November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಿನಿಮಾಸಿನಿಮಾ/ಮನರಂಜನೆ

ನವೆಂಬರ್ ತಿಂಗಳಿನಲ್ಲಿ “ಗಾಡ್ ಪ್ರಾಮಿಸ್” ಚಲನಚಿತ್ರ ತೆರೆಗೆ ಬರಲು ಸಿದ್ಧತೆ;

ಬೆಂಗಳೂರು/ಮಂಗಳೂರು : ನವೆಂಬರ್‌ನಲ್ಲಿ ‘ಗಾಡ್‌ ಪ್ರಾಮಿಸ್’ಸೂಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಗಾಡ್ ಪ್ರಾಮಿಸ್’ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಸದ್ಯ ಚಿತ್ರೀಕರಣ ನಂತರದ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆ ಮಾಡಿದೆ.

‘ಪವಿ ಕೇರ್‌ಟೇಕ‌ರ್’, ‘ತಲೈವನ್ ತಲೈವಿ’ ಚಿತ್ರಗಳಲ್ಲಿ ಗಮನಸೆಳೆದಿರುವ ಜೂಹಿ ಜಯಕುಮಾರ್, ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಗೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಮೋದ್‌ ಶೆಟ್ಟಿ, ಅರವಿಂದ್ ಬೋಳಾ‌ರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ದಿ ಪ್ರಶಾಂತ್, ಪ್ರಸಿದ್ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ ಮತ್ತಿತರರು ತಾರಾಗಣದಲ್ಲಿದ್ದಾರೆ.

ಪಾಂಚಜನ್ಯ ಫಿಲ್ಮ ಪ್ರೊಡಕ್ಷನ್ ಬ್ಯಾನರ್‌ನಡಿ ಮಹೇಂದ್ರ ಶೆಟ್ಟಿ ನಿರ್ಮಿಸುತ್ತಿರುವ ಚಿತ್ರಕ್ಕೆ ಭರತ್‌ ಮಧುಸೂದನ್ ಸಂಗೀತ, ಗುರುಪ್ರಸಾದ್ ನರ್ನಾಡ್ ಛಾಯಾಚಿತ್ರಗ್ರಹಣ, ನವೀನ್ ಶೆಟ್ಟಿ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

Related posts

ಬೆಂಗಳೂರು ಅಲೆಯನ್ಸ್ ವಿಶ್ವವಿದ್ಯಾಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ ಮತ್ತು ಪ್ರದರ್ಶನ;ಸಂಶೋಧನಾ ಪ್ರಬಂಧ ಮಂಡನೆಗೆ ಅವಕಾಶ:

voiceoftulunadu

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಸುವರ್ಣ ಆಯ್ಕೆ ;

Voiceoftulunadu

ಹಿರಿಯ ಛಾಯಾ ಪತ್ರಕರ್ತ ಅಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪಿಪಿಎಸ್ಎ ಗೌರವ

voiceoftulunadu

Leave a Comment