November 5, 2026
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ಬೀಚ್ ನಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮ: ಉಡುಪಿ ಜಿಲ್ಲಾಡಳಿತ, ಕಾಪು ಪುರ ಸಭೆ ಸಹಿತ ವಿವಿಧ ಸಂಸ್ಥೆಗಳ ಸಹಯೋಗ ;

ವರದಿ /ಚಿತ್ರ: ಈ ಮೀಡಿಯಾ

ಕಾಪು : ಉಡುಪಿ ಜಿಲ್ಲಾಡಳಿತ, ಕಾಪು ಪುರ ಸಭೆ, ಸ್ವಚ್ಚಂ ವಾಟರ್ ಅನ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಭಾನುವಾರ ಮುಂಜಾನೆ ಬೀಚ್ ಸ್ವಚ್ಚತಾ ಅಭಿಯಾನವನ್ನು ಕಾಪು ಬೀಚ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಕಾಪು ಬೀಚ್ ಸುತ್ತಮುತ್ತ ಇದ್ದಂತಹ ಪ್ರವಾಸಿಗರು ಎಸೆದಂತಹ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಾಪು ಪುರಸಭೆಗೆ ಹಸ್ತಾಂತರಿಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಕಾಪು ಪುರಸಭೆ ಮುಖ್ಯಧಿಕಾರಿ ನೀಲಕಂಠ ಮೇಸ್ತ, ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ,ಸಮುದಾಯ ಸಂಘಟನಾಧಿಕಾರಿಗಳಾದ ರತ್ನಾಕರ ಶೆಟ್ಟಿ ವಿದ್ಯಾಲತಾ, ನೂರುದ್ದಿನ್, ಉಮೇಶ್ ಕರ್ಕೇರ, ವಾಣಿ ಆಳ್ವಾ, ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷರು, ಸದಸ್ಯರುಗಳು, ಹಿರಿಯ ಆರೋಗ್ಯ ನಿರೀಕ್ಷಕರಾದ ಅನ್ವರ್ ಅಲಿ, ಸ್ವಚ್ಛಂ ಗ್ರೂಪ್ ಮಾಲಕರಾದ ತಾರಾನಾಥ್ ಮತ್ತು ಗುರುಪ್ರಸಾದ್, ಧನ್ಸಾಲ್ ಕೋಟ್ಯಾನ್, ಚಂದ್ರಶೇಖರ್ ಮೆಂಡನ್, ನಿತಿನ್, ಅಭಿಲಾಶ್ ಭಟ್ ಮತ್ತು ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಪ್ರಭಾ ಸುವರ್ಣ ಅವರಿಗೆ ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್ ಪ್ರಶಸ್ತಿ’ ಗೌರವ ;

Voiceoftulunadu

ನಾರಾಯಣಗುರು ತತ್ವಾದರ್ಶಗಳನ್ನು ಸರ್ವರಿಗೂ ತಲುಪಿಸಿ: ಪತ್ರಕರ್ತ ರಾಕೇಶ್ ಕುಂಜೂರು, ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಧಾರ್ಮಿಕ ಸಭೆ, ಸಮ್ಮಾನ ;

Voiceoftulunadu

ಮಂಗಳೂರು: ಕೇರಳ ಮೂಲದ ಚಿನ್ನ ವ್ಯಾಪಾರಿಯ ದರೋಡೆ, ಕಾರಿನೊಂದಿಗೆ ಪರಾರಿಸೋಮವಾರ ಮುಂಜಾನೆ ಪಣಂಬೂರು ಬಳಿಯ ಬೈಕಂಪಾಡಿಯಲ್ಲಿ ನಡೆದ ಘಟನೆ ;

Voiceoftulunadu

Leave a Comment