November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಆಯುಧ ಪೂಜೆ ;

ಬಂಟ್ವಾಳ :ನವರಾತ್ರಿ ಉತ್ಸವ ಅಂಗವಾಗಿ ಆಯುಧ ಪೂಜಾ ಕಾರ್ಯಕ್ರಮ ತಾಲೂಕು ಕಚೇರಿಯಲ್ಲಿ ನಡೆಯಿತು.ಅರ್ಚಕ ರಾಘವೇಂದ್ರ ಮಯ್ಯರಬೈಲ್ ಹಾಗೂ ಸಹಾಯಕ ಅರ್ಚಕರು ಪೂಜಾ ವಿಧಿ ವಿಧಾನ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಪೂಜಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಭಾಗವಹಿಸಿ ನವರಾತ್ರಿಯ‌ ಈ ಸಂದರ್ಭದಲ್ಲಿ ದುರ್ಗಾ ಮಾತೆ ಎಲ್ಲಾರಿಗೂ ಆರೋಗ್ಯ ಸಂಪತ್ತು, ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.

Related posts

ಉಡುಪಿ: ₹110 ಕೋಟಿ ನೂತನ ಜಿಲ್ಲಾ ಆಸ್ಪತ್ರೆಗೆ ಹಳೆಯ ಪರಿಕರ ವರ್ಗಾವಣೆ ವಿರೋಧ – ತುಳುನಾಡ ರಕ್ಷಣಾ ವೇದಿಕೆಯಿಂದ ಮನವಿ ;

Voiceoftulunadu

ಉಡುಪಿ: ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವೈಭವದ ವಾರ್ಷಿಕ ನೇಮೋತ್ಸವ

Voiceoftulunadu

ಜನರ ಜೇಬಿಗೆ ಮತ್ತೊಂದು ಹೊರೆ: KSRTC ಬಸ್ ದರ ಏರಿಕೆ ಬಹುತೇಕ ಫಿಕ್ಸ್;

Voiceoftulunadu

Leave a Comment