ವರದಿ/ಚಿತ್ರ:ಈ ಮೀಡಿಯಾ
ಪಡುಬಿದ್ರಿ: ಪಡುಬಿದ್ರಿಯ ದೀನ್ಸ್ಟ್ರೀಟ್ ನಿವಾಸಿ, ದಿವಂಗತ ಇದಿನಬ್ಬ ಅವರ ಪುತ್ರ ರಿಯಾಝ್ (46) ಅವರು ಸೌದಿ ಅರೇಬಿಯಾದ ಯಾಂಬು ನಗರದಲ್ಲಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.ಶುಕ್ರವಾರ ಹಠಾತ್ ಕೊನೆಯುಸಿರೆಳೆದಿದ್ದಾರೆ.
ಹೃದಯಾಘಾತಕ್ಕೊಳಗಾಗಿಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಪಡುಬಿದ್ರಿಯ ದೀನ್ ಸ್ಟ್ರೀಟ್ ನ ಮುಹಮ್ಮಡನ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯನಾಗಿದ್ದರು.
