ವರದಿ / ಚಿತ್ರ: ಈ ಮೀಡಿಯಾ
ಪಡುಬಿದ್ರಿ : ಮಕ್ಕಳಿಂದಲೇ ಕ್ಷೇತ್ರವೆಂಬ ನಿರ್ಮಿತವಾದ ಪ್ರತೀತಿಯಿರುವ ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ಸಂಪನ್ನಗೊಂಡಿದ್ದು, ಪಡುಬಿದ್ರಿ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು.
ಪಡುಬಿದ್ರಿ ಬಾಲಗಣಪತಿ ದೇಗುಲದಲ್ಲಿ ಮೃಣ್ಮಯ ಮೂರ್ತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟುವಿ ಜ ಯ ದ ಶಮಿ ಯಂ ದು ಜಲಸ್ತಂಭನವಾಗುತ್ತದೆ.ಬಾಲಗಣಪತಿ ಕ್ಷೇತ್ರವು ಈ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸುಮಾರು 3 ಗಂಟೆಯ ಬಳಿಕ ಪೂಜಾ ವಿಧಿವಿಧಾನಗಳು ಜರಗಿ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಳ್ಳುತ್ತದೆ.
ಭಕ್ತರ ಹರಕೆಯಾಗಿ ರಂಗಪೂಜೆಯು ಇಲ್ಲಿನ ವಿಶೇಷತೆಯಾಗಿದೆ.ಶೋಭಾಯಾತ್ರೆಯಲ್ಲಿ ಭಜನಾ ತಂಡ, ವಿವಿಧ ವೇಷಗಳು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ಹುಲಿ ವೇಷ ತಂಡವು ಪಲ್ಲಕ್ಕಿಯಲ್ಲಿ ಹೊತ್ತ ಬಾಲಗಣಪತಿಯ ಮೂರ್ತಿಯೊಂದಿಗೆ ಸಾಗಿತು.ಈ ಸಂದರ್ಭ ಅರ್ಚಕ ಗಣಪತಿ ಭಟ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.
