28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಕರಾವಳಿಯ ಜಾನಪದ ವೈಭವ: ಕಂಬಳದ ದಿನಾಂಕಗಳು ಪ್ರಕಟ! ಇದೇ ಮೊದಲ ಬಾರಿಗೆ ‘ಮೈಸೂರು ದಸರಾ ಕಂಬಳ’ದೊಂದಿಗೆ ಅದ್ಧೂರಿ ಆರಂಭ! ಮೈಸೂರು ದಸರಾ ಕಂಬಳದೊಂದಿಗೆ ಸೀಸನ್ ಆರಂಭ: 2026-27ರ ಅಧಿಕೃತ ಕಂಬಳ ವೇಳಾಪಟ್ಟಿ ಬಿಡುಗಡೆ ;

ಮಂಗಳೂರು: ಕರಾವಳಿಯ ಜಾನಪದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 2026-27ರ ಸಾಲಿನ ಅಧಿಕೃತ ಕಂಬಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿಯು ಪ್ರಕಟಿಸಿದೆ. ಈ ಬಾರಿಯ ಕಂಬಳ ಸೀಸನ್ ಒಟ್ಟು 28 ರೋಮಾಂಚನಕಾರಿ ಕೂಟಗಳನ್ನು ಒಳಗೊಂಡಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ.

ಅಕ್ಟೋಬರ್ 18 ರಿಂದ ಆರಂಭ:ಈ ಬಾರಿಯ ಸೀಸನ್ ಅಕ್ಟೋಬರ್ 18 ಮತ್ತು 19 ರಂದು ನಡೆಯಲಿರುವ ‘ಮೈಸೂರು ದಸರಾ ಕಂಬಳ’ದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ. ಕರಾವಳಿಯ ಗಂಡುಕಲೆ ಕಂಬಳವನ್ನು ರಾಜಧಾನಿ ಬೆಂಗಳೂರಿನ ಬಳಿಕ ಈಗ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲು ಭರ್ಜರಿ ಸಿದ್ಧತೆಗಳು ನಡೆದಿವೆ.

ಪ್ರಮುಖ ಕಂಬಳ ಕೂಟಗಳ ದಿನಾಂಕಗಳು:

ನವೆಂಬರ್ 14, 2026: ಸಾನೂರು ಕಂಬಳ

ನವೆಂಬರ್ 21, 2026: ಕೊಡಂಗೆ ಕಂಬಳ

ಡಿಸೆಂಬರ್ 19, 2026: ಮಂಗಳೂರು ಕಂಬಳ

ಜನವರಿ 23, 2027: ಮೂಡುಬಿದಿರೆ ಕಂಬಳ

ಜನವರಿ 30, 2027: ಐಕಳ ಕಂಬಳ

ಫೆಬ್ರವರಿ 6, 2027: ಪುತ್ತೂರು ಕಂಬಳ

ಮೇ 1, 2027: ಕಡಂದಲೆ ಪರಾರಿ ಕಂಬಳ

ಸುಮಾರು 7 ತಿಂಗಳುಗಳ ಕಾಲ ನಡೆಯಲಿರುವ ಈ ಜೋಡುಕರೆ ಕಂಬಳ ಉತ್ಸವವು ಮೇ 1, 2027 ರಂದು ಕಡಂದಲೆ ಪರಾರಿ ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ.

ಕರಾವಳಿಯ ಕೋಣಗಳ ವೇಗ ಹಾಗೂ ಯಜಮಾನರ ಪ್ರತಿಷ್ಠೆಯ ಈ ಕ್ರೀಡಾ ಹಬ್ಬವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್‌ಗಳಿಗಾಗಿ ವಾಯ್ಸ್ ಆಫ್ ತುಳುನಾಡು ಜಾಲತಾಣವನ್ನು ವೀಕ್ಷಿಸಬಹುದಾಗಿದೆ.

Related posts

ಬಿಪಿಸಿಎಲ್ ಗ್ಯಾಸ್ ವಿತರಣೆ; ಮಂಗಳೂರಿನ ಬಿಪಿಸಿಎಲ್ ಕಾಮಧೇನು ಗ್ಯಾಸ್ ಏಜೆನ್ಸಿ ಯಲ್ಲಿ ಗ್ರಾಹಕರ ಜೊತೆ ಅಧಿಕಾರಿಗಳ ಮಾತುಕತೆ

rohankotekar123@gmail.com

ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇವರಿಂದ ಬಂಟಕಲ್ಲು ಶಾಲೆಗೆ ತರಕಾರಿ, ಜೀನಸು ಸಾಮಾಗ್ರಿ ಕೊಡುಗೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಯನ್ಸ್ ಅಧ್ಯಕ್ಷೆ ಸಿಂಥಿಯಾ ಡಿ’ಸೋಜ ;

Voiceoftulunadu

ಕೇರಳ ಸಿಎಂ ಆಗಿ ವಿ.ಡಿ ಸತೀಶನ್‌, 20 ಸಂಪುಟ ಸಚಿವರಿಂದ ಇಂದು ಪ್ರಮಾಣ ಸ್ವೀಕಾರ|

voiceoftulunadu

Leave a Comment