ವರದಿ / ಚಿತ್ರ: ಈ ಮೀಡಿಯಾ
ಉಡುಪಿ: ಎಂ ಜಿ ಎಂ ಕಾಲೇಜಿನಲ್ಲಿ ನಡೆದ ‘ನಡಿಗೆ – ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ’ ಎಂಬ ಪಾದರಕ್ಷೆಗಳ ಸಂಗ್ರಹ ಅಭಿಯಾನ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ಗ್ರೀನ್ ಸೋಲ್ಸ್ಥಾಪಕರಾದ ಫೌಂಡೇಶನ್ ಇದರ ಶ್ರೀಯಾಂಶ್ ಭಂಡಾರಿಯವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಭಿಯಾನದ ನೇತೃತ್ವ ವಹಿಸಿದ ನಿರೂಪಕ ಅವಿನಾಶ್ಕಾಮತ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಸಂಚಾಲಕರಾದ ರವಿರಾಜ್ ಹೆಚ್. ಪಿ, ಅಧ್ಯಕ್ಷರಾದ ಪ್ರೊ. ಶಂಕರ್, ಸಂಧ್ಯಾ ಶೆಣೈ ಮುಂತಾದವರು ಉಪಸ್ಥಿತರಿದ್ದರು.
