28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸ್ಥಳೀಯ/ಪ್ರಾದೇಶಿಕ ಸುದ್ದಿ

ಆದಿಉಡುಪಿಯಲ್ಲಿ ಎಂ.ಜಿ. ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮ್ ಉದ್ಘಾಟನೆ : ಧರ್ಮದರ್ಶಿ ರಮಾನಂದ ಗುರೂಜಿ ದೀಪ ಬೆಳಗಿಸಿ ಉದ್ಘಾಟನೆ;

ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ

ಉಡುಪಿ: ನಗರದ ಆದಿಉಡುಪಿ ಸಾಯಿ ಅಪಾರ್ಟ್ಮೆಂಟ್ ಶಾಪ್ ನಂ. 6/9 ರಲ್ಲಿ ನೂತನವಾಗಿ ಆರಂಭಗೊಂಡಿರುವ ಎಂ.ಜಿ. ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮಿನ ಉದ್ಘಾಟನಾ ಸಮಾರಂಭವು ಆಗಸ್ಟ್ 15 ರಂದು ವಿಜೃಂಭಣೆಯಿಂದ ಜರುಗಿತು.ಕಾರ್ಯಕ್ರಮವನ್ನು ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ, ದೊಡ್ಡನಗುಡ್ಡೆಯ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ : ಈ ಶುಭ ಸಂದರ್ಭದಲ್ಲಿ ಪ್ರಮುಖ ಅತಿಥಿಗಳಾಗಿ ಜಯಕರ ಶೆಟ್ಟಿ ಬಡಗು ಬೆಟ್ಟು ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಕಿದಿಯೂರು ಸೊಸೈಟಿ ಅಧ್ಯಕ್ಷರು, ಸಮಾಜ ಸೇವಕರು ಮತ್ತು ರಾಜಕೀಯ ಮುಖಂಡರಾದ ಪ್ರಭಾಕರ್ ಪೂಜಾರಿ ಮಾಜಿ ನಗರಸಭಾ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಶ್ರೀಶಂ ಸೊಸೈಟಿ ಅಧ್ಯಕ್ಷರಾದ ವಿಜಯ ಕೊಡವೂರು ಮಾಜಿ ನಗರಸಭಾ ಸದಸ್ಯರಾದ ಗಿರಿಧರ ಆಚಾರ್ಯ , ಹಾಗೂ ಮಹಿಳಾ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಮಮತಾ ಶೆಟ್ಟಿ ಮತ್ತು ವಿದ್ಯಾಲತಾ ಶೆಟ್ಟಿ , ವಿನೋದ್ ಶೆಟ್ಟಿ ಪ್ರವರ್ತಕರು, ನಮ್ಮ ಉಡುಪಿ ಟಿವಿ ಹಾಗೂ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಕೇಂದ್ರೀಯ ಉಡುಪಿ ಜಿಲ್ಲಾ ಸಂಸ್ಥಾಪಕರಾದ ದಿನೇಶ್ ಕೆ. ಪೂಜಾರಿ ಮತ್ತು ರೂಪೇಶ್ ಸುವರ್ಣ ಉದ್ಯಮಿಗಳು ಸಂಸ್ಥೆಯ ಮಾಲಕರಾದ ವಿಜಯ ಶೆಟ್ಟಿ ಮತ್ತು ರಾಜೇಶ್ ಸುವರ್ಣ ಸೇರಿದಂತೆ ಹಲವಾರು ಗಣ್ಯರು, ಉದ್ಯಮಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.

ಶೋರೂಮ್ ವಿಶೇಷತೆ : ಆಧುನಿಕ ಎಲೆಕ್ಟ್ರಾನಿಕ್ಸ್ ಪರಿಕರಗಳು ಮತ್ತು ಗುಣಮಟ್ಟದ ಫರ್ನಿಚರ್ ಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ಶೋರೂಮ್ ಆರಂಭಿಸಲಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಮಂಜಸ ಬೆಲೆಯಲ್ಲಿ ನೀಡುವುದೇ ಸಂಸ್ಥೆಯ ಗುರಿ ಎಂದು ಮಾಲಕರಾದ ವಿಜಯ ಶೆಟ್ಟಿ ಅವರು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪೂಜಾ ಶೆಟ್ಟಿ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು. ಆಗಮಿಸಿದ ಎಲ್ಲಾ ಗಣ್ಯರು ಮತ್ತು ಅಭಿಮಾನಿಗಳಿಗೆ ಸಂಸ್ಥೆಯ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

Related posts

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಬಹರೈನ್ ಘಟಕದ ಅಧ್ಯಕ್ಷರಾಗಿ ಕಮಲಾಕ್ಷ ಅಮೀನ್ ನೇಮಕ;

Voiceoftulunadu

ಹಿಂದೂಗಳ ಧ್ವನಿ ಅಡಗಿಸುವ ಪ್ರಯತ್ನ ಖಂಡನೀಯ : ರಮಿತಾ ಸೂರ್ಯವಂಶಿ : ಪಂಜಿನ ಮೆರವಣಿಗೆಗೆ ಪುನೀತ್ ಅತ್ತಾವರ, ನರಸಿಂಹ ಮಾಣಿಯವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ;

Voiceoftulunadu

ಮದ್ಯಪ್ರಿಯರಿಗೆ ಬಿಗ್ ಶಾಕ್: ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ ಬ್ಯಾನ್;

Voiceoftulunadu

Leave a Comment