November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಎನ್ ಎಸ್ ಎಸ್ : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕಾಪು ಬೀಚ್ ಸ್ವಚ್ಛತಾ ಅಭಿಯಾನ : ಅಭಿಯಾನಕ್ಕೆ ಸಹಕಾರ ನೀಡಿದ ಕಾಪು ಬೀಚ್ ಫ್ರೆಂಡ್ಸ್ ;

ಕಾಪು : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಕಾಪು ಬೀಚ್ ಫ್ರೆಂಡ್ಸ್, ಕಾಪು ಪುರಸಭೆಯ ಸಹಕಾರದಲ್ಲಿ ಶನಿವಾರ ಕಾಪು ಬೀಚ್ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಅಭಿಯಾನ ನೆರವೇರಿತು.ಸ್ವಚ್ಛತಾ ಅಭಿಯಾನವನ್ನು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್ ಬೀಚ್ ನಲ್ಲಿ ಕಸ ಹೆಕ್ಕುವ ಮೂಲಕ ಉದ್ಘಾಟಿಸಿದರು.

ಅವರು ಮಾತನಾಡಿ, ಕರಾವಳಿ ಅಭಿವೃದ್ಧಿ ಮಂಡಳಿಯ ಆಯೋಜನೆಯಲ್ಲಿ ಉಳ್ಳಾಲ, ಪಣಂಬೂರು, ಮಲ್ಪೆ, ಹೊನ್ನಾವರ, ಕಾರವಾರ ಬೀಚ್ ಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾದೊಂದಿಗೆ ಸ್ವಚ್ಛತಾ ಆಂದೋಲನಹಮ್ಮಿಕೊಂಡಿದ್ದೇವೆ.

ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್, ಡಿಸಿಎಂ ಡಾ. ಪರಮೇಶ್ವರ್ ರವರು ಸಮುದ್ರ ಮತ್ತು ನದಿ ಕಿನಾರೆಗಳನ್ನು ಸ್ವಚ್ಛಗೊಳಿಸಲೆಂದೇ ಹಲವಾರು ಯೋಜನೆ ಹಮ್ಮಿಕೊಂಡಿದ್ದಾರೆ ಎಂದರು.

ಈ ಸಂದರ್ಭ ಕಾಪು ಬೀಚ್ ಫ್ರೆಂಡ್ಸ್ ನ ಚಂದ್ರಶೇಖ‌ರ್ ಬೀರಾ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಪರಮೇಶ್ವರ ಎಂ ಮೊಗವೀರ, ಸಹ ಶಿಬಿರಾಧಿಕಾರಿ ಲಕ್ಷ್ಮೀಕಾಂತ್ ಕಾಪು, ತಾರಾನಾಥ ಪೂಜಾರಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಮತ್ತು ಪಡು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಖತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ;

Voiceoftulunadu

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುಬ್ಬಿವಾಣಿ ಟ್ರಸ್ಟ್‌ನ ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ;

Voiceoftulunadu

ಉಡುಪಿ – ಉಚ್ಚಿಲ ದಸರಾ 2026: ಅ. 18 ರಂದು ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ”ಅಬ್ಬರದ ಪಿಲಿ ಪಂಥ 2026 ಸೀಸನ್ 1″ ರ ಪೋಸ್ಟ‌ರ್ ಬಿಡುಗಡೆಗೊಳಿಸಿದ ಉದ್ಯಮಿ ಉದ್ಯಮಿ ಯುವರಾಜ್ ಕಿದಿಯೂರು ;

Voiceoftulunadu

Leave a Comment