November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನವಿದ್ಯಾರ್ಥಿ ಆಸರೆ : 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ ;

ವರದಿ/ ಚಿತ್ರ : ಈ ಮೀಡಿಯಾ

ಮೂಳೂರು: ನಮ್ಮಹಬ್ಬಗಳು ದೇಶದ ಅಸ್ಮಿತೆ, ಅಸ್ತಿತ್ವ, ಪ್ರತಿ ಹಬ್ಬಕ್ಕೂ ಅರ್ಥವಿದೆ. ಹಬ್ಬದ ಸಂಭ್ರಮದಲ್ಲೂ ಸಮಾಜ ಸೇವಾ ಕಾರ್ಯದ ಕೆಲಸದ ಮೂಲಕ ಟೀಂ ಮೂಳೂರು ಸಾರ್ಥಕತೆಯ ಕೆಲಸ ಮಾಡಿದೆ. ಇದರ ಜೊತೆಗೆ ಹುಲಿ ವೇಷ ತರಬೇತಿಯ ಮೂಲಕ ಸಂಸ್ಕೃತಿ ಉಳಿಸುವ ಕೆಲಸ ಮಾಡಿದೆ.

ಸಾಮರಸ್ಯ, ಸಮೃದ್ಧಿಯ ಕಾಪು ಮಾಡುವಲ್ಲಿ ಇಂತಹ ಯುವ ಸಂಘಟನೆಗಳ ಪಾತ್ರ ಮುಖ್ಯ. ಸಮಾಜಿಕ ಕಾರ್ಯಗಳು ಮಾರುತಿ ಮೂಳೂರು ತಂಡದಿಂದ ಆಗಲಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಮತ್ತಷ್ಟು ಟೀಮ್ಅವರು ಟೀಮ್ ಮಾರುತಿ ಮೂಳೂರು ಸಮಾಜ ಸೇವೆಯ ಉದ್ದೇಶಕ್ಕೆ ಹಮ್ಮಿಕೊಂಡಿರುವ ಪಿಲಿ ಪೆಜ್ಜೆ 5.0 ಅಂಗವಾಗಿ ಆಯೋಜಿಸಲಾಗಿದ್ದ ಊದು ಸೇವೆ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ವಿದ್ಯಾರ್ಥಿ ವೇತನ ವಿತರಣೆ : ವಿದ್ಯಾರ್ಥಿ ಆಸರೆ ಯೋಜನೆಯ ಮೂಲಕ 2 ಲಕ್ಷ 35 ಸಾವಿರ ರೂ. ಯನ್ನು ತಂದೆಯನ್ನು ತಾಯಿ ಅಥವಾ ಕಳೆದುಕೊಂಡುಪೋಷಕರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ದಿವ್ಯಾಂಗ ಒಟ್ಟು 92 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಈ ಕಾರ್ಯಗಳಿಗಾಗಿ ಸಮಾಜಮುಖಿ ಮಕ್ಕಳಿಂದ ಯುವಕರಾದಿಯಾಗಿ 31 ಜನರು ಹುಲಿ ವೇಷಧಾರಿಗಳಾಗಿದ್ದಾರೆ.

ಸನ್ಮಾನ : ಚೇತನ್ ಆಚಾರ್ಯ, ಜೀವನ್ ಪೂಜಾರಿ, ಆಂತ್ರಾ ಆನಂದ್ ಕೋಟ್ಯಾನ್, ಈಶ್ವರ್ ಮಲ್ಪೆಯವರನ್ನು ಸನ್ಮಾನಿಸಲಾಯಿತು.ಟೀಂ ಮಾರುತಿ ಬಳಗದ ಅಧ್ಯಕ್ಷ ಪ್ರಹಾರ್ ಅಧ್ಯಕ್ಷತೆ ವಹಿಸಿದ್ದರು..

ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಗಫೂರ್, ಮೂಳೂರು ಸರ್ವೇಶ್ವರ ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತಸರ ಮನೋಹರ ಅಡ್ಯಂತಾಯ, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊತ್ತೇಸರ ಮನೋಹರ್ ಎಸ್. ಶೆಟ್ಟಿ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿಶೆಟ್ಟಿ, ಗಣ್ಯರಾದ ಗೀತಾಂಜಲಿ ಸುವರ್ಣ, ಜನಾರ್ದನ ಕೆ. ಪುತ್ರನ್, ಪ್ರಕಾಶ್ ವಿ. ಅಂಚನ್, ಪ್ರಭಾಕರ ಪೂಜಾರಿ, ಶಿವಕುಮಾರ್ ಮೆಂಡನ್, ಚಂದ್ರಕಾಂತ ಮೆಂಡನ್, ಸೋನು ಪಾಂಗಾಳ, ಜಯ ಪೂಜಾರಿ ರಾಜಮನೆ, ಎಂ.ಎಚ್.ಬಿ ಮಹಮ್ಮದ್, ದಿನೇಶ್ ಎರ್ಮಾಳು, ಯಜೇಶ್ ಕರ್ಕೇರ, ಸಾಯಿನಾಥ್ ಶೆಟ್ಟಿ, ಸುಗುಣಾ ಕರ್ಕೇರ, ಪೂರ್ಣಿಮಾ ಡಿ. ಸುವರ್ಣ, ನಿತ್ಯಾನಂದ ಶೆಟ್ಟಿ, ಸಚಿನ್ ಸುವರ್ಣ, ಕಿರಣ್ ಕುಮಾರ್, ಯು.ಸಿ. ಶೇಖಬ್ಬ, ಪುರಸಭೆ ಸದಸ್ಯರಾದ ಸತೀಶ್ಚಂದ್ರ ಮೂಳೂರು, ಮಹಮ್ಮದ್ ಆಸಿಫ್, ಅರುಣ್ ಶೆಟ್ಟಿ ಪಾದೂರು, ದೇವರಾಜ್ ಕೋಟ್ಯಾನ್, ಅಮೀರ್ ಕಾಪು, ಹರಿಣಾಕ್ಷಿ ದೇವಾಡಿಗ, ಶೈಲೇಶ್ ಅಮೀನ್ ಹಾಗೂ ಟೀಂ ಮಾರುತಿ ತಂಡದ ಗಗನ್ ಮೆಂಡನ್, ಧೀರೇಶ್ ಮೂಳೂರು, ವಿಕಾಸ್ ಪೂಜಾರಿ, ಆಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಟೀಂ ಮಾರುತಿ ಬಳಗದ ಪ್ರಣವ್ ಪ್ರಸ್ತಾವನೆಗೈದರು. ಶ್ರೀನಿತ್ ಶೆಟ್ಟಿ ಮಾರ್ನಾಡ್, ಅನಿಲ್ ಕುಮಾರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

Related posts

ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ ಸಮಾಜ ಸೇವೆಯು ಹಣಕಾಸು ಸಂಸ್ಥೆಗಳಿಗೆ ಮಾದರಿ: ವಂ. ಫಾ. ಡೆನ್ನಿಸ್ ಡೇಸಾ;

Voiceoftulunadu

ಟ್ರೇಲರ್‌ನಲ್ಲೇ ಮನರಂಜನೆ ನೀಡಿದ ‘ಪಿಚ್ಚರ್’ ಆಗಸ್ಟ್ 7ರಂದು ತುಳು, ಕನ್ನಡದಲ್ಲಿ ಸಿನಿಮಾ ತೆರೆಗೆ ;

Voiceoftulunadu

ಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ” ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು;

Voiceoftulunadu

Leave a Comment