November 3, 2026
Uncategorizedರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

2029ರೊಳಗೆ ಎನ್‌ಡಿಎ ಆಡಳಿತದ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಅಮಿತ್ ಶಾ;

ಮುಂಬೈ: ಬಿಜೆಪಿ ನೇತೃತ್ವದ ಎನ್‌ಡಿಎ (NDA) ಆಡಳಿತದಲ್ಲಿರುವ 21 ರಾಜ್ಯಗಳಲ್ಲೂ 2029ರೊಳಗೆ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಮದುವೆ, ವಿಚ್ಛೇದನ, ಆಸ್ತಿ ಹಕ್ಕು, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳಿಗೆ ಧರ್ಮಭೇದವಿಲ್ಲದೆ ಒಂದೇ ರೀತಿಯ ಕಾನೂನು ರೂಪಿಸುವ ಉದ್ದೇಶವನ್ನು ಏಕರೂಪ ನಾಗರಿಕ ಸಂಹಿತೆ ಹೊಂದಿದೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗಿದೆ ಎಂದರು.ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ:ಸರ್ಕಾರದ ಭದ್ರತಾ ನೀತಿಯನ್ನೂ ಅಮಿತ್ ಶಾ ಇದೇ ವೇಳೆ ಪ್ರಸ್ತಾಪಿಸಿದರು. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ಧ `ಶೂನ್ಯ ಸಹಿಷ್ಣುತೆ’ ನೀತಿಯನ್ನು ದೇಶ ತೋರಿಸಿದೆ ಎಂದು ಹೇಳಿದರು.

2014ಕ್ಕೂ ಮುನ್ನ ಭಾರತದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣ ಪ್ರಮುಖವಾಗಿದ್ದವು ಎಂದು ಆರೋಪಿಸಿದ ಶಾ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ `ಕಾರ್ಯಕ್ಷಮತೆ ಆಧಾರಿತರಾಜಕಾರಣ’ಕ್ಕೆ ಆದ್ಯತೆ ನೀಡಲಾಗಿದೆ ಎಂದು ನುಡಿದರು.ಭಾರತ ಫಸ್ಟ್’ ನೀತಿ:ಭಾರತದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳಿಗೆ ಈಗ ಬಲವಾದ ಬೆನ್ನೆಲುಬು ಸಿಕ್ಕಿದೆ. `

ಭಾರತ ಫಸ್ಟ್’ ಎಂಬ ನೀತಿಯೇ ಸರ್ಕಾರದ ಕಾರ್ಯವೈಖರಿಗೆ ಮಾರ್ಗದರ್ಶಿಯಾಗಿದೆ. ದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದು ಕಾಲದಲ್ಲಿ `ಫ್ರಾಜೈಲ್ ಫೈವ್’ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಇದೀಗ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಿದ್ದು, ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು.ಆರ್ಟಿಕಲ್ 370, ನಕ್ಸಲಿಸಂ ಪ್ರಸ್ತಾಪ:ಈ ವೇಳೆ ಆರ್ಟಿಕಲ್ 370, ನಕ್ಸಲಿಸಂ ಮತ್ತು ಈಶಾನ್ಯ ರಾಜ್ಯಗಳ ಪರಿಸ್ಥಿತಿಯನ್ನೂ ಅಮಿತ್ ಶಾ ಪ್ರಸ್ತಾಪಿಸಿದರು. ಹಲವು ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಸಮಸ್ಯೆಗಳನ್ನು ಸರ್ಕಾರ ಎದುರಿಸಿದೆ ಎಂದು ಹೇಳಿದರು.

Related posts

ಭಜನೋತ್ಸವ’ ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಡಾ. ನಿ.ಬೀ. ವಿಜಯ ಬಲ್ಲಾಳ್ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ‘ಭಜನೋತ್ಸವ-2026’ ಕ್ಕೆ ಚಾಲನೆ ;

Voiceoftulunadu

ರಾಜಕೀಯದ ಪುಣ್ಯಕೋಟಿ ಸಿದ್ದರಾಮಯ್ಯ: ಹೈಕಮಾಂಡ್‌ಗೆ ಕೊಟ್ಟ ಮಾತು ಉಳಿಸಿಕೊಂಡು ಸಿಎಂ ಗದ್ದುಗೆ ತ್ಯಜಿಸಿದ ಸಿದ್ದುವಿಶೇಷ ವರದಿ

Voiceoftulunadu

ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ: ಕ್ರೀಡಾಕೂಟ ಉದ್ಘಾಟಿಸಿದ ಉದ್ಯಮಿ ಉದಯ ಸುಂದರ ಶೆಟ್ಟಿ ;

Voiceoftulunadu

Leave a Comment