September 5, 2026
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಂಬಳದ ಗದ್ದೆಯಂತಾಗಿರುವ ಕೊಳಚಿಕಂಬಳ ರಸ್ತೆ : ಅಭಿವೃದ್ಧಿ ಕಡೆಗಣಿಸಿದಲ್ಲಿ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರಿಂದ ನಿರ್ಧಾರ ;

ವರದಿ /ಚಿತ್ರ: ಈ ಮೀಡಿಯಾ

ಮೂಲ್ಕಿ : ಸರ್ಫೀಂಗ್ ನಲ್ಲಿ ಮೂಲ್ಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ, ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ ಸರ್ಫೀಂಗ್ ಕ್ರೀಡೆಯನ್ನು ಆರಂಭಿಸಿರುವ ಮಂತ್ರ ಸರ್ಫೀಂಗ್ ಅನ್ನು ಹೊಂದಿರುವ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಕಟ್ಟದಂಗಡಿಯಿಂದ ಕೊಳಚಿಕಂಬಳ, ಪಡುಬೈಲುಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯು ಸಂಪೂರ್ಣ ಹದಗೆಟ್ಟಿದೆ.ಸುಮಾರು 2 ಕಿ.ಮಿ ರಸ್ತೆಯು ಸಂಪೂರ್ಣ ಕಿತ್ತು ಹೋಗಿ, ಅಲ್ಲಲ್ಲಿ ಹೊಂಡಗಳಿಂದ ರಸ್ತೆಯೆನ್ನುವ ಗದ್ದೆಯೆಂದು ತುಂಬಿದ್ದು ಬದಲಿಗೆ ಇದನ್ನು ಕಂಬಳದ ಕರೆಯುವಂತಾಗಿದೆ.

ಮೂಲ್ಕಿ ನಗರ ಪಂಚಾಯತ್ ಗೆ ಮೂರು ಮಂದಿ ಅಧ್ಯಕ್ಷರನ್ನು ನೀಡಿದ ಮೂಲ್ಕಿಯ ಬಪ್ಪನಾಡು ಗ್ರಾಮದ ವಾರ್ಡಿನ ಸದಸ್ಯರ ನಿರ್ಲಕ್ಷದಿಂದಾಗಿ ಕಳೆದ ಸುಮಾರು ಹಲವಾರು ವರ್ಷಗಳಿಂದ ಹಂತ, ಹಂತವಾಗಿ ಹೊಂಡಗಳು ಬಿದ್ದು ಇದೀಗ ಮಳೆ ಬಂದಾಗ ನೀರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ.ಮೂಲ್ಕಿಯ ಬಪ್ಪನಾಡು ದೇವಳಕ್ಕೆ ಸಂಬಂಧ ಪಟ್ಟ ಶ್ರೀ ಜಾರಂದಾಯದೈವಸ್ಥಾನ ಹೊಂದಿರುವ ಸುಮಾರು ಕೊಳಚಿಕಂಬಳದಲ್ಲಿ ನೂರಕ್ಕೂ ಮಿಕ್ಕಿ ಮನೆಗಳಿದ್ದು, ಇಲ್ಲಿ ಹೆಚ್ಚಿನವರು ಮೂಲ್ಕಿ ಸೇರಿದಂತೆ ದೂರದ ಪ್ರದೇಶಕ್ಕೆ ಉದ್ಯೋಗಕ್ಕೆ ತೆರಳುವವರು.

ಶಾಲೆಯ ಮಕ್ಕಳು ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ಫಿಂಗ್ ನಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಸಮುದ್ರ ತೀರ ಮತ್ತು ನದಿಯನ್ನು ಹೊಂದಿರುವ ಮಂತ್ರ ಸರ್ಫಿಂಗ್ ನಲ್ಲಿ ತರಬೇತಿ ಪಡೆಯಲು ದೇಶ, ವಿದೇಶಗಳಿಂದ ಹೆಚ್ಚಿನ ಜನರು ಬರುತ್ತಿದ್ದು, ಕೆಲವರು ತರಬೇತಿ ಮುಗಿಯುವ ತನಕ ಇಲ್ಲೆ ವಾಸವಾಗಿರುತ್ತಾರೆ.

ಇಲ್ಲಿಯ ರಸ್ತೆ ಅವ್ಯವಸ್ತೆಯಿಂದಾಗಿ ಅವರಿಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ಕೊಳಚಿಕಂಬಳ ಪ್ರದೇಶದಲ್ಲಿ ಶಾಂಭವಿ ನದಿ, ನಂದಿನಿ ನದಿ ಮತ್ತು ಅರಬ್ಬಿ ಸಮುದ್ರ ಸೇರುವ ಅಳಿವೆ ಪ್ರದೇಶವಿದ್ದು, ಪ್ರತಿ ದಿನ ಸಂಜೆ ಹೆಚ್ಚಿನ ಮಂದಿ ಅಳಿವೆಯ ಸೊಬಗನ್ನು ನೋಡಲು ಬರುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಈ ಪ್ರದೇಶದ ಬಗ್ಗೆ ಈ ವರೆಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸುತ್ತಿಲ್ಲ.

ನೀರಿನ ಕೊಳಚಿಕಂಬಳದ ಬಳಿ ಸಮುದ್ರದಲ್ಲಿ ಇಳಿತ ಸಂದರ್ಭದಲ್ಲಿ ನಡೆದುಕೊಂಡು ಸಸಿಹಿತ್ತು ಮುಂಡಾ ಬೀಚ್ ಹೋಗಲು ಸಾಧ್ಯವಿದ್ದು, ಹತ್ತಿರದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿ ಸಮೀಪದ ನಡಿಕುದ್ರು ಬಳಿ ಸಮುದ್ರ ತೀರದಲ್ಲಿ ಕಿರು ಬಂದರು ಆಗುತ್ತಿದ್ದು ಬಂದರಿನ ಕಾಮಗಾರಿ ನಡೆಯುತ್ತಿದೆ.ಮಳೆಗಾಲದ ಸಂದರ್ಭದಲ್ಲಿ ಕ ಟ್ಟದಂಗಡಿಯಿಂ ದ ಕೊಳಚಿಕಂಬಳದವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದ್ದು, ಜೊತೆಗೆ ನಡೆದುಕೊಂಡು ಹೋಗುವವರಿಗೆ ವಾಹನಗಳ ಹೆಸರು ನೀರಿನ ಸ್ಪರ್ಶವಾಗುತ್ತಿದೆ.

ಕೊಳಚಿಕಂಬಳ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ರಸ್ತೆಯ ದುರಸ್ತಿ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ. ರಸ್ತೆಯ ಅಭಿವೃದ್ಧಿಯನ್ನು ಕಡೆಗಣಿಸಿದಲ್ಲಿ ಮುಂದೆ ಬರುವ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

Related posts

ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ 48 ದಿನಗಳ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ: ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ;

Voiceoftulunadu

ಇ-ಪೇಪರ್

rohankotekar123@gmail.com

ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ : ಆ.16 ರಂದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ :

Voiceoftulunadu

Leave a Comment