27 C
ಮಂಗಳೂರು
July 6, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪಲ್ಲಪೂಜೆ, ಹಾಲು ಪಾಯಸದ ಅನ್ನಸಂತರ್ಪಣೆ : ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಭಾಗಿ;

ವರದಿ/ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಉಡುಪಿ : ಕುಂಜಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಶ್ರೀ ಬಬ್ಬುಸ್ವಾಮಿ ತನ್ನಿಮಾನಿಗ ಮತ್ತು ಪರಿವಾರ ದೈವಗಳು ಹಾಗೂ ಶ್ರೀ ಚಾಮುಂಡಿ ದೇವಿಯ ಪುನಃಪ್ರತಿಷ್ಠೆ-ಬ್ರಹ್ಮಕಲಶೋತ್ಸವವು ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ, ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜು. 28ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನ ಸಾರ್ವಜನಿಕರಿಗೆ ಪಲ್ಲಪೂಜೆ, ಹಾಲು ಪಾಯಸ ಸಹಿತ ಅನ್ನಸಂತರ್ಪಣೆ ನೆರವೇರಿತು.

ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜನ್ ಕೆ., ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಆಂಚನ್, ಕೋಶಾಧಿಕಾರಿ ಸೀತಾರಾಮ ಎಂ., ಜತೆ ಕೋಶಾಧಿಕಾರಿ ಸತೀಶ ಭಾಗವತ್, ಹಂಚಿನ ಮನೆತನದ ಸದಾಶಿವ ಶೆಟ್ಟಿ, ರತ್ನಾಕರ ಶೆಟ್ಟಿ, ಓಕುಡೆ ಮನೆತನದ ಅರವಿಂದ ಓಕುಡೆ, ಡಾ. ಅಶೋಕ ಕುಮಾರ್ ಓಕುಡೆ, ಮಟ್ಟಾರು ರತ್ನಾಕರ ಹೆಗ್ಡೆ, ಮಂಜುನಾಥ ಹೆಬ್ಬಾರ್, ಶಶಿರಾಜ್ ಕುಂದರ್, ಪ್ರಶಾಂತ್ ಪಾತ್ರಿ, ಅಶೋಕ ಪಾತ್ರಿ, ದೈವಸ್ಥಾನದ ಮುಕ್ಕಾಲ್ದಿ ಶೇಷು, ಗೋಪಾಲ ಶೆಟ್ಟಿಗಾರ್, ಲಕ್ಷ್ಮಣ ಕಾಮತ್, ಗಣೇಶ್ ಶೇರಿಗಾರ್ ಶ್ರೀಮತಿ ಉಷಾ ರಮಾನಂದ ಶ್ರೀಮತಿ ಕುಸುಮ ನಾಗರಾಜ್ ಭಟ್ ಸೇರಿದಂತೆ ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತುಳುನಾಡಿನ ಕಾರಣಿಕ ದೈವಗಳಲ್ಲಿ ಒಂದಾದ ಬಬ್ಬುಸ್ವಾಮಿ ಆರಾಧನೆಗೆ ಕುಂಜಿಬೆಟ್ಟು ಪ್ರಸಿದ್ಧ. ನೂತನವಾಗಿ ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಅಂಗವಾಗಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Related posts

ಕಾಪು ಬಿಜೆಪಿ ಮಹಿಳಾ ಮೋರ್ಚಾ, ಹಿರಿಯಡ್ಕ ಶಕ್ತಿ ಕೇಂದ್ರದ ವತಿಯಿಂದ ಸ್ವಚ್ಚತಾ ಕಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ;

Voiceoftulunadu

ಪ್ರಿಯದರ್ಶಿನಿ ಸೊಸೈಟಿಯ ಸಾಧನೆ ಮಾದರಿಯಾಗಿದೆ, ಗ್ರಾಹಕರ ವಿಶ್ವಾಸಗಳಿಸಿದೆ : ಯು.ಟಿ.ಖಾದರ್

voiceoftulunadu

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

Voiceoftulunadu

Leave a Comment