November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕರಂದಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ಭಜನಾ ಮಂಡಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ : ಮಂಜೂರಾತಿ ಪತ್ರ ಹಸ್ತಾಂತರಿಸಿದ ಭಜನಾ ಪರಿಷತ್ ಅಧ್ಯಕ್ಷ ಅರುಣ್ ಶೆಟ್ಟಿ, ಯೋಜನಾಧಿಕಾರಿ ಮಮತಾ ಶೆಟ್ಟಿ;

ವರದಿ/ ಚಿತ್ರ: ಈ ಮೀಡಿಯಾ

ಕಾಪು, ಕರಂದಾಡಿ: ಕರಂದಾಡಿ ಶ್ರೀ ಬ್ರಹ್ಮ ಲಿಂಗೇಶ್ವರಭಜನಾ ಮಂಡಳಿಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ದಿಂದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ 1.ಲಕ್ಷ ದ ಮಂಜೂರಾತಿ ಪತ್ರವನ್ನು ಕಾಪು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಅರುಣ್ ಶೆಟ್ಟಿ ಹಾಗೂ ಕಾಪು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಭಾನುವಾರ ಹಸ್ತಾಂತರಿಸಿದರು.

ಈ ಸಂದರ್ಭ ಊರಿನ ಮುಖಂಡರಾದ ದಿನೇಶ್ ಶೆಟ್ಟಿ,ವಿಷ್ಣುಮೂರ್ತಿ ದೇವಸ್ಥಾನದ ಮೊಕೇಸರ ಪದ್ಮನಾಭಶಾನುಬೋಗ್, ಕರಂದಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಅವಿನಾಶ್, ಪದಾಧಿಕಾರಿಗಳಾದ ಶ್ರೀಧರ್ ಶೆಟ್ಟಿಗಾರ್, ಭಾಸ್ಕರ್ ಕರಂದಾಡಿ, ಅರುಣ್ ರಾವ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಮೇಲ್ವಿಚಾರಕರಾದ ಶ್ರೀಮತಿ ವಿನುತಾ, ಶೌರ್ಯ ತಂಡದ ಕಿಶೋರ್ ಆಚಾರ್ಯ, ಸದಾಶಿವ, ರಜನಿ, ಶರ್ಮಿಳಾ, ಪ್ರಮೀಳಾ, ಸುಧಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಎನ್ ಎಸ್ ಎಸ್ : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕಾಪು ಬೀಚ್ ಸ್ವಚ್ಛತಾ ಅಭಿಯಾನ : ಅಭಿಯಾನಕ್ಕೆ ಸಹಕಾರ ನೀಡಿದ ಕಾಪು ಬೀಚ್ ಫ್ರೆಂಡ್ಸ್ ;

Voiceoftulunadu

ದೇರಳಕಟ್ಟೆಯ ಫಾದರ್ ಮುಲ್ಲರ್‌ನಲ್ಲಿ ಪ್ರೇರಣ ವಿಜ್ಞಾನ ಉತ್ಸವ 2026ಕ್ಕೆ ಚಾಲನೆ ;

Voiceoftulunadu

ಎರಡು ದಿನಗಳಲ್ಲಿ ಕುಡಿಯುವ ನೀರಿನ ಘಟಕ ಸ್ವಚ್ಛಗೊಳಿಸಿ: ಶಾಸಕ ರಾಜೇಶ್ ನಾಯ್ಕ್ ಸೂಚನೆ ;

Voiceoftulunadu

Leave a Comment