November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರೋಟರಿ ಸಾಂಸ್ಕೃತಿಕ ಸ್ಪರ್ಧೆ ‘ರಂಗ್ ತರಂಗ್ 2026’ರೋಟರಿ ಉಡುಪಿ, ರೋಟರಿ ಮಣಿಪಾಲ್ ಟೌನ್’ಗೆ ಜಂಟಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ ;

ವರದಿ/ ಚಿತ್ರ : ಈ ಮೀಡಿಯಾ

ಮಣಿಪಾಲ:ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ ರೋಟರಿ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ “ರಂಗ್ ತರಂಗ್”2026-27 ರಲ್ಲಿ ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ತಂಡಗಳು ಜಂಟಿಯಾಗಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿದೆ.

ಗಾಯನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರೊ. ಪ್ರಕಾಶ್ ಕಾಮತ್ ಪ್ರಥಮ, ಮಹಿಳೆಯರ ವಿಭಾಗದಲ್ಲಿ ರೊ. ವಿದ್ಯಾ ಶೆಣೈ, ದ್ವಿತೀಯ,ಯುಗಳ ಗೀತೆಯಲ್ಲಿ ರೊ. ವಿದ್ಯಾ ಶೆಣೈ ಮತ್ತು ಜೋನ್ ಗೌರವ ಕಾಮತ್ ಪ್ರಥಮ, ಏಕಪಾತ್ರಾಭಿನಯದಲ್ಲಿರೊ. ಡಾ. ಸುರೇಶ ಶೆಣೈ ಪ್ರಥಮ ಸ್ಥಾನವನ್ನು ಪಡೆದು ಜೋನಲ್ ಚಾಂಪಿಯನ್ಸ್ ಆಗಿದ್ದಾರೆ.

ಚಾಂಪಿಯನ್ಸ್ ಪ್ರಶಸ್ತಿಯನ್ನು ವಲಯ-4ರ ಸಹಾಯಕ ಗವರ್ನರ್ ರೊ. ಹೇಮಂತ್ .ಯು. ಕಾಂತ್ ಮತ್ತು ಜೋನಲ್ ಕಲ್ಬರಲ್ ಕೋಆರ್ಡಿನೇಟರ್ ಡಾ. ದೀಪಕ್ ರಾಮ್ ಬಾಯಾರಿಯವರು ರೋಟರಿ ಉಡುಪಿ ಅಧ್ಯಕ್ಷರಾದ ಜೆ. ಗೋಪಾಲಕೃಷ್ಣ ಪ್ರಭು ಮತ್ತು ರೋಟರಿ ಉಡುಪಿ ಸದಸ್ಯರಿಗೆ ನೀಡಿ ಗೌರವಿಸಿದರು.

Related posts

ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆದ ಸಭೆ;

Voiceoftulunadu

ಫಾರಂ-7 ಅರ್ಜಿಗಳ ದುರುಪಯೋಗ ವದಂತಿ : ಕಥೊಲಿಕ್ ಸಭಾದಿಂದ ಜಿಲ್ಲಾಧಿಕಾರಿಗೆ ಮನವಿ , ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ನೇತೃತ್ವದಲ್ಲಿ ಮನವಿ ;

Voiceoftulunadu

ಮೇ 24 ರಂದು ಮುಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾಡ್ಸ್೯ 2026

voiceoftulunadu

Leave a Comment