September 6, 2026
Uncategorizedಅಂತಾರಾಷ್ಟ್ರೀಯಕ್ರೈಮ್/ಅವಘಡರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಬೊಲಿವಿಯಾದ ಸೇನಾ ಶಿಬಿರದಲ್ಲಿ ಭಾರೀ ಸ್ಫೋಟ10 ಮಂದಿ ಸಾವು, 62ಕ್ಕೂ ಹೆಚ್ಚು ಜನರಿಗೆ ಗಾಯ — ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿ ;

ಕೃಪೆ: ಪಿಂಗಾರ

ವಿಯಾಚಾ (ಬೊಲಿವಿಯಾ), ಸೆ. 5: ದಕ್ಷಿಣ ಅಮೆರಿಕದ ಬೊಲಿವಿಯಾದ ವಿಯಾಚಾ ನಗರದ ಸೇನಾ ನೆಲೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸೇನಾ ಬ್ಯಾರಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪಟಾಕಿ ಸಂಗ್ರಹಣಾ ಗೋದಾಮಿನಲ್ಲಿ ಬೆಂಕಿ:ಪ್ರಾಥಮಿಕ ಮಾಹಿತಿಯ ಪ್ರಕಾರ, ರಕ್ಷಣಾ ಸಚಿವಾಲಯಕ್ಕೆ ಸೇರಿದ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿ ಹಾಗೂ ಇತರ ಪೈರೋಟೆಕ್ನಿಕ್ ಸಾಮಗ್ರಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬಳಿಕ ಭಾರೀ ಸ್ಫೋಟ ಸಂಭವಿಸಿದೆ. ವಿಯಾಚಾ ನಗರವು ರಾಜಧಾನಿ ಲಾ ಪಾಸ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ.ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶವೇ ನಡುಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.

ಬೆಂಕಿಗೆ ನಿಖರ ಕಾರಣವೇನು ಮತ್ತು ಸುರಕ್ಷತಾ ನಿಯಮಗಳನ್ನು ಮೀರಿ ಇಷ್ಟು ಪ್ರಮಾಣದ ಪಟಾಕಿ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಹೇಗೆ ಸಂಗ್ರಹಿಸಲಾಗಿತ್ತು ಎಂಬುದರ ಕುರಿತು ಸೇನೆ ಮತ್ತು ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ.ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು:ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಾಸ್ಕಾ ಅವರ ಪ್ರಕಾರ, ಘಟನೆಯಲ್ಲಿ 10ರಿಂದ 15 ಮಂದಿ ಮೃತಪಟ್ಟಿರುವ ಶಂಕೆಯಿದೆ.

ಗಾಯಗೊಂಡ 62 ಮಂದಿಯಲ್ಲಿ 52 ಮಂದಿ ನಾಗರಿಕರಾಗಿದ್ದು, ಉಳಿದವರು ಸೇನಾ ಸಿಬ್ಬಂದಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಲಾ ಪಾಸ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಮತ್ತೊಂದು ಸ್ಫೋಟದ ಆತಂಕ:ಘಟನಾ ಸ್ಥಳದಲ್ಲಿ ಇನ್ನೂ ಹೆಚ್ಚಿನ ಉಷ್ಣಾಂಶ ಇರುವುದರಿಂದ ಮತ್ತೊಂದು ಸ್ಫೋಟ ಸಂಭವಿಸುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ವರದಿ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳು ಘಟನಾ ಸ್ಥಳದಿಂದ ಕನಿಷ್ಠ 150 ಮೀಟರ್ ದೂರದಲ್ಲಿರಲು ಸೂಚಿಸಲಾಗಿದೆ.ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಸ್ಫೋಟದ ನಿಖರ ಕಾರಣ ಹಾಗೂ ಸುರಕ್ಷತಾ ಲೋಪಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಬೆಂಗಳೂರಿನ ಗುಬ್ಬಿವಾಣಿ ಟ್ರಸ್ಟ್ “ಅವಳ ಹೆಜ್ಜೆ” ಕಿರುಚಿತ್ರೋತ್ಸವ- 2026″ರ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರು ಪ್ರದರ್ಶನ;

Voiceoftulunadu

ದೆಹಲಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ: ತುಳುವರಿಂದ ಕಷಾಯ, ಮೆಂತ್ಯ ಗಂಜಿ ವಿತರಣೆ ಪ್ರಕಾಶ್ ಶೆಟ್ಟಿ ಉಳೆಪಾಡಿ ಹಾಗೂ ಉಸ್ಮಾನ್ ಅಬ್ದುಲ್ ಷರೀಫ್‌ ನೇತೃತ್ವ ;

Voiceoftulunadu

ಅಹಮದಾಬಾದಿನಲ್ಲಿ ಪ್ರಿಯತಮನಿಗಾಗಿ 1.66 ಕೋಟಿ ಚಿನ್ನ ಕದ್ದು ಪರಾರಿಯಾದ ಹರ್ಷಿದಾ ಶೆಟ್ಟಿ ಇಬ್ಬರ ಬಂಧನ:

voiceoftulunadu

Leave a Comment