November 3, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸ್ತನ ಕ್ಯಾನ್ಸರ್ ಜಾಗೃತಿ ಮಾಸ: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಆಸ್ಪತ್ರೆಯ ವೈದ್ಯರಿಂದ ಅಕ್ಟೋಬರ್ ತಿಂಗಳಿಡೀ ಜಾಗೃತಿ ಉಪನ್ಯಾಸ ;

ವರದಿ /ಚಿತ್ರ: ಈ ಮೀಡಿಯಾ

ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಮಣಿಪಾಲ, ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಮತ್ತು ಪವರ್ ಗ್ರೂಪ್ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡ ಗುಲಾಬಿ ಬಣ್ಣದ ದೀಪಗಳಿಂದ ಬೆಳಗಿತು.

ಸಂಜೆ 6:30ಕ್ಕೆ ನಡೆದ ಗುಲಾಬಿ ದೀಪಾಲಂಕಾರ ಸಮಾರಂಭದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೆಡಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ, ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸುಲತಾಭಂಡಾರಿ, ಪ್ಯಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಮುಖ್ಯಸ್ಥೆ ಡಾ. ಅನುಜಾ, ಮಣಿಪಾಲ ಮಹಿಳಾ ಸಮಾಜದ ಉಪಾಧ್ಯಕ್ಷೆ ಹಾಗೂ ಇನ್ನರ್ ವೀಲ್ ಮಣಿಪಾಲದ ಜಿಲ್ಲಾ ಖಜಾಂಚಿ ಶ್ರೀಮತಿ ದೀಪಾ ಭಂಡಾರಿ ಮತ್ತು ಪವರ್ ಗ್ರೂಪ್ ಮಣಿಪಾಲದ ಕಾರ್ಯದರ್ಶಿ ಶ್ರೀಮತಿ ಸುಜಯಾ ಶೆಟ್ಟಿ ಉಪಸ್ಥಿತರಿದ್ದರು.

ಕ್ಯಾನ್ಸರ್ ವಿಭಾಗದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಈ ಉದ್ದೇಶಕ್ಕೆ ಕೈಜೋಡಿಸಿದ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.ವಿಶ್ವದಾದ್ಯಂತ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಸ್ತನ ಕ್ಯಾನ್ಸರ್ನ ಅನುಭವ ಪ್ರತಿಯೊಬ್ಬಭಿನ್ನವಾಗಿರುತ್ತದೆ ಎಂಬುದನ್ನು ಇದು ಗುರುತಿಸುತ್ತದೆ ಹಾಗೂ ಆರಂಭಿಕ ಪತ್ತೆಯಿಂದ ಚಿಕಿತ್ಸೆ ಮತ್ತು ಬೆಂಬಲದವರೆಗೆ ಪ್ರತಿಯೊಂದು ಹಂತದಲ್ಲೂ ಸಹಾನುಭೂತಿಯುತ, ಸಕಾಲಿಕ ಮತ್ತು ಸುಲಭವಾಗಿ ಲಭ್ಯವಾಗುವ ಆರೈಕೆಯ ಅಗತ್ಯವನ್ನು ಒತ್ತಿಹೇಳುತ್ತದೆ.

ಮಹಿಳೆಗೂಅಕ್ಟೋಬರ್ ತಿಂಗಳಿಡೀ ಆಸ್ಪತ್ರೆಯ ವೈದ್ಯರು ಜಾಗೃತಿ ಉಪನ್ಯಾಸಗಳನ್ನು ನಡೆಸಲಿದ್ದು, ಸ್ತನ ಸ್ವಯಂ ಪರೀಕ್ಷೆ, ಅಪಾಯಕಾರಿ ಅಂಶಗಳು ಹಾಗೂ ಆರಂಭಿಕ ಪತ್ತೆಯ ಮಹತ್ವದ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.

Related posts

ಕಾಪು ಜ್ಞಾನ ದೀಪ ಶಿಕ್ಷಕರ ಸಭೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ. ಕಾವು ಯೋಜನಾಧಿಕಾರಿಯವರ ಕಛೇರಿಯಲ್ಲಿ ನಡೆದ ಸಭೆ ;

Voiceoftulunadu

ಕನ್ನಡ ಸಂಘ ಸಾಂತಾಕ್ರೂಜ್ ಸಂಭ್ರಮಿಸಿದ ೮೦ನೇ ಸ್ವಾತಂತ್ರ ದಿನಾಚರಣೆಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಭಾವಿ ಪೀಳಿಗೆ ಸಿದ್ಧವಾಗಲಿ: ಸುಜಾತ ಆರ್.ಶೆಟ್ಟಿ ;

Voiceoftulunadu

ಸಾಂತಕ್ರೂಜ್ ; ಪ್ರಭಾತ್ ಕಾಲೊನಿ ಪ್ರೀಮಿಯರ್ ಲೀಗ್-2026 ಕ್ರಿಕೆಟ್ ಟೂರ್ನಮೆಂಟ್ಸಮಾಜ ಸೇವಕ ಶೇಖರ ಜೆ.ಸಾಲಿಯಾನ್‌ಗೆ ‘ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರಧಾನ:

voiceoftulunadu

Leave a Comment