ವರದಿ /ಚಿತ್ರ : ರೋನ್ಸ್ ಬಂಟ್ವಾಳ್
ಮುಂಬೈ : ಸಾಮಾಜಿಕ ಸೇವೆ ಹಾಗೂ ವೈಯಕ್ತಿಕ ಸಾಧನೆಗಳನ್ನು ಗುರುತಿಸಿ, ಪ್ರಭಾ ಸುವರ್ಣ ಅವರಿಗೆ 2026ರ ಅಕ್ಟೋಬರ್ 10ರಂದು ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ಸ್ ಸಮಾರಂಭದಲ್ಲಿ ಖ್ಯಾತ ಉದ್ಯಮಿಯಾಗಿರುವ ಹಾಗೂ ಹಾಲಿವುಡ್ ಆಕ್ವಾ ಪಾರ್ಕ್‌ನ ಮಾಲೀಕರಾದ ಶ್ರೀ ಮೊಹಮ್ಮದ್ ಎಲ್ ಮಸೂದ್ ಅವರು ಪ್ರಭಾ ಸುವರ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾಜಕ್ಕೆ ಪ್ರಭಾ ಸುವರ್ಣ ಅವರು ನೀಡಿರುವ ಕೊಡುಗೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದ್ದು, ಶಾಂತಿ, ಮಾನವೀಯತೆ, ಜಾಗತಿಕ ಏಕತೆ ಹಾಗೂ ದಯೆಯಂತಹ ಮೌಲ್ಯಗಳನ್ನು ಈ ಪ್ರಶಸ್ತಿ ಪ್ರತಿಬಿಂಬಿಸುತ್ತದೆ. ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯ ವ್ಯಕ್ತಿಗಳು ಹಾಗೂ ಸಾಧಕರನ್ನು ಈ ಸಮಾರಂಭದಲ್ಲಿ ಗೌರವಿಸಲಾಯಿತು.
ಪ್ರಭಾ ಸುವರ್ಣ ಅವರ ಈ ಹೆಮ್ಮೆಯ ಸಾಧನೆಗೆ ಮೈಲ್‌ಸ್ಟೋನ್ ಪೆಜೆಂಟ್ಸ್ ಅಭಿನಂದನೆ ಸಲ್ಲಿಸುತ್ತಾ ಇದ್ದೇವೆ. ಮುಂದಿನ ದಿನಗಳಲ್ಲಿಯೂ ಅವರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಸ್ಫೂರ್ತಿಯಾಗಲಿ ಹಾಗೂ ಮಾನವೀಯತೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸಲಿ ಎಂದು ವಾಯ್ಸ್ ಆಫ್ ತುಳುನಾಡು ವತಿಯಿಂದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.
