November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೆಸಿಐ ಪಿಪಿಪಿ ಸುಹಾಸ್ ಮರಿಕೆ ಅವರು ಜೆಸಿಐ ಝೋನ್ 15 ಅಧ್ಯಕ್ಷರಾಗಿ ಆಯ್ಕೆ;

ವರದಿ / ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಮಂಗಳೂರು: ಜೆಸಿಐ ಪುತ್ತೂರು ಘಟಕದ ಜೆಸಿಐ ಪಿಪಿಪಿ ಸುಹಾಸ್ ಮರಿಕೆ* ಅವರು ಪ್ರತಿಷ್ಠಿತ ಜೆಸಿಐ ಇಂಡಿಯಾ, ಝೋನ್ 15 ರ 2027ನೇ ಸಾಲಿನ ವಲಯಾಧ್ಯಕ್ಷರಾಗಿ (Zone President) ಭರ್ಜರಿಯಾಗಿ ಆಯ್ಕೆಯಾಗಿದ್ದಾರೆ.

ಕಳೆದ ಅಕ್ಟೋಬರ್ 31 ಮತ್ತು ನವೆಂಬರ್ 1, 2026 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಜೆಸಿಐ ಝೋನ್ 15 ರ ವಾರ್ಷಿಕ ಮಹಾಸಮ್ಮೇಳನ Zone one – Aarya 2026 ನಲ್ಲಿ ಈ ಐತಿಹಾಸಿಕ ಆಯ್ಕೆ ನಡೆಯಿತು.ಈ ಸಮ್ಮೇಳನದಲ್ಲಿ 2026 ರ ವಲಯಾಧ್ಯಕ್ಷರ ವರದಿ, ವಿವಿಧ ಪ್ರಶಸ್ತಿ ಪ್ರದಾನ ಮತ್ತು ಮುಂದಿನ ನಾಯಕತ್ವದ ಆಯ್ಕೆ ನಡೆಯಿತು.

ಅಂತಿಮವಾಗಿ ಚುನಾವಣಾ ಪ್ರಕ್ರಿಯೆಯ ನಂತರ ಸುಹಾಸ್ ಮರಿಕೆ ಅವರು 2027 ರ ವಲಯಾಧ್ಯಕ್ಷರಾಗಿ ಆಯ್ಕೆಯಾದರು.*ಸುಹಾಸ್ ಮರಿಕೆ ಅವರ ಈ ಆಯ್ಕೆಯು JCI Zone 15 ನಲ್ಲಿ ಹೊಸ ನಾಯಕತ್ವದ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಪರಿಗಣಿಸಲಾಗಿದೆ.

ಸರಳತೆ, ಸ್ನೇಹಪರ ವ್ಯಕ್ತಿತ್ವ, ಸಮರ್ಥ ನಾಯಕತ್ವ ಹಾಗೂ ಸಂಘಟನಾ ಚತುರತೆಗೆ ಹೆಸರಾದ ಸುಹಾಸ್ ಮರಿಕೆ ಅವರ ನಾಯಕತ್ವದಲ್ಲಿ ವಲಯ 15 ಇನ್ನಷ್ಟು ಎತ್ತರಕ್ಕೆ ಏರಲಿ, ಇನ್ನಷ್ಟು ಸಾಧನೆ ಮಾಡಲಿ ಎಂದು ಜೆಸಿಐ ಉಡುಪಿ ಶಿವಳ್ಳಿ ಮತ್ತು ಎಲ್ಲಾ ಜೆಸಿಐ ಬಂಧುಗಳು ಹಾರ್ದಿಕವಾಗಿ ಶುಭ ಹಾರೈಸಿದ್ದಾರೆ!

Related posts

ತುಂಬೆ:ಅ.16, 17ರಂದು 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ;

Voiceoftulunadu

ಪಂಚವರ್ಣ ಆಸಾಡಿ ಒಡ್ಸ್‌ : ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ಆಯ್ಕೆಅಗಸ್ಟ್ ೯ ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu

ಉಡುಪಿ ಶ್ರೀ ಕೃಷ್ಣಮಠದಲ್ಲಿ ಸಂಭ್ರಮದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ : ಮೃಣ್ಮಯ ಮೂರ್ತಿ ಜಲಸ್ತಂಭನಗೊಳಿಸಿದ ಪರ್ಯಾಯ ಶೀರೂರು ಶ್ರೀಗಳು ;

Voiceoftulunadu

Leave a Comment