November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಕಸಾಪ ಅಧ್ಯಕ್ಷ ರವಿರಾಜ್ ಹೆಚ್. ಪಿಯವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಪ್ರದಾನ ಕಾರ್ಯಕ್ರಮ : ಉಡುಪಿ ಯಕ್ಷಗಾನ ಕಲಾ ರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆದ ಸನ್ಮಾನ ;

ವರದಿ /ಚಿತ್ರ : ಈ ಮೀಡಿಯಾ

ಉಡುಪಿ: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ನೆನಪಿಗಾಗಿ ರಾಜ್ಯದ ಪ್ರತಿಯೊಂದು ಕಡೆಗಳಲ್ಲಿ ವೃತ್ತಕ್ಕೆ ರಾಯಣ್ಣ ಹೆಸರಿಡಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಉಡುಪಿ ಯಕ್ಷಗಾನ ಕಲಾ ರಂಗದ ಐ ವೈ ಸಿ ಸಭಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವತಿಯಿಂದ ಆದಿತ್ಯವಾರ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಂಗಕರ್ಮಿ ಸಂಘಟಕ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್. ಪಿ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಿದರು.

ಸಂಗೊಳ್ಳಿ ರಾಯಣ್ಣ ಅವರನ್ನು 250 ದೈವಿಕ ಶಕ್ತಿ ಅವರು ವೀರಮರಣ ಹೊಂದಿದ ಶತಮಾನಗಳ ಬಳಿಕ ಅಗಸ್ಟ್ ಗಲ್ಲಿಗೇರಿಸಿದ ಹೊಂದಿದೆ15ರಂದು ದೇಶ ಸ್ವಾತಂತ್ರ್ಯವಾಯಿತು. ಇದು ರಾಯಣ್ಣನವರ ಜನ್ಮದಿನ ಅದೇ ರೀತಿ ಅವರು ವೀರ ಮರಣವನ್ನು ಅಪ್ಪಿದ ಜನವರಿ 26 ದೇಶದ ಗಣರಾಜ್ಯೋತ್ಸವ ಇದು ರಾಯಣ್ಣ ಅವರಲ್ಲಿದ್ದ ದೈವಿಕ ಶಕ್ತಿಯ ಪ್ರತೀಕವಾಗಿದೆ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ರಾಯಣ್ಣ ಅವರು ಬದುಕಿದ್ದು ಕೇವಲ 35 ವರ್ಷವಾದರೂ ಅವರು ಮಾಡಿದ ಸಾಧನೆ ಎಲ್ಲರಿಗೂ ಮಾದರಿ ಇಂತಹ ಅಪ್ರತಿಮ ವೀರನ ಹೆಸರಿನಲ್ಲಿ ನೀಡುವ ಪ್ರಶಸ್ತಿ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ಉರಗ ತಜ್ಞ ಗುರುರಾಜ್ ಸನಿಲ್ ಅಭಿನಂದನಾ ಮಾತುಗಳಾಡಿದರು.ಉಡುಪಿ ಗಾಂಧಿ ಆಸ್ಪತ್ರೆ ಸಂಸ್ಥಾಪಕ ಡಾ. ಹರೀಶ್ಚಂದ್ರ ಶುಭ ಹಾರೈಸಿದರು.ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ಯು ವಿಶ್ವನಾಥ್ ಶಣೈ, ಜಿಲ್ಲಾ ಸಂಘಟನೆ ಕಾರ್ಯಾಧ್ಯಕ್ಷ ಕುಮಾರ್ ಪ್ರಸಾದ್, ಉಪಾಧ್ಯಕ್ಷ ಲಕ್ಷ್ಮಣ್ ಕೊಲ್ಕರ್, ಗೌರವಾಧ್ಯಕ್ಷ ಜನಾರ್ದನ್ ಕೊಡವೂರು ಮುಂತಾದವರು ಉಪಸ್ಥಿತರಿದ್ದರು.

ರಂಜನಿ ವಸಂತ್ ದೀಪ ಕರ್ಕಿ ಪ್ರಾರ್ಥಿಸಿದರು. ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಸತೀಶ್ ಕೊಡವೂರು ವಂದಿಸಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಗಾಯಕ ರಾಜೇಶ್ ಶಾನುಭಾಗ್ ಅವರಿಂದ ಗಾಯನ ನಡೆಯಿತು.ರಾಯಣ್ಣ ಮೂರ್ತಿಗೆ ಕ್ಷೀರಭಿಷೇಕ ಮತ್ತು ಪ್ರಶಸ್ತಿ ಪುರಸ್ಕೃತರ ಪರಿಚಯ ಸಾಕ್ಷಾ ಚಿತ್ರ ವಿಶೇಷವಾಗಿತ್ತು.

Related posts

ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತ: ಮಂಗಳೂರು ಹಾಪ್ ಕಾಮ್ಸ್ ಸಿಇಒ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ದುರ್ಮರಣ;

Voiceoftulunadu

ರೋಹನ್ ಕಾರ್ಪೊರೇಶನ್‌ನ ‘ಫ್ರೀಡಂ ಪ್ಯಾಲೆಟ್ 2026’ರ ಅಂತಿಮ ಸುತ್ತು : ರೋಹನ್ ಸಿಟಿಯಲ್ಲಿ ಯಶಸ್ವಿ;

Voiceoftulunadu

ಯುವಜನೋತ್ಸವ 2026 : ವೈಕುಂಠ ಬಾಳಿಗ ಕಾಲೇಜಿನ ಆತ್ಮಿಕಾ ಶ್ರಿಯಾನ್, ಮಾರ್ಕಸ್ ಗೆ ಬಹುಮಾನಮಹಾವಿದ್ಯಾಲಯದ ಆಡಳಿತ ಮಂಡಳಿಯಿಂದ ಅಭಿನಂದನೆ;

Voiceoftulunadu

Leave a Comment