September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಟೀಲಿನ ಯಕ್ಷಗಾನ ಕಲಾವಿದರೊಂದಿಗೆ ಯಕ್ಷಕುಶಲೋಪರಿಕಟೀಲು ದೇಗುಲದ ಗಂಧಪ್ರಸಾದ, ಶೇಷವಸ್ತ್ರ ದಿನಸಿ ಸಾಮಾಗ್ರಿ, ಕಿರು ಗೌರವ ಧನ ಕೊಡುಗೆ ;

ವರದಿ /ಚಿತ್ರ :ಈ ಮೀಡಿಯಾ

ಕಟೀಲು : ದುರ್ಗಾಪರಮೇಶ್ವರೀ ಯಕ್ಷಗಾನ ದಶಾವತಾರ ಕಟೀಲು ಮೇಳಗಳಲ್ಲಿ ಕಲಾವಿದರಾಗಿದ್ದು, ನಿವೃತ್ತರಾಗಿರುವ 70 ವರ್ಷ ಮೀರಿದ ಕಲಾವಿದರ ಮನೆಗೆ ಭೇಟಿ ನೀಡಿ ಅವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆಯುವ ಕಟೀಲು ಮೇಳದ ಅಭಿಮಾನಿಗಳ ಯಕ್ಷಕುಶಲೋಪರಿ-ಸುಹೃದಯ ಕಾರ್ಯಕ್ರಮ ನೆರವೇರಿತು.

ಮೊದಲ ಹಂತದಲ್ಲಿ ಅಡೂರು ಅಪ್ಪಯ್ಯ ಮಣಿಯಾಣಿ, ದಾಸನಡ್ಕ ರಾಮ ಕುಲಾಲ್, ಬಾಯಾರು ರಘುನಾಥ ಶೆಟ್ಟಿ, ಕುರಿಯ ಗಣಪತಿ ಶಾಸ್ತ್ರಿ, ಎಂಟಿಎಸ್ ಕುಲಾಲ್ ಅವರ ಮನೆಗಳಿಗೆ ಭೇಟಿ ನೀಡಲಾಯಿತು.ಮೇಳದ ತಿರುಗಾಟದ ಅನುಭವಗಳನ್ನು ಕೇಳುತ್ತ, ಒಂದಿಷ್ಟು ಹರಟೆ ಹೊಡೆಯುತ್ತ, ತಾವು ನೋಡಿದ ಅವರ ವೇಷಗಳ ಕುರಿತು ಮಾತನಾಡುತ್ತಾ, ಕಟೀಲು ಮೇಳಗಳ ಕಲಾವಿದರ ಅಭಿಮಾನದಿಂದ ತಮ್ಮ ಬಳಿಗೆ ಬಂದಿರುವುದನ್ನು ತಿಳಿಸಲಾಯಿತು.

ಕಟೀಲು ದೇಗುಲದಿಂದ ನೀಡಲಾದ ಗಂಧಪ್ರಸಾದ, ದೇವರ ಶೇಷವಸ್ತ್ರ, ಕಟೀಲು ಮೇಳದಿಂದ ನೀಡಲಾದ ಒಂದಿಷ್ಟು ದಿನಸಿ ಸಾಮಾಗ್ರಿ, ಕಿರು ಗೌರವ ಧನವನ್ನು ಕಲಾವಿದರಿಗೆ ನೀಡಲಾಯಿತು.ಅಡೂರಿನ ಅಪ್ಪಯ್ಯ ಮಣಿಯಾಣಿ ಕಟೀಲು ಮೇಳದಲ್ಲೇ ಇದ್ದ ಮಲ್ಲ ಅಪ್ಪಯ್ಯ ಮಣಿಯಾನಿಯವರ ಶಿಷ್ಯ, ಎಲ್ಯ ಅಪ್ಪಯ್ಯ ಮಣಿಯಾಣಿಯವರು ಇಪ್ಪತ್ತು ವರುಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದವರು.

ಮಧ್ಯೆ ಮುಂಬೈಗೆ ಹೋದವರು ಅಲ್ಲಿ ಅನೇಕರಿಗೆ ಯಕ್ಷಗಾನ ಕಲಿಸಿದವರು.ಇವರು ಪುಂಡು ವೇಷಧಾರಿಯಾಗಿ ಪ್ರಸಿದ್ಧರು. ಇರಾ, ಬಲಿಪ, ಕುಬಣೂರು ಭಾಗವತರ ನಿರ್ದೇಶನದಲ್ಲಿ ತಿರುಗಾಟ ಮಾಡಿದವರು. ಇವರ ಮಾತುಗಾರಿಕೆ ಪ್ರಸಿದ್ಧಿ. ಪತ್ನಿ ಮಕ್ಕಳೊಂದಿಗೆ ಅಡೂರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ದಾಸನಡ್ಕ ರಾಮ ಕುಲಾಲ್ಬಣ್ಣದ ವೇಷಗಳನ್ನು ಮಾಡುತ್ತ ಪ್ರಸಿದ್ಧರಾದ ಎಂಭತ್ತಮೂರರ ಹರೆಯದ ರಾಮ ಕುಲಾಲರದ್ದು ಐವತ್ತು ವರುಷಗಳ ತಿರುಗಾಟ. ಕಟೀಲು ಮೇಳದಲ್ಲಿ ಸುದೀರ್ಘ ತಿರುಗಾಟ. ಸದ್ಯ ಪೆರ್ಮುದೆ ನಾಯ್ಕಟ್ಟೆ ಸಮೀಪ ವಾಸ. ಏಕಾಂತವಾಗಿದ್ದಾರೆ.

ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರು, ಹೆಚ್ಚು ಕಡಿಮೆ ಕತ್ತಲೇ ತುಂಬಿಕೊಂಡಿರುವ ಮನೆಯ ಗೋಡೆಗಳಲ್ಲಿ ಪ್ರಶಸ್ತಿ ಫಲಕಗಳು ತೂಗುಹಾಕಲ್ಪಟ್ಟಿವೆ.ಕುರಿಯ ಗಣಪತಿ ಶಾಸ್ತ್ರಿನೂರಾರು ಕಲಾವಿದರನ್ನು ನೀಡಿದ ಯಕ್ಷಗಾನದ ಕುರಿಯ ಮನೆತನದ ಭಾಗವತರಾದ ಗಣಪತಿ ಕಟೀಲು ಎರಡೂವರೆ ಕಾಲ ಶಾಸ್ತ್ರಿಗಳು ದಶಕಗಳ ಮೂರನೇ ಮೇಳದಲ್ಲೇ ಕಲಾಸೇವೆಗೈದವರು. ಅನೇಕ ಕಲಾವಿದರನ್ನು ಬೆಳೆಸಿದವರು. ಅಗರಿ ಶೈಲಿಯ ಭಾಗವತರಾದ ಇವರು ರಂಗದ ನಿಯಂತ್ರಣವನ್ನು ಭಾಗವತನೇ ಇಟ್ಟುಕೊಳ್ಳಬೇಕೆಂದು ನಂಬಿ, ತೋರಿಸಿಕೊಟ್ಟವರು.

ಭಾವಕ್ಕೆ ಹೆಚ್ಚು ಸ್ಪಂದನೆ ನೀಡುತ್ತಿದ್ದ ಭಾಗವತರು.ಬಾಯಾರು ರಘುನಾಥ ಶೆಟ್ಟಿ ಬಾಯಾರಿನಲ್ಲಿರುವ ರಘುನಾಥ ಶೆಟ್ಟರಿಗೆ ೮೦ರ ಹರೆಯ. ಸುಮಾರು 62 ವರುಷಗಳ ಸುದೀರ್ಘ ತಿರುಗಾಟದ ಅನುಭವಿ.37 ವರ್ಷ ಕರ್ನಾಟಕ, 10 ವರ್ಷ ಸುಂಕದಕಟ್ಟೆ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ್ದ ರಘುನಾಥ ಶೆಟ್ಟರ ಸಹೋದರೆಲ್ಲರೂ ಯಕ್ಷಗಾನ ಕಲಾವಿದರೇ. ೯೮ರ ಹರೆಯದ ತಾಯಿ, ಸಹೋದರ ಬಾಯಾರು ಮೋಹನ, ರಮೇಶ ಶೆಟ್ಟಿ ಹೀಗೆ ಕೂಡುಕುಟುಂಬದಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಮನೆತುಂಬ ಪ್ರಶಸ್ತಿ ಪತ್ರ, ಸ್ಮರಣಿಕೆಗಳು ಅಲಂಕೃತವಾಗಿವೆ.ಎಂಟಿಎಸ್ ಕುಲಾಲ್ಯಕ್ಷಗಾನದಲ್ಲಿ ಆರು ಮಂದಿ ಸುಂದರ ಎಂಬ ಹೆಸರಿನವರು ಇದ್ದರೆಂದು ತನಗೆ ಎಂಟಿಎಸ್ ಎಂದು ಹೆಸರು ಬಂತು. 14 ನೇ ವರ್ಷಕ್ಕೆ ಯಕ್ಷಗಾನಕ್ಕೆ ಪಾದಾರ್ಪಣೆ. 64 ವರ್ಷಗಳ ಸುದೀರ್ಘ ತಿರುಗಾಟಗಳಿಗೆ 78 ವರ್ಷ. ಸುರತ್ಕಲ್, ಬಪ್ಪನಾಡು ಮೇಳಗಳ ತಿರುಗಾಟ ಮಾಡಿದ ಇವರು ಕಟೀಲು ಮೇಳದಲ್ಲಿ ಎಲ್ಲ ರೀತಿಯ ವೇಷಗಳನ್ನೂ ಮಾಡಿದವರು. ಬೇಡಗುಡ್ಡೆಯಲ್ಲಿ ಪತ್ನಿ ಪುತ್ರರೊಂದಿಗೆ ವಾಸವಾಗಿದ್ದಾರೆ.

ಕಲಾವಿದರ ಮನೆಯ ಭೇಟಿ ಸಂದರ್ಭಕಟೀಲು ಮೇಳದ ಮೆನೇಜರ್ ಪ್ರಕಾಶ್ ಶೆಟ್ಟಿ, ಭಾಗವತರಾದ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಮಯ್ಯ, ಕಲಾ ಸಂಘಟಕ ಪ್ರಥ್ವಿರಾಜ್ ಕವತ್ತಾರ್, ಪ್ರಸಾಧನ ಕಲಾವಿದ ರವಿ ಪಾವಂಜೆ, ಅಶೋಕ್ ಜಲ್ಲಿಗುಡ್ಡೆ, ಅವಿನಾಶ್ ಬೈಪಾಡಿತ್ತಾಯ, ದಯಾನಂದ ಮಾಡ, ದುರ್ಗಾ ಪ್ರಸಾದ್ ಎಕ್ಕಾರು, ಸ್ಕಂದ ಕೊನ್ನಾರ್, ಜಯಂತ ಸುವರ್ಣ, ಚಂದ್ರಕಾಂತ ಮುಂತಾದವರಿದ್ದರು.

Related posts

ಉಜಿರೆಯ  ಎಸ್.ಡಿ.ಎಂ ಪದವಿಪೂರ್ವ ಕಾಲೇಜ್‌ನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಸಮಾರಂಭ ವಿದ್ಯಾಥಿಗಳು ಭವಿಷ್ಯದ ಬಗ್ಯೆ ಕನಸು ಕಂಡು ನನಸಾಗಿಸಬೇಕು : ಸೋನಿಯಾ ಯಶೋವರ್ಮ

Voiceoftulunadu

ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ : ಆ.16 ರಂದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ :

Voiceoftulunadu

ಇ-ಪೇಪರ್

rohankotekar123@gmail.com

Leave a Comment