28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೆಥೋಲಿಕ್ ಸಭಾ ಉಡುಪಿ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ಸಂಘಟನೆಗಳಿಂದ ಸನ್ಮಾನ ಕೆಥೋಲಿಕ್ ಸಂಘಟನೆಯನ್ನು ಬಲಿಷ್ಠ ಗೊಳಿಸೋಣ : ವಂ. ಅನಿಲ್ ಡಿಸೋಜಾ ;

ವರದಿ /ಚಿತ್ರ : ಈ ಮೀಡಿಯಾ

ಉದ್ಯಾವರ : ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ. ಅನಿಲ್ ಡಿಸೋಜಾ ರವರು ಉಡುಪಿ ಧರ್ಮ ಪ್ರಾಂತ್ಯದ ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ, ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿ, ಅಭಿನಂದಿಸಿದೆ.

ಇತ್ತೀಚಿಗೆ ಮುಕ್ತಾಯ ಕಂಡ ನಿರಂತರ್ ಉದ್ಯಾವರ ನೇತೃತ್ವದ ನಿರಂತರ ಬಹುಭಾಷಾ ಸಿನಿಮಾ ಉತ್ಸವದ ಕೊನೆಯ ದಿನ ವಂ. ಅನಿಲ್ ಡಿಸೋಜಾ ರವರಿಗೆ ನಿರಂತರ್ ಉದ್ಯಾವರಸಂಘಟನೆಯ ವತಿಯಿಂದ ಉನ್ನತ ಹುದ್ದೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದಿಸಿ ಸನ್ಮಾನಿಸಿದೆ.

ಈ ಸಂದರ್ಭದಲ್ಲಿ ದಾಯ್ದಿ ವರ್ಲ್ಡ್ ಮಾಧ್ಯಮದ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಸಿನಿಮಾ ನಿರ್ದೇಶಕ ಸ್ಪ್ಯಾನಿ ಬೆಳಾ, ನಿರಂತರ್ ಅಧ್ಯಕ್ಷ ರೋಷನ್ ಕ್ರಾಸ್ಕೊ, ಪ್ರಮುಖರಾದ ಮೈಕಲ್ ಡಿಸೋಜ ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.ಕೆಥೋಲಿಕ್ ಸಭಾ ಉದ್ಯಾವರ ಘಟಕವು ತನ್ನ ಮಾಸಿಕ ಸಭೆಯಲ್ಲಿ ವಂ. ಅನಿಲ್ ಡಿಸೋಜಾ ರವರನ್ನು ಅಭಿನಂದಿಸಿ, ಸನ್ಮಾನಿಸಿದೆ.

ಅಭಿನಂದನೆ ಸ್ವೀಕರಿಸಿ ಮಾತನಾಡಿದಅಧ್ಯಾತ್ಮಿಕ ನಿರ್ದೇಶಕರು, ಕಥೋಲಿಕ್ ಸಭಾ ಸಂಘಟನೆಯನ್ನು ಬಲಿಷ್ಠ ಗೊಳಿಸುವಲ್ಲಿ ಎಲ್ಲರೂ ಜೊತೆಯಾಗಿ ಸಹಕರಿಸೋಣ ಎಂದರು.ಈ ಸಂದರ್ಭದಲ್ಲಿ ಕೇಂದ್ರೀಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಅಡ, ಮಾಜಿ ಅಧ್ಯಕ್ಷ ಮೇರಿ ಡಿಸೋಜಾ, ಕೆಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲುವಿಸ್, ಕಾರ್ಯದರ್ಶಿ ಉಷಾ ಲವೀನಾ ಲೋಬೊ, ನಿಯೋಜಿತ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷೆ ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.

Related posts

ಮಿಲಾಗ್ರೆಸ್ ಹೌಸ್, ಬಾಂದ್ರಾದಲ್ಲಿ ಮಾಡೆಲ್ ಬ್ಯಾಂಕ್‌ನ ಆಡಳಿತ ಕಚೇರಿ ಹಾಗೂ 26ನೇ ಶಾಖೆ ಉದ್ಘಾಟನೆ : ಸಹಕಾರವೇ ಎಲ್ಲರ ಅಭಿವೃದ್ಧಿಯ ಹಿಂದಿನ ಶಕ್ತಿ: ಆರ್ಚ್‌ಬಿಷಪ್ ಜಾನ್ ;

Voiceoftulunadu

ಪಂಚಮ ವರ್ಷದ ಉಡುಪಿ–ಉಚ್ಚಿಲ ದಸರಾ 2026: ಅದ್ಧೂರಿ ಆಚರಣೆಗೆ ಸಿದ್ಧತೆ.ದಸರಾ ಸಮಿತಿಯ ಪೂರ್ವಬಾವಿ ಸಭೆಯಲ್ಲಿ ನಾಡೋಜ ಡಾ. ಜಿ. ಶಂಕರ್ ಹೇಳಿಕೆ;

Voiceoftulunadu

ಉಡುಪಿ ಮಲಬಾ‌ರ್ ಗೋಲ್ನಲ್ಲಿ ‘ನಾಯ್ಕಾ’ನೂತನ ಸಂಗ್ರಹ ಅನಾವರಣ : ಅನಾವರಣ ಗೊಳಿಸಿದ ಬ್ರಿಂದಾ ನಿಹಾಲ್ ಪೂಜಾರಿ ಹಾಗೂ ತರನಾ ಶೆಟ್ಟಿ ;

Voiceoftulunadu

Leave a Comment