November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ: ಸಂಪನ್ಮೂಲ ವ್ಯಕ್ತಿ ಫುಲ್ ಸ್ಟಾಕ್ ಡೆವೆಲಪರ್ ಅಂಕಿತಾ ಆರ್ ಅವರಿಂದ ಮಾಹಿತಿ ;

ವರದಿ/ ಚಿತ್ರ: ಈ ಮೀಡಿಯಾ

ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಪಠ್ಯ ಚಟುವಟಿಕಾ ಘಟಕವು ಶನಿವಾರ ಸ್ಪರ್ಧಾತ್ಮಕ ಪರೀಕ್ಷೆ “ಗೇಟ್” ಕುರಿತು ಉಪನ್ಯಾಸವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು.IDYAITE Technology Solutions Pvt. Ltd ಮಂಗಳೂರು ಇಲ್ಲಿನ ಫುಲ್ ಸ್ಪ್ಯಾಕ್ ಡೆವೆಲಪರ್ ಆಗಿರುವ ಅಂಕಿತಾ ಆರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಇವರು ಮಾತನಾಡಿ, ಗೇಟ್ ಪರೀಕ್ಷೆ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಹತೆ, ಪರೀಕ್ಷಾ ಮಾದರಿ, ಪಠ್ಯಕ್ರಮ, ವೃತ್ತಿ ಅವಕಾಶಗಳು ಹಾಗೂ ತಯಾರಿ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ವ್ಯವಸ್ಥಿತ ತಯಾರಿ, ನಿಯಮಿತ ಪುನರಾವಲೋಕನ, ಮಾಕ್ಟೆಸ್ಟ್ ಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ, ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಸರ್ಕಾರಿ ಸೇವೆಗಳಲ್ಲಿ ದೊರೆಯುವ ಅವಕಾಶಗಳ ಕುರಿತು ವಿವರಿಸಿದ ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.

ಈ ಉಪನ್ಯಾಸವು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಲು ಪ್ರೇರಣೆ ನೀಡಿತು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತು.

Related posts

ಯುವವಾಹಿನಿ ಪಡುಬಿದ್ರಿ ಘಟಕದ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆ :ಆಗಸ್ಟ್ 30ರಂದು ಪದಗ್ರಹಣ, ಪ್ರತಿಭಾ ಪುರಸ್ಕಾರ, ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ;

Voiceoftulunadu

ಬೊಲಿವಿಯಾದ ಸೇನಾ ಶಿಬಿರದಲ್ಲಿ ಭಾರೀ ಸ್ಫೋಟ10 ಮಂದಿ ಸಾವು, 62ಕ್ಕೂ ಹೆಚ್ಚು ಜನರಿಗೆ ಗಾಯ — ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿ ;

Voiceoftulunadu

ಶಿರ್ಲಾಲು: ಭಾರತೀಯ ಜೈನ್ ಮಿಲನ್ ವತಿಯಿಂದ ಆಹಾರೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu

Leave a Comment