September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆ

ಇಂದು ಬಿಡುಗಡೆಯಾಗುತ್ತಿದ್ದಾಳೆ “ಈ ಶತಮಾನದ ಮಾದರಿ ಹೆಣ್ಣು” : ಬಿ ಆರ್ ಫಿಲ್ಮ್ ಐಕಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ಕಿರುಚಲನಚಿತ್ರ ;

ಬೆಂಗಳೂರು: ಪ್ರೀತಿ, ಸಂಬಂಧ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಒಳಗೊಂಡಿರುವ ‘ಈ ಶತಮಾನದ ಮಾದರಿ ಹೆಣ್ಣು’ ಕಿರುಚಿತ್ರವು ಇಂದು ಸಂಜೆ 5.30ಕ್ಕೆ BR FILM ICON ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.ಬಸವರಾಜ್ ಎಸ್. ನಂದಿ ನಿರ್ಮಿಸಿರುವ ಈ ಕಿರುಚಿತ್ರವನ್ನು ಶಿವಲಿಂಗ ಅಂಬಲಗಿ ನಿರ್ದೇಶಿಸಿದ್ದಾರೆ.

ನಾಯಕಿ ಪಾತ್ರದಲ್ಲಿ ಅಂಜಲಿ ಮಲ್ನಾಡ್ ಹಾಗೂ ನಾಯಕ ನಟನಾಗಿ ಸತೀಶ್ ಅಭಿನಯಿಸಿದ್ದಾರೆ.ಸಮ್ರಾಟ್ ಅಭಿ, ಪವನ್ ಕುಮಾರ್, ಪ್ರಶಾಂತ್, ಆದ್ಯಗೌಡ ಮತ್ತು ಓಂಕಾರ್ ಸಹ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರದ ಛಾಯಾಗ್ರಹಣವನ್ನು ಬಸವರಾಜ್ ನಂದಿ ನಿರ್ವಹಿಸಿದ್ದಾರೆ.

ಈ ಚಿತ್ರದ ಕಾರ್ಡಿನೇಟರ್ ಆಗಿ ಮಂಗಳೂರಿನ ಎಸ್ ಕೆ ಶೆಟ್ಟಿಯವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದು , ಮುಂದಿನ ದಿನಗಳಲ್ಲಿ ಇದೇ ತಂಡದ ಜೊತೆಗೆ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನು ಕೈಗೊಂಡಿದ್ದಾರೆ.

ಸಂಕಲವನ್ನು ಪ್ರಜ್ವಲ್ ಆರ್ ನಂದಿ ನಿರ್ವಹಿಸಿದ್ದಾರೆ.ಪ್ರೀತಿಯ ಹೆಸರಿನಲ್ಲಿ ಫೋನ್ ಮೂಲಕ ಯುವತಿಯರನ್ನು ಸಂಪರ್ಕಿಸಿ, ತಪ್ಪು ದಾರಿಯಲ್ಲಿ ಸಾಗುವ ಯುವಕರು ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ.

ಪ್ರೇಮಕಥೆಯ ಜೊತೆಗೆ ಸಮಾಜಕ್ಕೆ ಮಹತ್ವದ ಸಂದೇಶ ನೀಡುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.ಹಲವಾರು ಕಿರುಚಿತ್ರಗಳನ್ನು ನಿರ್ಮಿಸುತ್ತಿರುವ ಬಸವರಾಜ್ ಎಸ್. ನಂದಿ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ನಂದಿ ಫಿಲಂ ಸ್ಟುಡಿಯೋ ಅರ್ಪಿಸಿದೆ.

Related posts

ಮಂಗಳೂರಿನಲ್ಲಿ ಭಾರತ್ ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ಅವರ ವತಿಯಿಂದ ನಗರದ ವಲಸೆ ಕಾರ್ಮಿಕರು, ವ್ಯಾಪಾರಿಗಳು,ಮತ್ತು ವಿಧ್ಯಾರ್ಥಿಗಳಿಗೆ 5 ಕೆಜಿ ಎಫ್ ಟಿ ಎಲ್ ಶಿಬಿರ ಆಯೋಜನೆ

rohankotekar123@gmail.com

ಮಜಿ : ಕೆಸರ್‌ಡೊಂಜಿ ದಿನ ಕಾರ್ಯಕ್ರಮ ;

Voiceoftulunadu

ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್:

voiceoftulunadu

Leave a Comment