November 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ : ಆಗ್ರಹ ಸರ್ಕಾರ ನಿರ್ಲಕ್ಷಿಸಿದರೆ ಜಿಲ್ಲಾದ್ಯಂತ ದಿನಕ್ಕೊಂದು ಶಾಲೆಯ ಎಂದು ಧರಣಿಯ ಬೆದರಿಕೆ ನೀಡಿದ ಸೇನೆ;

ವರದಿ /ಚಿತ್ರ : ಈ ಮೀಡಿಯಾ

ಉಡುಪಿ: ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿಯವರು ಸರಕಾರವನ್ನು ಆಗ್ರಹಿಸಿದ್ದಾರೆ.ಕನ್ನಡ – ಕನ್ನಡ-ಕನ್ನಡ ಎನ್ನುವ ಕರ್ನಾಟಕದ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಿಲ್ಲದ ಗತಿ ಉಂಟಾಗಿದೆ.

ಕನ್ನಡ ಎನ್ನುವ ಶಬ್ದವು ಶಾಶ್ವತವಾಗಿ ಉಳಿಯಲು ಕನ್ನಡ ಶಾಲೆಗಳಲ್ಲಿ ಕೂಡಲೇ ಎಲ್ಲಾ ಅಧ್ಯಾಪಕರ ನೇಮಕ ಆಗಲೇಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಯೊಂದು ಶಾಲೆ ಎದುರುಗಡೆ ಜಿಲ್ಲಾದ್ಯಂತ ದಿನಕ್ಕೆ ಒಂದು ಶಾಲೆಯಂತೆ ಧರಣಿ ಮಾಡುವುದಾಗಿಸುಜಯ ಪೂಜಾರಿಯವರು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಸಚಿವರಿಗೂ, ಶಿಕ್ಷಣಾಧಿಕಾರಿಗಳಿಗೂ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಕೂಡಲೆ ಎಲ್ಲಾ ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದ ಅವರು, ಆಂಗ್ಲ ಭಾಷೆಯ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕನ್ನಡ ಉಳಿಯಲೇಬೇಕು. ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕಾಗಿಯೂ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Related posts

ಉಡುಪಿ – ಉಚ್ಚಿಲ ದಸರಾ 2026: ಅ.18 ರಂದು ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ “ಅಬ್ಬರದ ಪಿಲಿ ಪಂಥ 2026 ಸೀಸನ್ 1” ರ ಪೋಸ್ಟರ್ ಬಿಡುಗಡೆಗೊಳಿಸಿದ ಉದ್ಯಮಿ ಯುವರಾಜ್ ಕಿದಿಯೂರು ;

Voiceoftulunadu

ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?|

voiceoftulunadu

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ರಾಜ್ಯಮಟ್ಟದಲ್ಲಿ ಕಾಪು ಯೋಜನಾ ಕಚೇರಿಗೆ ದ್ವಿತೀಯ ಸ್ಥಾನ ಅಭಿನಂದನಾ ಪತ್ರ ಸ್ವೀಕರಿಸಿದ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ;

Voiceoftulunadu

Leave a Comment