November 3, 2026
Uncategorizedಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ

ಕರಾವಳಿಯಲ್ಲಿ ಸೈಲೆಂಟ್ ತಂಪ್: ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಇವಿ ಬೈಕ್ ವಿತರಣೆ ಆರಂಭ; ಶೀಘ್ರದಲ್ಲೇ ಮಂಗಳೂರಿಗೆ ‘ಫ್ಲೈಯಿಂಗ್ ಫ್ಲೀ C6’ ಲಗ್ಗೆ!

ವರದಿ /ಚಿತ್ರ: ರವಿರಾಜ್ ಕಾವೂರು

ಮಂಗಳೂರು: ದಶಕಗಳಿಂದ ಕರಾವಳಿಯ ರಸ್ತೆಗಳು ಮತ್ತು ಕಡಲತೀರಗಳಲ್ಲಿ ಸದ್ದು ಮಾಡುತ್ತಿದ್ದ ರಾಯಲ್ ಎನ್‌ಫೀಲ್ಡ್ ಬೈಕುಗಳ ಗಂಭೀರ ಬುಲೆಟ್ ಸೌಂಡ್ ಇನ್ಮುಂದೆ ಸೈಲೆಂಟ್ ಆಗಲಿದೆ! ಪ್ರಖ್ಯಾತ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅಧಿಕೃತವಾಗಿ ಎಲೆಕ್ಟ್ರಿಕ್ ವಾಹನ (EV) ಜಗತ್ತಿಗೆ ಕಾಲಿಟ್ಟಿದ್ದು, ತನ್ನ ಚೊಚ್ಚಲ ಇವಿ ಬೈಕ್ ‘ಫ್ಲೈಯಿಂಗ್ ಫ್ಲೀ C6’ (Flying Flea C6) ವಿತರಣೆಯನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಂಭಿಸಿದೆ.

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಲಾಂಚ್ ಆಗಿರುವ ಈ ಪ್ರೀಮಿಯಂ ರೆಟ್ರೋ-ಎಲೆಕ್ಟ್ರಿಕ್ ಬೈಕ್, ಮುಂದಿನ ಹಂತದಲ್ಲಿ ಮಂಗಳೂರು ಮತ್ತು ಉಡುಪಿಯ ಶೋರೂಮ್‌ಗಳಿಗೆ ಬರಲು ಸಜ್ಜಾಗಿದೆ ಎಂದು ಸ್ಥಳೀಯ ಆಟೋ ಡೀಲರ್‌ಗಳು ಖಚಿತಪಡಿಸಿದ್ದಾರೆ.ಗ್ರಾಹಕರಿಗೆ ತೊಂದರೆಯಾಗದಂತೆ ಚಾರ್ಜಿಂಗ್ ಮತ್ತು ಸರ್ವಿಸ್ ನೆಟ್‌ವರ್ಕ್ ಸಂಪೂರ್ಣವಾಗಿ ಸಿದ್ಧಗೊಂಡ ನಂತರವೇ ಆಯಾ ನಗರಗಳಲ್ಲಿ ಬೈಕ್ ವಿತರಣೆ ಮಾಡಲು ರಾಯಲ್ ಎನ್‌ಫೀಲ್ಡ್ ಹಂತ-ಹಂತದ ಯೋಜನೆಯನ್ನು ರೂಪಿಸಿದೆ.

ಕುಡ್ಲದ ಬೈಕ್ ಪ್ರೇಮಿಗಳಿಗೆ ಇದು ಸಂಪೂರ್ಣ ಹೊಸ ಅನುಭವ ನೀಡಲಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ಯಾರಾಚೂಟ್ ಮೂಲಕ ಯುದ್ಧಭೂಮಿಗೆ ಇಳಿಸಲಾಗುತ್ತಿದ್ದ ಹಳೆಯ ಮಿಲಿಟರಿ ಬೈಕಿನ ವಿನ್ಯಾಸದಿಂದ ಸ್ಫೂರ್ತಿ ಪಡೆದು, ಆಧುನಿಕ ತಂತ್ರಜ್ಞಾನದೊಂದಿಗೆ ಈ ಹೊಸ C6 ಬೈಕನ್ನು ಸಿದ್ಧಪಡಿಸಲಾಗಿದೆ. ಇದು ಕರಾವಳಿಯ ತೇವಾಂಶದ ಹವಾಮಾನ ಮತ್ತು ಹೆದ್ದಾರಿಗಳ ಸಂಚಾರಕ್ಕೆ ಸೂಕ್ತವಾಗಿದೆ.

Related posts

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ;

Voiceoftulunadu

ಕೆಥೋಲಿಕ್ ಸಭಾ ಉಡುಪಿ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ಸಂಘಟನೆಗಳಿಂದ ಸನ್ಮಾನ ಕೆಥೋಲಿಕ್ ಸಂಘಟನೆಯನ್ನು ಬಲಿಷ್ಠ ಗೊಳಿಸೋಣ : ವಂ. ಅನಿಲ್ ಡಿಸೋಜಾ ;

Voiceoftulunadu

ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆ:2026ಆಳ್ವಾಸ್ ಶಾಲೆಯ 04 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ;

Voiceoftulunadu

Leave a Comment