November 4, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸ

ಪ್ರತಿವರ್ಷ ಸೆ.18ರಂದು ‘ತುಳು ದಿನ’ ಆಚರಣೆ:ಸಚಿವ ಯು.ಟಿ. ಖಾದರ್ ಘೋಷಣೆ :

ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ
ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿ ದಿನವಾದ ಸೆ.18ರಂದು ಪ್ರತಿವರ್ಷ ‘ತುಳು ದಿನ’ (ತುಳು ದಿವಸ)ವನ್ನಾಗಿ ಎಂದು ಆಚರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದ‌ರ್ ಘೋಷಿಸಿದರು.

ನೆಹರು ಮೈದಾನದಲ್ಲಿ ರವಿವಾರ(ನ.1) ನಡೆದ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದ ಅವರು, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿಗೆ ದ.ಕ. ಮತ್ತು ಉಡುಪಿ ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡುವ ಮೂಲಕ ಈ ಭಾಗದ ಜನರ ಹಲವು ದಶಕಗಳ ಬೇಡಿಕೆ ಈಡೇರಿದೆ.

ತುಳುಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಪ್ರಕ್ರಿಯೆಗೆ ಇದು ಸಹಕಾರಿಯಾಗಿದೆ. ತುಳುವಿಗೆ ಅಧಿಕೃತ ಸ್ಥಾನ ಸಿಗಬೇಕು ಎಂಬ ತುಳುವರ ಬಹುಕಾಲದ ಬೇಡಿಕೆಯು ಈಡೇರಿದಂತಾಗಿದೆ ಎಂದು ತಿಳಿಸಿದರು.

Related posts

ಇಸ್ರೇಲ್ ಚುನಾವಣೆ: ಮತ ಖರೀದಿ, ಬೆದರಿಕೆ ಆರೋಪ: ಅರಬ್ ಪಕ್ಷಗಳ ವಿರುದ್ಧ ತನಿಖೆಗೆ ಲಿಕುಡ್ ಆಗ್ರಹ ;

Voiceoftulunadu

ಭಜನೋತ್ಸವ’ ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಡಾ. ನಿ.ಬೀ. ವಿಜಯ ಬಲ್ಲಾಳ್ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ‘ಭಜನೋತ್ಸವ-2026’ ಕ್ಕೆ ಚಾಲನೆ ;

Voiceoftulunadu

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

Voiceoftulunadu

Leave a Comment