ಮಂಗಳೂರು: ‘ನನ್ನ ಸಂಸ್ಥೆಯ ಹಣಕಾಸು ಯೋಜನೆಯೊಂದರಲ್ಲಿ ಹೂಡಿಕೆ ಮಾಡಿದ್ದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವ ಬೆನ್ನಲ್ಲೇ ನಾನು ಎಲ್ಲಿಗೂ ಓಡಿಹೋಗಿಲ್ಲ, ವ್ಯವಹಾರ ಹಿನ್ನೆಲೆಯಲ್ಲಿ ಹೊರಗೆ ಹೋಗಿದ್ದೇನೆ. ಕೆಲವೇ ದಿನಗಳಲ್ಲಿ ಮರಳಿ ಬರಲಿದ್ದು ಎಲ್ಲಾ ಗೊಂದಲ ಗಳಿಗೆ ನಾನು ತೆರೆ ಎಳೆಯಲಿದ್ದೇನೆ’ ಎಂದು ಉದ್ಯಮಿ, ಸಿನಿಮಾ ನಿರ್ಮಾಪಕ ಲಂಜೂಲಾಲ್ ಸ್ಪಷ್ಟನೆ
ನಾನು ಓಡಿ ಹೋಗಿದ್ದೇನೆ ಎಂಬುದು ಕೆಲವರು ಮಾನ ಸಂತೋಷಕ್ಕಾಗಿ ಹರಡಿಸಲಾ ಗುತ್ತಿರುವ ಸುಳ್ಳು ಪ್ರಚಾರವಾಗಿದ್ದು, ಸಾರ್ವಜನಿಕರು ಹಾಗೂ ಹೂಡಿ ಕೆದಾರರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರುಮನವಿ ಮಾಡಿದ್ದಾರೆ. ತಮ್ಮ ಮೇಲಿನ ನಂಬಿಕೆಯಿಂದ ಹಲವರು ಕಷ್ಟಪಟ್ಟು ಸಂಪಾದಿಸಿದಹಣವನ್ನು ಸ್ಟೀಮ್ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರಿವು ನಮಗಿದೆ. ಜೀವನದ ಪ್ರತಿ ಯೊಂದು ಹಂತದಲ್ಲೂ ಕಷ್ಟಪಟ್ಟು ಬೆಳೆದು ಬಂದಿರುವ ನನಗೆ ಚೆನ್ನಾಗಿ ಗೊತ್ತಿದೆ.
ಯಾರಿಗೂ ಮೋಸ ಮಾಡುವ ಉದ್ದೇಶ ನನಗಿರಲಿಲ್ಲ. ಇರುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾಹೀರಾತು ನೀಡದೆ ಇದ್ದ ಕಾರಣಕ್ಕೆ…ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಯೂಟ್ಯೂಬರ್‌ಗಳು ಜಾಹೀರಾ ತು ಕೊಡದ ಹಿನ್ನೆಲೆಯಲ್ಲಿ ಅಸ್ತ್ರ ಸಂಸ್ಥೆ ಯ ಬಗ್ಗೆ ಸತ್ಯಾಸತ್ಯತೆ ಮರೆ ಮಾಚಿ ಅವಹೇಳನಕಾರಿಯಾಗಿ ಕಪೋಲ ಕಲ್ಪಿತ ವರದಿ ಬಿತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಲಂಜೂಲಾಲ್ ಅವರು ನ್ಯಾ ಯಾಲಯದ ಮೊರೆ ಹೋಗಿದ್ದಾರೆ.
ಮಾನ್ಯ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಅಸ್ವ ಗ್ರೂಫ್ ಕುರಿತು ಮಾನಹಾನಿಕರ ಪೋಸ್, ರೀಲ್, ವಿಡಿಯೋ ಸ್ಟೋರಿ, ಕಮೆಂಟ್, ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಹಾಗೂ ಹಂಚಿಕೊಳ್ಳುವುದಕ್ಕೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ತಂದಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಗಂಭೀರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಾಜ ಸೇವೆಯೇ ಮುಳುವಾಯಿತೇ?
ಉದ್ಯಮಿಯಾಗಿರುವುದರ ಜೊತೆಗೆ ತಾನು ಬಂದ ಪರಿಶ್ರಮದ ದಾರಿಯನ್ನು ಮರೆಯದ ಲಂಚೂ ಲಾಲ್ ಸಾಮಾಜಿಕ ಕೆಲಸ ಕಾವ್ಯಗಳ ಮೂಲಕವೂ ಪ್ರಸಿದ್ದರಾಗಿದ್ದರು. ಇವರಿಂದ ಉಪಯೋಗ ಪಡೆದವರು ಲಂಚೂಲಾಲ್ ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದರು.ಲಂಚೂಲಾಲ್ ಅವರಿಗೆ ಇದೇ ಮುಳುವಾಗಿದೆ.
ಲಂಚೂಲಾಲ್ ಅವರ ಏಳಿಗೆಯನ್ನು ಸಹಿಸದ ಮಂದಿ ಕೆಲವರನ್ನು ಛೂ ಬಿಟ್ಟು ಆಟ ಆಡಿದ್ದಾರೆ. ಅವರು ಊರಲ್ಲಿ ಇಲ್ಲದ ಹೊತ್ತಲ್ಲೇ ಪಿತೂರಿ ನಡೆಸಿ ಲಂಚೂಲಾಲ್ ಓಡಿ ಹೋಗಿದ್ದಾರೆ ಎಂದು ಗ್ರಾಹಕರನ್ನು ನಂಬಿಸಲು ನೋಡಿದ್ದಾರೆ.ಅವರ ಸಾಮಾಜಿಕ ಕೆಲಸ ಕಾವ್ಯಗಳನ್ನು ನೋಡಿಕೊಂಡು ಬಂದಿರುವ ಆತ್ಮೀಯರು ಲಂಚೂಲಾಲ್ ಅವರು ಶೀಘ್ರದಲ್ಲೇ ಊರಿಗೆ ಮರಳಲಿದ್ದು ಈ ಎಲ್ಲಾ ಅಪಪ್ರಚಾರಕ್ಕೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ.
ಅಂದ ಹಾಗೆ ಲಂಚೂಲಾಲ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿಯೂ ಸಾಮಾಜಿಕ ಬದ್ಧತೆಯ ಸಿನಿಮಾ ನಿರ್ಮಿಸಿದ್ದು ಸಿನಿಮಾರಂಗದ ಏಳಿಗೆಯಲ್ಲಿಯೂ ತಮ್ಮ ಗಣನೀಯ ಸೇವೆ ಸಲ್ಲಿಸಿದ್ದರು.
ಜನರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ. ಎರಡು ವರ್ಷಗಳ ಹಿಂದೆ ಈ ಸ್ಟೀಮ್ ಅನ್ನು ಆರಂಭಿಸಲಾಗಿತ್ತು. ನಾನು ಸದಾ ಸಮಾಜಸೇವೆಗೆ ಬದ್ದನಾಗಿದ್ದು, ನನ್ನಿಂದ ಪ್ರಯೋಜನ ಪಡೆದ ಅನೇಕ ಉದಾಹರಣೆಗಳಿವೆ. ಪ್ರಸ್ತುತ ಎದುರಾಗಿರುವ ಪರಿಸ್ಥಿತಿಯಿಂ ಅಭಿನ ದಾಗಿ ಈ ವಿಷಯಗಳನ್ನು ಹೇಳಿ ಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರ ವಿಶ್ವಾಸವನ್ನು ಕಾಪಾಡಿಕೊಳ್ಳು ವುದು ನನ್ನ ಜವಾಬ್ದಾರಿಯಾಗಿದ್ದು, ಅದನ್ನು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ.ಇಂದು ನಾನಿರುವ ಸ್ಥಾನಕ್ಕೆ ಈ ಸ್ಟೀಮ್ ಆಧಾರದಲ್ಲ; ನನ್ನ ವ್ಯಕ್ತಿತ್ವ, ಪರಿಶ್ರಮ ಮತ್ತು ಜನರ ಪ್ರೀತಿಯೇ ನಿಜವಾದ ಸಂಪತ್ತು ಎಂದು ಲಂಚೂಲಾಲ್ ಪ್ರತಿಪಾದಿಸಿದ್ದು ಶೀಘ್ರದಲ್ಲೇ ತಾನು ಹೂಡಿ ಕೆದಾರರ ಹಣವನ್ನು ಮರಳಿಸುತ್ತೇನೆಂದು ಈ ಸಂದರ್ಭದಲ್ಲಿ ಗ್ರಾಹಕರಿಗೆ ಭರವಸೆ ನೀಡಿದ್ದಾರೆ.ತಮ್ಮ ಮೇಲಿರುವ ನಂಬಿಕೆಯನ್ನು ಹೂಡಿಕೆದಾರರು ಕಳೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
