November 4, 2026
Uncategorizedಅಂತಾರಾಷ್ಟ್ರೀಯಕ್ರೈಮ್/ಅವಘಡರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಹಿಂದೂ ಮಹಾಸಾಗರದಲ್ಲಿ ಮೂರು ಪ್ರಬಲ ಚಂಡಮಾರುತಗಳ ಸಾಧ್ಯತೆ: ಇಸ್ರೋ ವಿಜ್ಞಾನಿಗಳ ಎಚ್ಚರಿಕೆ;

ಕೃಪೆ: ಪಿಂಗಾರ

ನವದೆಹಲಿ, ಸೆ. 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ವರ್ಷದ ಕೊನೆಯ ತ್ರೈಮಾಸಿಕವಾದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಉತ್ತರ ಹಿಂದೂ ಮಹಾಸಾಗರದಲ್ಲಿ ಮೂರು ಪ್ರಬಲ ಚಂಡಮಾರುತಗಳು ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ಚಂಡಮಾರುತಗಳು ಕರಾವಳಿ ಪ್ರದೇಶಗಳಲ್ಲಿ ಆತಂಕವನ್ನು ಉಂಟುಮಾಡುತ್ತವೆ. ಆದರೆ, ಪ್ರಸ್ತುತ ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಈ ಚಂಡಮಾರುತಗಳು ಮಳೆಯ ರೂಪದಲ್ಲಿ ಪರಿಹಾರ ನೀಡುವ ಸಾಧ್ಯತೆಯಿದ್ದು, ಆಶಾಕಿರಣವಾಗಬಹುದು.

ಮುಂಗಾರು ಮಳೆ ಪೂರ್ಣಗೊಂಡ ನಂತರದ ಹಿಂಗಾರು ಅವಧಿಯಲ್ಲಿ ವಾತಾವರಣದಲ್ಲಿನ ಅಸ್ಥಿರತೆಗಳಿಂದಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ರೂಪುಗೊಳ್ಳುವುದು ಸಾಮಾನ್ಯವಾಗಿದೆ.

ಇಸ್ರೋ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹವಾಮಾನ ಮಾದರಿಗಳ ಪ್ರಕಾರ, ಪ್ರಸ್ತುತ ವಾತಾವರಣದ ಪರಿಸ್ಥಿತಿಗಳನ್ನು ಗಮನಿಸಿದರೆ ಅಕ್ಟೋಬರ್‌ನಿಂದ ವರ್ಷದ ಅಂತ್ಯದವರೆಗೆ ಮೂರು ಪ್ರಮುಖ ಚಂಡಮಾರುತಗಳು ರೂಪುಗೊಳ್ಳುವ ಸಾಧ್ಯತೆ ಇದೆ.

ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಭಾರಿ ಮಳೆಯ ಸಾಧ್ಯತೆ:

ಪ್ರಾಥಮಿಕ ವರದಿಗಳ ಪ್ರಕಾರ, ಈ ಚಂಡಮಾರುತಗಳ ಪ್ರಭಾವದಿಂದ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಹವಾಮಾನ ವಿಜ್ಞಾನಿಗಳು ಪ್ರಸ್ತುತ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚಂಡಮಾರುತಗಳು ಯಾವ ಪ್ರದೇಶದಲ್ಲಿ ಹುಟ್ಟಿಕೊಳ್ಳುತ್ತವೆ ಹಾಗೂ ಯಾವ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಹವಾಮಾನ ವ್ಯವಸ್ಥೆಗಳು ಸಂಪೂರ್ಣವಾಗಿ ರೂಪುಗೊಂಡ ಬಳಿಕವಷ್ಟೇ ನಿಖರವಾಗಿ ತಿಳಿಯಲು ಸಾಧ್ಯ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ಬರದ ಆತಂಕ ಎದುರಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೃಷಿ ಚಟುವಟಿಕೆಗಳ ಜೊತೆಗೆ ಕುಡಿಯುವ ನೀರಿನ ಪೂರೈಕೆಯ ಮೇಲೂ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ, ಇಸ್ರೋ ಮುನ್ಸೂಚನೆ ನೀಡಿರುವ ಚಂಡಮಾರುತಗಳು ಪಶ್ಚಿಮ ಕರಾವಳಿ ಅಥವಾ ದಕ್ಷಿಣ ಭಾರತದ ಒಳನಾಡಿನತ್ತ ಸಾಗಿದರೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದು, ಬರ ಪರಿಸ್ಥಿತಿಯನ್ನು ಕೆಲಮಟ್ಟಿಗೆ ತಗ್ಗಿಸಲು ಸಾಧ್ಯವಾಗಬಹುದು ಎಂಬ ಆಶಾಭಾವನೆ ರೈತ ಸಮುದಾಯದಲ್ಲಿ ಮೂಡಿದೆ.

Related posts

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭಅಕಾಡೆಮಿ ಸಾಹಿತ್ಯಕ್ಕೆ ಮೀಸಲಾಗಬೇಡಿ, ಸಂಸ್ಕೃತಿ, ಸಂಸ್ಕಾರ ಪಸರಿಸಿ: ಶಾಸಕ ಉಮಾನಾಥ ಕೋಟ್ಯಾನ್

Voiceoftulunadu

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಇಂಜಿನಿಯರ್ ದಿನಾಚರಣೆ” : ಕಾರ್ಯಕ್ರಮ ಉದ್ಘಾಟಿಸಿದ ಎನ್ ಐ ಟಿ ಕೆ ಸುರತ್ಕಲ್ನ ನಿವೃತ್ತ ಪ್ರಾಧ್ಯಾಪಕರಾದ ಡಾ. ಸುಬ್ಬಣ್ಣಭಟ್;

Voiceoftulunadu

ಕೈಕಂಬ:ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ವಾರ್ಷಿಕ ಮಹಾಸಭೆ. ರೂ 77.96 ಲಕ್ಷ ಲಾಭ, ಶೇ 25 ಡಿವಿಡೆಂಡ್ ಘೋಷಣೆ ;

Voiceoftulunadu

Leave a Comment