ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ
ಉಡುಪಿ : ಲಯನ್ಸ್ ಇಂಟರ್ನ್ಯಾಷನಲ್, ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್* ವತಿಯಿಂದ ನಡೆಯುವ ವಿಶ್ವಪ್ರಸಿದ್ಧ Peace Poster Contest 2026-27*ನೇ ಸಾಲಿನ ಸ್ಪರ್ಧೆ ದೊಡ್ಡಣಗುಡ್ಡೆಯ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರ್ಥಪೂರ್ಣವಾಗಿ ಜರಗಿತು.

ಈ ವರ್ಷದ ಥೀಮ್: “Harmony in Humanity” – ಮಾನವೀಯತೆಯಲ್ಲಿ ಸಾಮರಸ್ಯ*ಲಯನ್ಸ್ ಇಂಟರ್ನ್ಯಾಷನಲ್ ಪ್ರತಿ ವರ್ಷ ವಿಶ್ವದಾದ್ಯಂತ ನಡೆಸುವ ಈ ಸ್ಪರ್ಧೆಯು ಮಕ್ಕಳಲ್ಲಿ ಶಾಂತಿ, ಸಾಮರಸ್ಯ, ಮಾನವೀಯತೆ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ.

ಈ ನಿಟ್ಟಿನಲ್ಲಿ 11 ರಿಂದ 13 ವರ್ಷದ ಮಕ್ಕಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮ್ಮ ಕಲ್ಪನೆಯ ಬಣ್ಣಗಳ ಮೂಲಕ ಮಕ್ಕಳು “ಮಾನವೀಯತೆಯಲ್ಲಿ ಸಾಮರಸ್ಯ” ಎಂಬ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ವಿಶೇಷವಾಗಿತ್ತು.
ಸ್ಪರ್ಧಾ ವಿಜೇತರು : ಪ್ರಥಮ – ಸರಜೀತ್ ಮಂಡಲ್ (7ನೇ ತರಗತಿ),ದ್ವಿತೀಯ – ಸಾನಿಕಾ (6ನೇ ತರಗತಿ), ತೃತೀಯ – ದೀಕ್ಷಾ (5ನೇ ತರಗತಿ)ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕರಾದ ಶ್ರೀ ಶ್ರೀ ರಮಾನಂದ ಗುರೂಜಿ, ಕೋ-ಆರ್ಡಿನೇಟರ್ ಶ್ರೀಮತಿ ಕುಸುಮಾ ನಾಗರಾಜ್, ಪ್ರಾಂಶುಪಾಲೆ ಶ್ರೀಮತಿ ಉಷಾ ರಾಮಾನಂದ ಅವರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ವತಿಯಿಂದ ಅಧ್ಯಕ್ಷರಾದ ಸುಮಾಲಿನಿ ದಯಾನಂದ್, ಕಾರ್ಯದರ್ಶಿ ಅನುಪಮ ಜಯಕುಮಾರ್, ಕೋಶಾಧಿಕಾರಿ ರಮಾದೇವಿ, ಸದಸ್ಯರಾದ ದಯಾನಂದ, ವಿನೋದ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಶ್ರೀ ಶ್ರೀ ರಮಾನಂದ ಗುರೂಜಿ ಅವರನ್ನು ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಮಕ್ಕಳ ಸೃಜನಶೀಲತೆಗೆ ವೇದಿಕೆಯಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ಮೂಡಿಬಂದಿತು.
