೊಂಕಣಿ ನಾಟಕ ಸಭಾ ಅಧ್ಯಕ್ಷ ವಂ| ಫಾ| ರೊಕಿ ಡಿಕುನ್ಹಾ, ಮಾಂಡ್ ಸೋಭಾಣ್ ಅಧ್ಯಕ್ಷ ಲೂಯಿಸ್ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ, ಖ್ಯಾತ ಗಾಯಕ ಹಾಗೂ ಕೊಂಕಣಿ ಸಂಗೀತ ದಿಗ್ಗಜ ಸ್ವರ್ಗೀಯ ವಿಲ್ಫಿ ರೆಬಿಂಬಸ್ ಅವರ ಸುಪುತ್ರ ವಿಶ್ವಾಸ್ ರೆಬಿಂಬಸ್ ಉಪಸ್ಥಿತರಿದ್ದರು.

ಲಿಯೋ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಲಿಯೋ ಡಿಸೋಜಾ ರಾಣಿಪುರ ಹಾಗೂ ಕಾರ್ಯಕ್ರಮದ ನಿರೂಪಕ, ಕ್ರಿಯೇಟಿವ್ ಹೆಡ್ ಜೆರ್ರಿ ಡಿಸೋಜಾ ಬೊಂದೇಲ್ ವೇದಿಕೆಯನ್ನು ಅಲಂಕರಿಸಿದ್ದರು.ವಂ| ಫಾ| ರೊಕಿ ಡಿಕುನ್ಹಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣ್ ಮೆಲೋಡಿ ಸ್ಟಾರ್ 2026’ ಅಧಿಕೃತ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಯಿತು.ಅನಿಲ್ ಲೋಬೋ ಮಾತನಾಡಿ, ಎನ್‌ಸಿಸಿ ಬ್ಯಾಂಕ್ ಸದಾ ಕೊಂಕಣಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಬೆಂಬಲ ನೀಡಿದೆ ಎಂದು ಹೇಳಿದರು. ಲಿಯೋ ಡಿಸೋಜಾ ಮತ್ತು ಜೆರ್ರಿ ಡಿಸೋಜಾ ಅವರ ಸಂಗೀತ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿ, ಈ ಸ್ಪರ್ಧೆ ಯಶಸ್ವಿಯಾಗಿ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಮೈಲಿಗಲ್ಲಾಗಲಿ ಎಂದು ಹಾರೈಸಿದರು.

ಸ್ಟ್ಯಾನಿ ಅಲ್ವಾರಿಸ್ ಅಧ್ಯಕ್ಷೀಯ ನುಡಿಗಳನ್ನಾಡಿ, ಕೊಂಕಣಿ ಸಮುದಾಯ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಕೊಂಕಣ್ ಮೆಲೋಡಿ ಸ್ಟಾರ್‌ನಂತಹ ದೂರದೃಷ್ಟಿಯ ಕಾರ್ಯಕ್ರಮಗಳು ಶಾಶ್ವತ ಬದಲಾವಣೆ ತರಬಲ್ಲವು ಎಂದು ಹೇಳಿದರು. ಯುವ ಗಾಯಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಮೂಲಕ ಈ ಸ್ಪರ್ಧೆ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಗೀತದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರೋನಿ ಕ್ರಾಸ್ತಾ, ಸ್ಟ್ಯಾನ್ಲಿ ಬಂಟ್ವಾಳ ಹಾಗೂ ಸಂತೋಷ್ ಸಿಕ್ವೇರಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಡಾ. ವೆಲಿಟಾ ಲೋಬೋ, ಅಲ್ವಿನ್ ನೊರೊನ್ಹಾ, ಜೋಶಲ್ ಡಿಸೋಜಾ ಹಾಗೂ ಧ್ವನಿ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ ಸಂಜಯ್ ರೋಡ್ರಿಗಸ್ ಹಾಗೂ ಡೈಜಿವರ್ಲ್ಡ್ ತಂಡದ ಪ್ರತಿನಿಧಿಗಳನ್ನು ಗೌರವಿಸಲಾಯಿತು.ಪ್ರಾಥಮಿಕ ವಿಡಿಯೋ ಆಯ್ಕೆ ಸುತ್ತಿನಲ್ಲಿ ಒಟ್ಟು 113 ಸ್ಪರ್ಧಿಗಳು ಭಾಗವಹಿಸಿದ್ದು, ಅವರಲ್ಲಿ 81 ಮಂದಿ ಆಡಿಷನ್ ಸುತ್ತಿಗೆ ಆಯ್ಕೆಯಾಗಿದ್ದಾರೆ.

Related posts

ವಾರ್ಷಿಕ ಸಂತ ಉತ್ಸವ ಸಂಭ್ರಮಿಸಿದ ಸೈಂಟ್ ಪೀಟರ್‍ಸ್ ಅಸೋಸಿಯೇಶನ್ ಮುಂಬಯಿ ಸಂತೋತ್ಸವಗಳು ಸಾಮಾಜಿಕ ಜವಾಬ್ದಾರಿ ಅರಿವಿಗೆ ಪೂರಕ : ಫಾ| ಐವಾನ್ ಡಿಅಲ್ಮೇಡಾ;

Voiceoftulunadu

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,  ಭಜನಾ ಮಂಡಳಿಯ ವತಿಯಿಂದ ನುಡಿ ನಮನ;

Voiceoftulunadu

ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ; ಚಿನ್ನಯ್ಯನಿಂದ ರಿಟ್ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಕಾಶ್ ರಾಜ್ ಹೆಸರು:

voiceoftulunadu

Leave a Comment