November 3, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಶೇಷ ಅಂಕಣಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಮುಲ್ಕಿಸೀಮೆ ಅರಸು ಕಂಬಳ ಸಮಿತಿ ವತಿಯಿಂದ ವರ್ಷಂಪ್ರತಿ ವಿಜೃಂಭಣೆಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆ ಅರಸು ಕಂಬಳ ;

ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳವು ಅನಾಧಿಕಾಲದಿಂದ ಅರಸರು ,ಊರವರು ಹಾಗೂ ಕಂಬಳ ಅಭಿಮಾನಿಗಳ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು ಸಂಪ್ರದಾಯಿಕ ಪ್ರಕಾರ ಅರಸರು ಕಂಬಳವನ್ನು ವೀಕ್ಷಿಸುವಂತಿಲ್ಲ. ಅರಸರು ಕಂಬಳ ನಡೆಯುವ ದಿನ ಉಪವಾಸ ಕುಳಿತು ಅರಮನೆಯ ಚಾವಡಿಯಲ್ಲಿ ಕಂಬಳವನ್ನು ನೋಡದೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವ ಕ್ರಮವಿರುತ್ತದೆ.

ಅರಸರು ಕಂಬಳ ಗದ್ದೆಗೆ ಇಳಿಯುವಂತಿಲ್ಲ ,ಈ ಕಾರಣದಿಂದಾಗಿ ಹಿಂದಿನ ಅರಸರುಒಂಬತ್ತು ಮಾಗಣೆಯ ಗುತ್ತು ಬರ್ಕೆಯವರು ಊರ ನಾಗರಿಕರು ಹಾಗೂ ಕಂಬಳ ಅಭಿಮಾನಿಗಳನ್ನು ಸೇರಿಸಿಕೊಂಡು ಸಮಿತಿಯನ್ನು ರಚಿಸಲಾಗಿತ್ತು ,ತದನಂತರ ಕಂಬಳ ಸಮಿತಿಯವರು ಊರ ಪರ ಊರ ದಾನಿಗಳ ಸಹಾಯದಿಂದ ಕಂಬಳದ ಕರೆ ,ಕಂಬಳದ ಪೆವಿಲಿಯನ್ ಹಾಗೂ ಕಂಬಳದ ಖರ್ಚನ್ನು ಭರಿಸುತ್ತಿದ್ದರು .

ಹಿಂದೆ ಸಾಂಪ್ರದಾಯಿಕವಾಗಿ ಅರಸರ ಅನುಮತಿಯೊಂದಿಗೆ ಮಾಗಣೆ ಗುತ್ತು ಬರ್ಕೆಯವರು ಹಾಗೂ ಊರವರು ಸೇರಿಕೊಂಡು ಮಹಾಸಭೆಯನ್ನು ಕರೆದು ಸಮಿತಿಯನ್ನು ರಚಿಸುವ ಕ್ರಮ ರೂಢಿಯಲ್ಲಿತ್ತು.

ಈಗಿನ ಅರಸರಾದ ದುಗ್ಗಣ್ಣ ಸಾವಂತರು ಸಮಿತಿಯ ಗೌರವಾಧ್ಯಕ್ಷರು ಗಳಾದ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ,ಮಾಜಿ ಸಚಿವರಾದ ಅಭಯ ಚಂದ್ರ ಜೈನ್, ಜಾಗತಿಕ ಬಂಟ ರಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ,ಉದ್ಯಮಿಗಳಾದ ಅರವಿಂದ ಪೂಂಜಾ ಹಾಗೂ ಹಿರಿಯರಾದಭುಜಂಗ ಶೆಟ್ಟಿ ಇವರ ಗಮನಕ್ಕೂ ತಾರದೆ ಒಂಬತ್ತು ಮಾಗಣೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಹಾಸಭೆಯನ್ನು ಕರೆಯದೆ ಸಮಿತಿಯನ್ನು ಬರ್ಕಾಸ್ತು ಗೊಳಿಸಿರುತ್ತೇನೆಂದು ತಿಳಿಸಿರುವುದು ವಿಷಾದನೀಯ.

2024-2025 ರ ಕಂಬಳದ ಅನುದಾನವು ಕೂಡ ನಮ್ಮ ಈ ಸಮಿತಿಗೆ ಬಂದಿರುತ್ತದೆ. ಕಂಬಳ ಸಮಿತಿಯವರು ಕಂಬಳ ಸಮಿತಿಯ ಸಭೆಯನ್ನು ಅಧ್ಯಕ್ಷರ ಅನುಮತಿಯೊಂದಿಗೆ ಯಾವ ಸ್ಥಳದಲ್ಲಿ ನಡೆಸ ಬೇಕೆಂಬುದು ಕಂಬಳ ಸಮಿತಿಯ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ. 6-9-2026 ರ ಕೋಸ್ಟಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಂಬಳ ಸಮಿತಿಯವರು ಈ ವರ್ಷದ ಕಂಬಳವನ್ನು ವಿಜೃಂಭಣೆಯಿಂದ ನಡೆಸುವುದೆಂದು ಅಧಿಕೃತ ನಿರ್ಣಯವನ್ನು ಮಾಡಿರುತ್ತೇವೆ

Related posts

ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ: ತಾಲೂಕು ಕಚೇರಿಗಳಿಗೆ ಲೋಕಾ ದಾಳಿ ;

Voiceoftulunadu

ಶ್ರೇಷ್ಠತೆಗಾಗಿ ಮರುರೂಪ, ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚೇತನ್‌ ಆರ್ ವಿಶೇಷ ಲೇಖನ;

Voiceoftulunadu

ಕಂಬಳದ ಗದ್ದೆಯಂತಾಗಿರುವ ಕೊಳಚಿಕಂಬಳ ರಸ್ತೆ : ಅಭಿವೃದ್ಧಿ ಕಡೆಗಣಿಸಿದಲ್ಲಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರಿಂದ ನಿರ್ಧಾರ ;

Voiceoftulunadu

Leave a Comment