November 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅದಾನಿಯಿಂದ ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಭೂಮಿ ಪೂಜೆ : ಭೂಮಿ ಪೂಜೆ ನೆರವೇರಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋ‌ರ್ ಆಳ್ವ ;

ವರದಿ /ಚಿತ್ರ : ಈ ಮೀಡಿಯಾ

ಪಲಿಮಾರು : ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿಕಾರ್ಯನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್-ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು ರೂ. 20 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಅದಾನಿ ಫೌಂಡೇಶನ್ ನ ವಾರ್ಷಿಕ ಸಿಎಸ್‌ಆರ್ ಕಾರ್ಯಕ್ರಮದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯಲ್ಲಿ ಪಲಿಮಾರು ಗ್ರಾ. ಪಂ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷರಾದಕಿಶೋರ್ ಆಳ್ವ ಅವರು ಪಲಿಮಾರು ಗ್ರಾಮ ಪಂಚಾಯತ್ ನಿವಾಸಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ ಸ್ಥಾವರದ ಸುತ್ತಮುತ್ತಲಿನ ೭ ಗ್ರಾಮ ಪಂಚಾಯತ್ಥಳಿಗೆ ವಿಶೇಷ ಅನುದಾನ ಮೀಸಲಿಟ್ಟಿದ್ದು, ಗ್ರಾಮ ಪಂಚಾಯತ್ ನೀಡುವ ವಾರ್ಷಿಕ ಕ್ರಿಯಾಯೋಜನೆ ಪ್ರಕಾರ ಅದಾನಿ ಫೌಂಡೇಶನ್ ಆಯಾ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

ಭೂಮಿ ಪೂಜೆ ಸಂದರ್ಭದಲ್ಲಿ ಪಲಿಮಾರು ಗ್ರಾ.ಪಂ. ಕಾರ್ಯದರ್ಶಿ ಸುಧಾಕರ್, ಅದಾನಿ ಫೌಂಡೇಶನ್ಸಿಬ್ಬಂದಿ ಅನುದೀಪ್ ಹಾಗೂ ಧೀರಜ್‌ ಉಪಸ್ಥಿತರಿದ್ದರು.

Related posts

ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ : ಡೈಜಿವರ್ಲ್ಡ್ ಟಿ.ವಿ, ಶ್ರೀದೇವಿನೃತ್ಯಾರಾಧನಾ ಸಹಯೋಗದ ಕಾರ್ಯಕ್ರಮ ;

Voiceoftulunadu

ಕಾಪು ಶ್ರೀ ಹಳೆ ಮಾರಿಯಮ್ಮಸಭಾಭವನದಲ್ಲಿ ನಡೆಯಲಿರುವ ಸ್ಪರ್ಧೆ.ಕಾಪುವಿನಲ್ಲಿ ಆ. 9ರಂದು ಯುವವಾಹಿನಿ ಟ್ರೋಫಿ ಚೆಸ್ ಪಂದ್ಯಾವಳಿ;

Voiceoftulunadu

ಶ್ರೀ ಲಕ್ಷ್ಮೀವರತೀರ್ಥತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ :ಉಡುಪಿ ಶ್ರೀ ರಾಘವೇಂದ್ರ ಮಠದ ಸನ್ನಿಧಾನದಲ್ಲಿ ನಡೆದ ಮಹೋತ್ಸವ;

Voiceoftulunadu

Leave a Comment