November 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪಡುಬಿದ್ರಿ: ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಯ್ಯದ್ ಶಫೀಯುಲ್ಲಾಹ್ ಮತ್ತು ಶಿಕ್ಷಕಿ ಪ್ರಮೀಳಾರವರಿಗೆ ಅಭಿನಂದನೆ ;

ವರದಿ /ಚಿತ್ರ: ಈ ಮೀಡಿಯಾ

ಪಡುಬಿದ್ರಿ: ಪಡುಬಿದ್ರಿಯ ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾದ ಶಿಕ್ಷಕರನ್ನು ಪಡುಬಿದ್ರಿಯ ವ್ಯವಸಾಯಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಗೌರವಿಸಲಾಯಿತು.ಶಾಲೆಯಲ್ಲಿ ಸುಮಾರು 31 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಸಯ್ಯದ್ ಶಫೀಯುಲ್ಲಾಹ್ ಹಾಗೂ ಶಿಕ್ಷಕಿ ಪ್ರಮೀಳಾ ಅವರನ್ನು ಹಿಮಾಯತುಲ್ ಇಸ್ಲಾಂ ಸಂಘ ಹಾಗೂ ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಹಿಮಾಯತುಲ್ ಇಸ್ಲಾಂ ಸಂಘದಸಾಹೇಬ್ ಅಧ್ಯಕ್ಷ ಬುಡಾನ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರಾಗಿ ಶಫಿಯುಲ್ಲಾ ಹಾಗೂ ಪ್ರಮೀಳಾ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದೆ. ತಮ್ಮ ಜ್ಞಾನ, ಅನುಭವ ಹಾಗೂ ಉತ್ತಮ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಮಾತನಾಡಿ, ಕೇವಲ ಪಠ್ಯ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಅವರನ್ನು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಜವಾಬ್ದಾರಿಯುತ ಹಾಗೂ ಉತ್ತಮಅವರು ಹೇಳಿದರು. ಪ್ರಜೆಗಳನ್ನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ ಎಂದುಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ.ಮೊಹಿಯುದ್ದಿನ್ ಅಧ್ಯಕ್ಷತೆ ವಹಿಸಿದ್ದರು.

ಇಸ್ಮಾಯಿಲ್ ಮಾಸ್ಟರ್, ನೂರಾನಿಯಾ ಮಸ್ಟಿದ್ದ ಕಾರ್ಯದರ್ಶಿ ಶುಕೂರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದ‌ರ್, ಉಪಾಧ್ಯಕ್ಷ ಹಸನ್ ಬಾವಾ, ಕೋಶಾಧಿಕಾರಿ ಅಕ್ಷ‌ರ್ ಪಿ.ಎಂ., ಸದಸ್ಯರು ಶಾಬಾನ್ ಪಡುಬಿದ್ರಿ, ದಾವೂದ್, ಝಹೀರ್, ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಪಿ.ಎ.ಅಬ್ದುಲ್ ರಹ್ಮಾನ್, ಶಿಕ್ಷಕಿ ರುಮಾನಾ ಉಪಸ್ಥಿರಿದ್ದರು.

Related posts

ಮಳೆ ಅನಾಹುತ: ಕಂಕನಾಡಿ ನಾಗುರಿಯಲ್ಲಿ ಮನೆ ಕುಸಿತ, ಮೂವರ ದುರ್ಮರಣ, ಮೂವರ ರಕ್ಷಣೆ ಈ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಸಹಾಯದ ಭರವಸೆ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್;

Voiceoftulunadu

ಉಡುಪಿಯ “ಸಂವಿಧಾನ ಅಂದು ಹಾಗೂ ಇಂದು” ಉಪನ್ಯಾಸಪ್ರಸಿದ್ಧ ಅಂಕಣ ಬರಹಗಾರ, ವಾಗ್ನಿ ರೋಹಿತ್ ಚಕ್ರತೀರ್ಥರಿಂದ ಉಪನ್ಯಾಸ;

Voiceoftulunadu

ಹೆಜಮಾಡಿ-ಪಡುಬಿದ್ರಿ ಟೋಲ್ ಸಮಸ್ಯೆ: ರಾಜ್ಯ ಸರ್ಕಾರದ ಗಮನಕ್ಕೆ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗದಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಗೆ ಮನವಿ;

Voiceoftulunadu

Leave a Comment