November 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಯುವ ಮನಸ್ಸುಗಳಿಂದ ಹಸಿರು ಕ್ರಾಂತಿಯತ್ತ: ಒಂದು ವರ್ಷದಲ್ಲಿ 10 ಲಕ್ಷ ಮರಗಳನ್ನು ನೆಡುವ ಸಂಕಲ್ಪದೊಂದಿಗೆ ರಯಾನ್ ಗ್ರೂಪ್‌ನಿಂದ ಸುಸ್ಥಿರ ಪರಿಸರ ಅಭಿಯಾನಕ್ಕೆ ಚಾಲನೆ ;

ವರದಿ /ಚಿತ್ರ : ರೋನ್ಸ್ ಬಂಟ್ವಾಳ್

ಭಾರತ: ರಯಾನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ರೋಟರಿ ಕ್ಲಬ್‌ನೊಂದಿಗಿನ ತನ್ನ ದೀರ್ಘಕಾಲದ ಸಹಭಾಗಿತ್ವದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ರೋಟರಿ ಇಂಟರ್‌ನ್ಯಾಷನಲ್‌ನ ಜಿಲ್ಲಾ ಗವರ್ನರ್ ಆಗಿ ಶ್ರೀ ರವಿಶಂಕರ್ ದಕೋಜು ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ರಯಾನ್ ಗ್ರೂಪ್ ವತಿಯಿಂದ 10 ಲಕ್ಷ ಮರಗಳನ್ನು ನೆಡುವ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಘೋಷಣೆ ಮಾಡಲಾಯಿತು.

ಬೆಂಗಳೂರ, ಪುಣೆ, ಮುಂಬೈ, ಜೈಪುರ, ದೆಹಲಿ, ಸೂರತ್, ಬೋಲ್ಪುರ (ಪಶ್ಚಿಮ ಬಂಗಾಳ), ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ದೇಶದ 10 ನಗರಗಳಲ್ಲಿ ವರ್ಷಪೂರ್ತಿ ನಡೆಯಲಿರುವ ಈ ಸುಸ್ಥಿರ ಪರಿಸರ ಅಭಿಯಾನದ ಉದ್ದೇಶ, ಪರಿಸರ ಸಂರಕ್ಷಣೆಯ ಜವಾಬ್ದಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸಮುದಾಯಗಳನ್ನು ಹಸಿರು ಪರಿಸರ ನಿರ್ಮಾಣದತ್ತ ಪ್ರೇರೇಪಿಸುವುದಾಗಿದೆ.

ರಯಾನ್ ಗ್ರೂಪ್‌ನ ಎಲ್ಲಾ ಶಾಲಾ ಆವರಣಗಳಲ್ಲಿ ಏಕಕಾಲದಲ್ಲಿ ಈ ಅಭಿಯಾನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಇದು ಪರಿಸರ ಸಂರಕ್ಷಣೆ, ಸಮಾಜಸೇವೆ ಹಾಗೂ ರಾಷ್ಟ್ರ ನಿರ್ಮಾಣದ ಬಗೆಗಿನ ಸಮಾನ ಬದ್ಧತೆಯನ್ನು ಪ್ರತಿಬಿಂಬಿಸಿತು.ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಈ ವೃಕ್ಷಾರೋಪಣ ಅಭಿಯಾನವು ವರ್ಷಪೂರ್ತಿ ನಡೆಯುವ ಹಸಿರು ಆಂದೋಲನದ ಆರಂಭವಾಗಿದೆ.

ರಯಾನ್ ಗ್ರೂಪ್‌ನ ವ್ಯಾಪಕ ಶಾಲಾ ಜಾಲದ ಮೂಲಕ 2026–27ನೇ ಶೈಕ್ಷಣಿಕ ವರ್ಷದುದ್ದಕ್ಕೂ ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯ ನಡೆಯಲಿದೆ.ಈ ಹಸಿರು ಆಂದೋಲನದ ಭಾಗವಾಗಿ, ಗೌರವಾನ್ವಿತ ಅಧ್ಯಕ್ಷರಾದ ಡಾ. ಎ. ಎಫ್. ಪಿಂಟೋ ಅವರ “ಪ್ರತಿಯೊಬ್ಬರೂ ಒಂದೊಂದು ಗಿಡ ನೆಡೋಣ” (Each One, Plant One) ಎಂಬ ದೂರದೃಷ್ಟಿಯ ಆಶಯಕ್ಕೆ ಅನುಗುಣವಾಗಿ, 2026ರ ಅಕ್ಟೋಬರ್ 7ರಂದು ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್, ಐಸಿಎಸ್‌ಇ, ಖಾರ್ಘರ್ ವತಿಯಿಂದ ಸ್ಥಳೀಯ ಜಾತಿಯ ಮರಗಳನ್ನು ನೆಡುವ ಅಭಿಯಾನವನ್ನು ಆಯೋಜಿಸಲಾಯಿತು.

ನವಿಮುಂಬೈ ಸನ್‌ರೈಸ್ ರೋಟರಿ ಕ್ಲಬ್ ಹಾಗೂ ಪನ್ವೇಲ್ ಮುನ್ಸಿಪಲ್ ಕಾರ್ಪೊರೇಷನ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ರಯಾನ್ ಗ್ರೂಪ್‌ನ ಸುವರ್ಣ ಮಹೋತ್ಸವ ವರ್ಷದ ಸಂದರ್ಭದಲ್ಲಿ ಈ ಉಪಕ್ರಮಕ್ಕೆ ವಿಶೇಷ ಮಹತ್ವವಿದೆ. ಐದು ದಶಕಗಳಿಂದ ಜವಾಬ್ದಾರಿಯುತ, ಸಹೃದಯಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಯುವ ನಾಗರಿಕರನ್ನು ರೂಪಿಸುತ್ತಿರುವ ಸಂಸ್ಥೆಯ ಸಾಧನೆಗೆ ಈ ಅಭಿಯಾನ ಮತ್ತೊಂದು ಅರ್ಥಪೂರ್ಣ ಸೇರ್ಪಡೆಯಾಗಿದೆ.

ಖಾರ್ಘರ್‌ನ ಸೆಕ್ಟರ್ 21ರ ಗ್ರಾಮ ವಿಕಾಸ್ ಭವನ ತರಕಾರಿ ಮಾರುಕಟ್ಟೆ ಹಾಗೂ ಸೆಕ್ಟರ್ 4ರ ಸಿಡ್ಕೋ ಉದ್ಯಾನವನದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. 10 ಮತ್ತು 11ನೇ ತರಗತಿಗಳ ತಲಾ 50 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಒಟ್ಟು 50 ಸ್ಥಳೀಯ ಜಾತಿಯ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡಿದರು.

ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಶಿಕ್ಷಣದೊಂದಿಗೆ ಸಮನ್ವಯಗೊಳಿಸುವ ಮೂಲಕ, ಸುಸ್ಥಿರ ಭವಿಷ್ಯ ನಿರ್ಮಾಣದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ರಯಾನ್ ಗ್ರೂಪ್ ಪ್ರೋತ್ಸಾಹಿಸುತ್ತಿದೆ. ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಕೃತಿಯ ಬಗ್ಗೆ ಕಾಳಜಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ.

Related posts

ಸಚಿವ ರಿಜ್ವಾನ್ ಅರ್ಷದ್ದೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ಸಿಂದ ಆತ್ಮೀಯ ಸ್ವಾಗತ : ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಹೆಜಮಾಡಿ ಟೋಲ್ಲೇಟ್ ಬಳಿ ಆತ್ಮೀಯ ಸ್ವಾಗತ ;

Voiceoftulunadu

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಮಾನ ಮನಸ್ಕ ತಂಡ ಉಡುಪಿ ಸಹಯೋಗದ ಕಾರ್ಯಕ್ರಮ;

Voiceoftulunadu

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ ಕೆ ಶಿವಕುಮಾರ್; ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ :

Voiceoftulunadu

Leave a Comment